Airtel 3GB Data Plan: ದೇಶದ ಎರಡನೇ ದೊಡ್ಡ ಟೆಲಿಕಾಂ ಎನಿಸಿರುವ ಏರ್‌ಟೆಲ್ ಭಿನ್ನ ಬೆಲೆಯಲ್ಲಿ ಹಲವು ಪ್ರೀಪೇಯ್ಡ್ ಪ್ಲಾನ್‌ಗಳ ಆಯ್ಕೆ ನೀಡಿದೆ. ಬಹುತೇಕ ಗ್ರಾಹಕರು ದೈನಂದಿನ ಡೇಟಾ ಜೊತೆಗೆ ಉತ್ತಮ ವ್ಯಾಲಿಡಿಟಿ ಇರುವ ಯೋಜನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಮತ್ತೆ ಕೆಲವರು ಅಧಿಕ ದೈನಂದಿನ ಡೇಟಾ ಜೊತೆಗೆ ದೀರ್ಘಾವಧಿ ಮಾನ್ಯತೆ ಪಡೆದಿರುವ ಯೋಜನೆಗಳ ಆಯ್ಕೆ ಮಾಡುವರು. ಈ ನಿಟ್ಟಿನಲ್ಲಿ ಏರ್‌ಟೆಲ್ ಸಂಸ್ಥೆಯು ಪ್ರತಿದಿನ 3GB ಡೇಟಾ ಪ್ರಯೋಜನ ನೀಡುವ ಯೋಜನೆಗಳ ಆಯ್ಕೆಯನ್ನು ಬಳಕೆದಾರರಿಗೆ ಲಭ್ಯ ಮಾಡಿದೆ. ಹಾಗೆಯೇ ಈ ಯೋಜನೆಗಳು ಆಕರ್ಷಕ ವ್ಯಾಲಿಡಿಟಿ ಸೌಲಭ್ಯ ಸಹ ಪಡೆದುಕೊಂಡಿವೆ. ಹಾಗೆಯೇ ಓಟಿಟಿ ಚಂದಾದಾರಿಕೆಯನ್ನು ಒಳಗೊಂಡಿವೆ. ಹಾಗಾದರೆ ಪ್ರತಿದಿನ 3GB ಡೇಟಾ ಒದಗಿಸುವ ಭಾರ್ತಿ ಏರ್‌ಟೆಲ್ ಟೆಲಿಕಾಂನ ಅತ್ಯುತ್ತಮ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
Also Read : Eid ul Fitr 2026: ನಿಮ್ಮ ಆತ್ಮೀಯರಿಗೆ ರಂಜಾನ್ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಉತ್ತಮ ಸಂದೇಶಗಳು
ಭಾರ್ತಿ ಏರ್‌ಟೆಲ್ ಟೆಲಿಕಾಂನ 1798 ರೂಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೇ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 252GB Data ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಪ್ಲಾನಿನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ಲಭ್ಯ. ಹಾಗೆಯೇ 12 ತಿಂಗಳ ಅವಧಿಗೆ Adobe Express Premium ಚಂದಾದಾರಿಕೆ ಸೌಲಭ್ಯ ಸಿಗಲಿದೆ ಇದರೊಂದಿಗೆ ಫ್ರೀ ಹೆಲೋ ಟ್ಯೂನ್ ಸೇವೆಯು ದೊರೆಯುತ್ತದೆ.
ಭಾರ್ತಿ ಏರ್‌ಟೆಲ್ ಟೆಲಿಕಾಂನ 838 ರೂಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಪ್ರಯೋಜನ ಸಿಗುತ್ತದೆ. ಅಲ್ಲದೇ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB Data ಪ್ರಯೋಜನ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ.
ಹಾಗೆಯೇ ಭಾರ್ತಿ ಏರ್‌ಟೆಲ್‌ನ ಈ ಪ್ಲಾನಿನಲ್ಲಿ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ ಹಾಗೆಯೇ ಸೋನಿ ಲೈವ್, ಸನ್‌ನೆಕ್ಟ್ ಸೇರಿದಂತೆ ಸುಮಾರು 20 ಓಟಿಟಿ ಸದಸ್ಯತ್ವ ಲಭ್ಯ. ಹಾಗೆಯೇ 12 ತಿಂಗಳ ಅವಧಿಗೆ Adobe Express Premium ಚಂದಾದಾರಿಕೆ ಸೌಲಭ್ಯ ಸಿಗಲಿದೆ ಇದರೊಂದಿಗೆ ಫ್ರೀ ಹೆಲೋ ಟ್ಯೂನ್ ಸೇವೆಯು ದೊರೆಯುತ್ತದೆ.