Airtel ಟೆಲಿಕಾಂನ ಈ ಪ್ಲಾನ್‌ ರೀಚಾರ್ಜ್‌ ಮಾಡಿದ್ರೆ ಡೇಟಾ ಟೆನ್ಷನ್‌ ಇರಲ್ಲ!

Updated on 07-Feb-2026
HIGHLIGHTS

ಪ್ರತಿದಿನ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೆ Airtel ಟೆಲಿಕಾಂನ ಈ ಪ್ಲಾನ್‌ಗಳು ಸೂಕ್ತ

Airtel ಟೆಲಿಕಾಂನ ಈ ಮೂರು ರೀಚಾರ್ಜ್‌ ಪ್ಲಾನ್‌ಗಳಲ್ಲಿ 3GB ಡೇಟಾ ಖಚಿತ

Airtel ಕಂಪನಿಯ ಈ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್‌ ಕರೆ ಹಾಗೂ 100 SMS ಸೌಲಭ್ಯ ಲಭ್ಯ

ದೇಶದ ಎರಡನೇ ದೊಡ್ಡ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿರುವ Airtel ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಕೆಲವು ಆಕರ್ಷಕ ಯೋಜನೆಗಳ ಮೂಲಕ ಜಿಯೋ ಹಾಗೂ ವಿ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡಿದೆ. ಅವುಗಳ ಪೈಕಿ Airtel ಕಂಪನಿಯ ಪ್ರತಿದಿನ 3GB ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ. ಮುಖ್ಯವಾಗಿ ಪ್ರತಿದಿನ ಹೆಚ್ಚಿನ ಡೇಟಾ ಸೌಲಭ್ಯ ಬಯಸುವ ಗ್ರಾಹಕರ ಗಮನ ಸೆಳೆದಿವೆ. ಅಂದಹಾಗೆ ಈ ಪ್ಲಾನ್‌ಗಳಲ್ಲಿ ಡೇಟಾ ಪ್ರಯೋಜನದ ಜೊತೆಗೆ ಹೆಚ್ಚುವರಿ ಓಟಿಟಿ ಚಂದಾದಾರಿಕೆಯ ಸೌಲಭ್ಯಗಳು ಕೂಡಾ ಸಿಗುತ್ತವೆ. ಹಾಗಾದರೆ Airtel ಟೆಲಿಕಾಂನ ಪ್ರತಿದಿನ 3GB ಡೇಟಾ ಪ್ರಯೋಜನ ಒದಗಿಸುವ ರೀಚಾರ್ಜ್‌ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Motorola g57 power 5G ಜಬರ್ದಸ್ತ್‌ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯ; ಆಕರ್ಷಕ ಫೀಚರ್ಸ್‌ ಇವೆ

Airtel ಟೆಲಿಕಾಂನ 449ರೂಗಳ ಪ್ಲಾನ್ ಮಾಹಿತಿ

Airtel ಕಂಪನಿಯ 449 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಮಿಟೆಡ್‌ ಡೇಟಾ + 4GB Data ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಜಿಯೋ ಹಾಟ್‌ಸ್ಟಾರ್‌ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಒಂದು ವರ್ಷದ Adobe Premiere Express ಚಂದಾದಾರಿಕೆ ಸಹ ಲಭ್ಯ.

Airtel ಟೆಲಿಕಾಂನ 838ರೂಗಳ ಪ್ಲಾನ್ ಮಾಹಿತಿ

Airtel ಕಂಪನಿಯ 838 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB Data ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಇದರೊಂದಿಗೆ ಅಮೆಜಾನ್‌ ಪ್ರೈಮ್‌, ಸೋನಿ ಲೈವ್‌ ಸೇರಿದಂತೆ ಕೆಲವು ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ. ಹಾಗೆಯೇ ಒಂದು ವರ್ಷದ Adobe Premiere Express ಚಂದಾದಾರಿಕೆ ಸಹ ಲಭ್ಯ.

Airtel ಟೆಲಿಕಾಂನ 1798ರೂಗಳ ಪ್ಲಾನ್ ಮಾಹಿತಿ

Airtel ಕಂಪನಿಯ 1798 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಕೂಡಾ ಗ್ರಾಹಕರಿಗೆ ದೈನಂದಿನ 3GB Data ಪ್ರಯೋಜನ ದೊರೆಯುತ್ತದೆ. ಅಲ್ಲದೇ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌ ಬೇಸಿಕ್ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಒಂದು ವರ್ಷದ Adobe Premiere Express ಚಂದಾದಾರಿಕೆ ಸಹ ಲಭ್ಯ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :