Xiaomi 17 ಮತ್ತು Xiaomi 17 Ultra ಫೋನ್‌ಗಳ ಬೆಲೆ ಲೀಕ್‌! ಬೆಲೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ

Updated on 13-Feb-2026
HIGHLIGHTS

ಮುಂಬರುವ Xiaomi 17 ಮತ್ತು Xiaomi 17 Ultra ಮೊಬೈಲ್‌ಗಳ ಬೆಲೆ ಸೋರಿಕೆ

ಹಿಂದಿನ ಸರಣಿ ಫೋನ್‌ಗಳಿಗಿಂತ ದುಬಾರಿ ಬೆಲೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ

ಈ ಎರಡು ಮೊಬೈಲ್‌ಗಳು ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌ ಒಳಗೊಂಡಿರುವ ನಿರೀಕ್ಷೆಗಳು ಇವೆ

ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಮೊಬೈಲ್‌ ಸಂಸ್ಥೆಗಳು ಹೊಸ ಫೋನ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಈ ಸಾಲಿಗೆ ಇದೀಗ Xiaomi ಕಂಪನಿಯು ಹೊಸ ಫೋನ್‌ಗಳನ್ನು ಸೇರ್ಪಡೆ ಮಾಡಲು ತಯಾರಾಗಿದೆ. ಹೌದು, ಶಿಯೋಮಿ ಕಂಪನಿಯು ನೂತನವಾಗಿ ದೇಶಿಯ ಮಾರುಕಟ್ಟೆಗೆ Xiaomi 17 ಸರಣಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸರಣಿಯು Xiaomi 17 ಮತ್ತು Xiaomi 17 Ultra ಮಾಡೆಲ್‌ಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ. ಪ್ರೀಮಿಯಂ ರೇಂಜ್‌ನಲ್ಲಿ ಎಂಟ್ರಿ ಕೊಡಲಿರುವ ಈ ಸರಣಿ ಲಾಂಚ್‌ಗೂ ಮೊದಲೆ Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳ ಬೆಲೆ ಲೀಕ್‌ ಆಗಿವೆ. ಹಾಗಾದರೇ Xiaomi 17 ಮತ್ತು Xiaomi 17 Ultra ಫೋನ್‌ಗಳ ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Redmi Note 14 Pro Plus ಬೆಲೆ ಇಳಿಕೆ! ಸ್ಟೈಲಿಶ್‌ ಲುಕ್‌ನಲ್ಲಿ ಇರುವ ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ಒಳಗೊಂಡಿದೆ

Xiaomi 17 ಮತ್ತು Xiaomi 17 Ultra ಫೋನ್‌ಗಳ ನಿರೀಕ್ಷಿತ ಬೆಲೆ

ಶಿಯೋಮಿ ಸಂಸ್ಥೆಯಿಂದ Xiaomi 17 ಮತ್ತು Xiaomi 17 Ultra ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಟಿಪ್‌ಸ್ಟಾರ್‌ಗಳ ಲೀಕ್ ಮಾಹಿತಿಯಂತೆ Xiaomi 17 ಫೋನ್‌ 80,000 ರೂಗಳ ಪ್ರೈಸ್‌ಟ್ಯಾಗ್‌ ಹೊಂದಿರಬಹುದು ಎಂದು ಹೇಳಲಾಗಿದೆ. ಅದೇ ರೀತಿ Xiaomi 17 Ultra ಮೊಬೈಲ್‌ 1,25,000 ರೂಗಳ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಇವೆ ಎಂದು ಸೂಚಿಸುತ್ತವೆ. ಇವುಗಳ ನಿರೀಕ್ಷಿತ ಬೆಲೆ ನೋಡಿದರೆ ಈ ಎರಡು ಫೋನ್‌ಗಳು ಆಪಲ್‌ ಐಫೋನ್‌ 17 ಹಾಗೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಸರಣಿಯ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಇರುವಂತೆ ಅನಿಸುತ್ತದೆ.

Xiaomi 17 ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಶಿಯೋಮಿ ಸಂಸ್ಥೆಯ ಮುಂಬರುವ Xiaomi 17 ಮೊಬೈಲ್‌ 6.3 ಇಂಚಿನ OLED ಮಾದರಿಯ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್‌ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿರಲಿದೆ. ಇನ್ನು ಇದು Leica ಲೆನ್ಸ್ ಒಳಗೊಂಡ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದ್ದು ಇದರ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್‌ ಆಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಬರಲಿವೆ ಎನ್ನಲಾಗಿದೆ. ಅಂದಹಾಗೆ ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರಬಹುದು.

Xiaomi 17 Ultra ನಿರೀಕ್ಷಿತ ಫೀಚರ್ಸ್‌ ಹೀಗಿವೆ

Xiaomi ಮೊಬೈಲ್‌ ಸಂಸ್ಥೆಯ ನೂತನ Xiaomi 17 Ultra ಇದು 120Hz ರಿಫ್ರೆಶ್ ರೇಟ್ ಜೊತೆಗೆ ವಿಶಾಲ 6.9 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಈ ಮೊಬೈಲ್‌ ಕೂಡಾ ಕ್ವಾಲ್ಕಮ್‌ನ ಇತ್ತೀಚಿನ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇನ್ನು ಇದು Leica ಲೆನ್ಸ್ ಒಳಗೊಂಡ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದ್ದು ಇದರ ಮುಖ್ಯ ಕ್ಯಾಮೆರಾವು 200MP ಟೆಲಿಫೋಟೋ ಸೆನ್ಸಾರ್‌ ಆಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ 50MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಬರಲಿವೆ ಎನ್ನಲಾಗಿದೆ. ಅಂದಹಾಗೆ ಈ ಫೋನ್‌ 6,800mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಸಪೋರ್ಟ್‌ ಪಡೆದಿರಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :