Xiaomi 17
ದೈತ್ಯ ಶಿಯೋಮಿ ಸಂಸ್ಥೆಯು ತನ್ನ ನೂತನ Xiaomi 17 Ultra ಸ್ಮಾರ್ಟ್‌ಫೋನ್ ಅನ್ನು ಇಂದು (ಮಾರ್ಚ್ 11 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಮಾಡಿದೆ. ಈ ಫ್ಲ್ಯಾಗ್‌ಶಿಪ್ ಮೊಬೈಲ್ Snapdragon 8 Elite Gen 5 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರುವ ಜೊತೆಗೆ 200MP ಲೈಕಾ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಈ ಮೊಬೈಲ್ 6,000mAh ಬ್ಯಾಕ್‌ಅಪ್ ಒದಗಿಸುವ ಬ್ಯಾಟರಿ ಸಪೋರ್ಟ್ ಪಡೆದಿದೆ. ಈ ದೈತ್ಯ ಮೊಬೈಲ್ ಬ್ಲ್ಯಾಕ್ ಹಾಗೂ ವೈಟ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಾಗಾದರೆ ಶಿಯೋಮಿ 17 ಅಲ್ಟ್ರಾ ಸ್ಮಾರ್ಟ್‌ಫೋನ್‌ನ ಬೆಲೆ, ಮಾರಾಟ, ಫೀಚರ್ಸ್ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ನಾಳೆ Motorola Edge 70 Fusion ಮಾರಾಟ! ಇದು 7000mAh ಬ್ಯಾಟರಿ ಇರುವ ಫೋನ್
ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಶಿಯೋಮಿ 17 ಅಲ್ಟ್ರಾ ಮೊಬೈಲ್ ಈಗಾಗಲೇ ತನ್ನ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್ 16GB RAM + 512GB ಸ್ಟೋರೇಜ್ ಸಾಮರ್ಥ್ಯದ ಒಂದೇ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದ್ದು ಇದರ ಬೆಲೆ 1,39,999 ರೂಗಳು ಆಗಿದೆ. ಈ ನೂತನ ಮೊಬೈಲ್ ಇದೇ ಮಾರ್ಚ್ 18 ರಂದು Amazon ಮತ್ತು ಶಿಯೋಮಿ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಭಾರತದಲ್ಲಿ ಮಾರಾಟವಾಗಲಿದೆ. ಅಂದಹಾಗೆ ಈ ಫೋನ್ ಬ್ಲ್ಯಾಕ್ ಹಾಗೂ ವೈಟ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನಿನ early bird ಮಾರಾಟವು ಮಾರ್ಚ್ 13 ರಿಂದ ಪ್ರಾರಂಭವಾಗಿ ಮಾರ್ಚ್ 17 ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಗ್ರಾಹಕರು 19,999 ರೂಗಳ ಮೌಲ್ಯದ ಶಿಯೋಮಿ ಪ್ರೊಫೆಷನಲ್ ಫೋಟೋಗ್ರಫಿ ಕಿಟ್ ಪ್ರೊ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪಡೆಯಬಹುದು. SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರು 10,000 ರೂ.ಗಳ ಬ್ಯಾಂಕ್ ರಿಯಾಯಿತಿ ಪಡೆಯಬಹುದು.
ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಶಿಯೋಮಿ 17 ಅಲ್ಟ್ರಾ ಮೊಬೈಲ್ 6.9 ಇಂಚಿನ Xiaomi HyperRGB OLED ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್ 1,200×2,608 ಪಿಕ್ಸಲ್ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದ್ದು 3,500 nits ಬ್ರೈಟ್ನೆಸ್ ಸೌಲಭ್ಯ ನೀಡಲಾಗಿದೆ. ಈ ಮೊಬೈಲ್ ಆಕ್ಟಾ ಕೋರ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಪವರ್ ಜೊತೆಗೆ ಇದು ಆಂಡ್ರಾಯ್ಡ್ 16 ಆಧಾರಿತ Xiaomi HyperOS 3 ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ವೆಟ್ ಟಚ್ ತಂತ್ರಜ್ಞಾನ ಹೊಂದಿದ್ದು ಇದು ಬಳಕೆದಾರರಿಗೆ ಒದ್ದೆಯಾದ ಬೆರಳುಗಳಿಂದ ಮೊಬೈಲ್ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಶಿಯೋಮಿ 17 ಅಲ್ಟ್ರಾ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 200MP ಟೆಲಿಫೋಟೋ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇದರ ಸೆಕೆಂಡರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಲೆನ್ಸ್ ಹಾಗೂ ತೃತೀಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ಜೊತೆಗೆ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಹೊಂದಿದೆ. ಅಲ್ಲದೇ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಒಳಗೊಂಡಿದೆ.