Xiaomi 17 ಮತ್ತು Xiaomi 17 Ultra ಬಿಡುಗಡೆ! 200MP ಕ್ಯಾಮೆರಾ, 6,000mAh ಬ್ಯಾಟರಿ ಹೈಲೈಟ್ಸ್‌

HIGHLIGHTS

ಜಾಗತಿಕ ಮಾರುಕಟ್ಟೆಯಲ್ಲಿ ಶಿಯೋಮಿ 17 ಸರಣಿ ಅಧಿಕೃತವಾಗಿ ಬಿಡುಗಡೆ

ಶಿಯೋಮಿ 17 ಮೊಬೈಲ್‌ 100W ವೈರ್ಡ್ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ

ಶಿಯೋಮಿ 17 ಅಲ್ಟ್ರಾ ಮೊಬೈಲ್‌ ಮುಖ್ಯ ಕ್ಯಾಮೆರಾ 200MP ಸೆನ್ಸಾರ್‌ ಆಗಿದೆ

ಬಹುನಿರೀಕ್ಷಿತ Xiaomi 17 series ಇದೀಗ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಿದೆ. ಈ ಸರಣಿಯು ಎರಡು ಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದ್ದು ಅವುಗಳು ಕ್ರಮವಾಗಿ Xiaomi 17 ಮತ್ತು Xiaomi 17 Ultra ಆಗಿವೆ. ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್‌ನ ಉನ್ನತ ಶ್ರೇಣಿಯ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗೆಯೇ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮಾಡೆಲ್‌ಗಳು ಲೈಕಾ-ಟ್ಯೂನ್ಡ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಅಲ್ಲದೇ ಶಿಯೋಮಿ 17 ಅಲ್ಟ್ರಾ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಅನ್ನು ಸಹ ಒಳಗೊಂಡಿದೆ. ಹಾಗಾದರೆ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮೊಬೈಲ್‌ಗಳ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Samsung Galaxy F36 5G ಮೊಬೈಲ್‌ ಈಗ ಕಡಿಮೆ ಬೆಲೆಯಲ್ಲಿ ಲಭ್ಯ! ಖರೀದಿಗೆ ಯೋಗ್ಯವೇ?

Xiaomi 17 series ಬೆಲೆ ಮಾಹಿತಿ

ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮೊಬೈಲ್‌ಗಳು ಆಕರ್ಷಕ ಎನಿಸಿವೆ. ಶಿಯೋಮಿ 17 ಫೋನ್‌ 12GB RAM + 256GB ವೇರಿಯಂಟ್‌ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ EUR 999 (ಭಾರತದಲ್ಲಿ ಅಂದಾಜು 1,07,449 ರೂಗಳು) ಆಗಿದೆ. ಈ ಫೋನ್‌ ಆಲ್ಪೈನ್ ಪಿಂಕ್, ಕಪ್ಪು, ಐಸ್ ಬ್ಲೂ ಮತ್ತು ವೆಂಚರ್ ಗ್ರೀನ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯ. ಅದೇ ರೀತಿ ಶಿಯೋಮಿ 17 ಅಲ್ಟ್ರಾ ಫೋನಿನ 16GB RAM + 512GB ವೇರಿಯಂಟ್‌ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ EUR 1,499 (ಭಾರತದಲ್ಲಿ ಅಂದಾಜು 1,61,264 ರೂಗಳು) ಆಗಿದೆ. ಇನ್ನು ಈ ಫೋನ್‌ ಕಪ್ಪು, ಸ್ಟಾರ್‌ಲಿಟ್ ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

ಶಿಯೋಮಿ 17 ಮೊಬೈಲ್‌ ಫೀಚರ್ಸ್‌ ಮಾಹಿತಿ

ಹೊಸ ಶಿಯೋಮಿ 17 ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.3 ಇಂಚಿನ 1.5K OLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 3,500 nits ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ 2,656×1,220 ಪಿಕ್ಸಲ್‌ ರೆಸಲ್ಯೂಶನನ್ನು ಹೊಂದಿದೆ. ಹಾಗೆಯೇ ಈ ನೂತನ ಮೊಬೈಲ್‌ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿದೆ. ಅಲ್ಲದೇ 100W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,330mAh ಬ್ಯಾಟರಿ ಪವರ್‌ ಹೊಂದಿದೆ. ಈ ಫೋನ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅವುಗಳು ಕ್ರಮವಾಗಿ 50MP + 50MP + 50MP ಸೆನ್ಸಾರ್‌ ಪಡೆದಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್‌ ಹೊಂದಿದೆ.

ಶಿಯೋಮಿ 17 ಅಲ್ಟ್ರಾ ಫೋನಿನ ಫೀಚರ್ಸ್‌ ಮಾಹಿತಿ

ಹೊಸ ಶಿಯೋಮಿ 17 ಅಲ್ಟ್ರಾ ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.9 ಇಂಚಿನ 1.5K LTPO AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 1,060 nits ಪೀಕ್ ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 3 ರಕ್ಷಣೆ ಹೊಂದಿದೆ. ಹಾಗೆಯೇ ಈ ಹೊಸ ಮೊಬೈಲ್‌ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿದೆ. ಅಲ್ಲದೇ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಜೊತೆಗೆ 6,000mAh ಬ್ಯಾಟರಿ ಪಡೆದಿದೆ. ಹಾಗೆಯೇ 22.5W ನಲ್ಲಿ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಈ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಅನ್ನು ಹೊಂದಿದ್ದು ಅವುಗಳು ಕ್ರಮವಾಗಿ 200MP + 50MP + 50MP ಸೆನ್ಸಾರ್‌ ಒಳಗೊಂಡಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್‌ ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :