ಇದೇ ಮಾರ್ಚ್‌ 11 ರಂದು ಭಾರತದಕ್ಕೆ Xiaomi 17 ಸರಣಿ ಎಂಟ್ರಿ ಕೊಡಲಿದೆ! ಫೀಚರ್ಸ್‌ ನೋಡಿ

HIGHLIGHTS

ಮಾರ್ಚ್‌ 11 ರಂದು ಭಾರತದಲ್ಲಿ Xiaomi 17 ಸರಣಿ ಲಗ್ಗೆ ಇಡಲಿದೆ

ಈ ಸರಣಿ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮಾಡೆಲ್‌ ಒಳಗೊಂಡಿರಲಿದೆ

ಶಿಯೋಮಿ 17 ಅಲ್ಟ್ರಾ ಮಾಡೆಲ್‌ ಮುಖ್ಯ ಕ್ಯಾಮೆರಾ 200MP ಸೆನ್ಸಾರ್‌ ಆಗಿರಲಿದೆ

ಶಿಯೋಮಿ ಮೊಬೈಲ್‌ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ Xiaomi 17 series ಪರಿಚಯಿಸಿ ಸದ್ದು ಮಾಡುತ್ತಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ 17 ಸರಣಿಯನ್ನು ಲಾಂಚ್‌ ಮಾಡಲು ದಿನಾಂಕ ಫಿಕ್ಸ್‌ ಮಾಡಿದೆ. ಅಂದಹಾಗೆ ಈ ದೈತ್ಯ ಮೊಬೈಲ್‌ ಸರಣಿಯು ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮಾಡೆಲ್‌ಗಳನ್ನು ಒಳಗೊಂಡಿದೆ. ಈ ಎರಡೂ ಮೊಬೈಲ್‌ಗಳು ಮುಖ್ಯವಾಗಿ ಕ್ಯಾಮೆರಾದ ಮೇಲೆ ಹೆಚ್ಚು ಗಮನಹರಿಸುವ ಸಾಧ್ಯತೆಯಿದೆ. ಹೀಗಾಗಿ ಇವು Leica ಆಧಾರಿತ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿದೆ. ಅಲ್ಲದೇ ಇವು ಕ್ವಾಲ್ಕಾಮ್ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಪವರ್‌ ಪಡೆದಿವೆ. ಅಲ್ಲದೇ ಶಿಯೋಮಿ 17 ಅಲ್ಟ್ರಾ 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಅನ್ನು ಸಹ ಒಳಗೊಂಡಿದೆ. ಇನ್ನುಳಿದಂತೆ ಶಿಯೋಮಿ 17 ಮತ್ತು ಶಿಯೋಮಿ 17 ಅಲ್ಟ್ರಾ ಮೊಬೈಲ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Also Read : ಮನುಷ್ಯನಂತೆ ಕೇಳುವ, ಪ್ರತಿಕ್ರಿಯಿಸುವ Honor Robot Phone ಅನಾವರಣ! ಅಚ್ಚರಿ ಎನಿಸುವ ಫೀಚರ್ಸ್‌

Xiaomi 17 ಸರಣಿ ಭಾರತದಲ್ಲಿ ಈ ದಿನ ಬಿಡುಗಡೆ

ಇತ್ತೀಚಿಗೆ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಶಿಯೋಮಿ 17 ಸರಣಿಯು ಈಗ ದೇಶಿಯ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈ ಸರಣಿಯು ಇದೇ ಮಾರ್ಚ್ 11 ರಂದು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಶಿಯೋಮಿ 17 ಫೋನ್‌ 12GB RAM + 256GB ವೇರಿಯಂಟ್‌ ಪಡೆದಿರಬಹುದು. ಹಾಗೆಯೇ ಈ ಫೋನ್‌ ಆಲ್ಪೈನ್ ಪಿಂಕ್, ಕಪ್ಪು, ಐಸ್ ಬ್ಲೂ ಮತ್ತು ವೆಂಚರ್ ಗ್ರೀನ್ ಎಂಬ ನಾಲ್ಕು ಬಣ್ಣಗಳಲ್ಲಿ ಬರುವ ನಿರೀಕ್ಷೆ ಇದೆ. ಅದೇ ರೀತಿ ಶಿಯೋಮಿ 17 ಅಲ್ಟ್ರಾ ಫೋನ್‌ 16GB RAM + 512GB ವೇರಿಯಂಟ್‌ ಒಳಗೊಂಡಿರಬಹುದು. ಇನ್ನು ಈ ಫೋನ್‌ ಕಪ್ಪು, ಸ್ಟಾರ್‌ಲಿಟ್ ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಲಗ್ಗೆ ಇಡಬಹುದು ಎಂದು ನಿರೀಕ್ಷಿಸಲಾಗಿದೆ.

ಶಿಯೋಮಿ 17 ಮೊಬೈಲ್‌ ನಿರೀಕ್ಷಿತ ಫೀಚರ್ಸ್‌

ಹೊಸ ಶಿಯೋಮಿ 17 ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.3 ಇಂಚಿನ 1.5K OLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 3,500 nits ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ 2,656×1,220 ಪಿಕ್ಸಲ್‌ ರೆಸಲ್ಯೂಶನನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಮುಂಬರುವ ಈ ಮೊಬೈಲ್‌ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿರಲಿದೆ. ಅಲ್ಲದೇ 100W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,330mAh ಬ್ಯಾಟರಿ ಪವರ್‌ ಹೊಂದಿರಲಿದೆ. ಈ ಫೋನ್‌ ಹಿಂಬದಿಯಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅವುಗಳು ಕ್ರಮವಾಗಿ 50MP + 50MP + 50MP ಸೆನ್ಸಾರ್‌ ಪಡೆದಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್‌ ಹೊಂದಿರಲಿದೆ.

ಶಿಯೋಮಿ 17 ಅಲ್ಟ್ರಾ ಫೋನಿನ ನಿರೀಕ್ಷಿತ ಫೀಚರ್ಸ್‌

ಹೊಸ ಶಿಯೋಮಿ 17 ಅಲ್ಟ್ರಾ ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.9 ಇಂಚಿನ 1.5K LTPO AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಅಲ್ಲದೇ ಈ ಫೋನ್‌ ಸ್ಕ್ರೀನ್‌ 1,060 nits ಪೀಕ್ ಬ್ರೈಟ್ನೆಸ್‌ ಸಪೋರ್ಟ್‌ ಜೊತೆಗೆ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ 3 ರಕ್ಷಣೆ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಎಂಟ್ರಿ ಕೊಡಲಿರುವ ಈ ಮೊಬೈಲ್‌ Snapdragon 8 Elite Gen 5 SoC ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯ ಪಡೆದಿರಲಿದೆ. ಅಲ್ಲದೇ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಜೊತೆಗೆ 6,000mAh ಬ್ಯಾಟರಿ ಪಡೆದಿದೆ. ಹಾಗೆಯೇ 22.5W ನಲ್ಲಿ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಹೊಂದಿರಲಿದೆ. ಈ ಫೋನ್‌ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಅನ್ನು ಹೊಂದಿದ್ದು ಅವುಗಳು ಕ್ರಮವಾಗಿ 200MP + 50MP + 50MP ಸೆನ್ಸಾರ್‌ ಒಳಗೊಂಡಿರಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾ ಸಹ 50MP ಸೆನ್ಸಾರ್‌ ಹೊಂದಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :