ಸದ್ದಿಲ್ಲದೆ Vivo Y21 5G ಮತ್ತು Vivo Y11 5G ಭಾರತದಲ್ಲಿ ಬಿಡುಗಡೆ! ಬೆಲೆ ಹಾಗೂ ಲಭ್ಯತೆ

HIGHLIGHTS

ವಿವೋದ ಈ ಎರಡು ಮೊಬೈಲ್‌ಗಳು 6,500mAh ಬ್ಯಾಟರಿ ಪಡೆದುಕೊಂಡಿವೆ

ವಿವೋದ ಈ ಹೊಸ ಫೋನ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಪ್ರೊಸೆಸರ್‌ ಹೊಂದಿವೆ

ಈ ಹೊಸ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯು 120Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡಿವೆ

ವಿವೋ ಸಂಸ್ಥೆಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸದಾಗಿ Vivo Y21 5G ಮತ್ತು Vivo Y11 5G ಸ್ಮಾರ್ಟ್‌ಫೋನ್‌ಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6000 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿವೆ. ಹಾಗೆಯೇ ಈ ಎರಡು ಹೊಸ ಫೋನ್‌ಗಳು 6,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿವೆ. ವಿವೋ Y21 5G ಷಾಂಪೇನ್ ಗೋಲ್ಡ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆ ಹೊಂದಿದೆ. ಹಾಗೆಯೇ ವಿವೋ Y11 5G ಮೊಬೈಲ್‌ ಮಿಡ್‌ನೈಟ್ ಬ್ಲೂ ಮತ್ತು ಸನ್‌ರೈಸ್ ಗೋಲ್ಡ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಹಾಗಾದರೆ ವಿವೋ Y21 5G ಹಾಗೂ ವಿವೋ Y11 5G ಮೊಬೈಲ್‌ಗಳ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 859 ರೂ.ಗಳ ಈ Recharge Plan ನಲ್ಲಿ 84 ದಿನಗಳ ವ್ಯಾಲಿಡಿಟಿ ಹಾಗೂ 126GB ಡೇಟಾ

Vivo Y21 5G ಮತ್ತು Vivo Y11 5G ಬೆಲೆಯ ಮಾಹಿತಿ

ಮಾರುಕಟ್ಟೆ ಪ್ರವೇಶಿಸಿರುವ ವಿವೋ Y21 5G ಹಾಗೂ ವಿವೋ Y11 5G ಮೊಬೈಲ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್‌ ಪಡೆದಿದ್ದು ಈ ಮೂಲಕ ಗ್ರಾಹಕರ ಗಮನ ಸೆಳೆದಿವೆ. ವಿವೋ Y21 5G ಮೊಬೈಲ್‌ನ ಆರಂಭಿಕ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 18,999 ರೂಗಳು ಆಗಿದೆ. ಹಾಗೆಯೇ 6GB + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 20,999 ರೂಗಳು ಆಗಿದೆ. ಅದೇ ರೀತಿ 8GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 22,999 ರೂ.ಗಳು ಆಗಿದೆ. ಗ್ರಾಹಕರು ಆಯ್ದ ಬ್ಯಾಂಕ್ಗಳ ಕಾರ್ಡ್‌ ಮೂಲಕ ಖರೀದಿಸಿದರೆ 1,500 ರೂ.ಗಳ ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇನ್ನು ಈ ಫೋನ್‌ ಷಾಂಪೇನ್ ಗೋಲ್ಡ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯ.

ಹಾಗೆಯೇ ವಿವೋ Y11 5G ಮೊಬೈಲ್‌ನ ಆರಂಭಿಕ 4GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 14,999 ರೂಗಳು ಆಗಿದೆ. ಹಾಗೆಯೇ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 16,999 ರೂಗಳು ಆಗಿದೆ. ಗ್ರಾಹಕರು ಆಯ್ದ ಬ್ಯಾಂಕ್ಗಳ ಕಾರ್ಡ್‌ ಮೂಲಕ ಖರೀದಿಸಿದರೆ 1,000 ರೂ.ಗಳ ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇನ್ನು ಈ ಫೋನ್‌ ಮಿಡ್‌ನೈಟ್ ಬ್ಲೂ ಮತ್ತು ಸನ್‌ರೈಸ್ ಗೋಲ್ಡ್ ಕಲರ್‌ಗಳ ಆಯ್ಕೆಯಲ್ಲಿ ಲಭ್ಯ. ಇನ್ನು ಈ ಎರಡು ಫೋನ್‌ಗಳು ವಿವೋ ವೆಬ್‌ಸೈಟ್ ಮತ್ತು ಇತರ ರಿಟೇಲ್‌ ಸ್ಟೋರ್‌ಗಳ ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿವೆ.

ಈ ಎರಡು ಫೋನ್‌ಗಳ ಫೀಚರ್ಸ್‌ ಹೀಗಿವೆ

ವಿವೋ Y21 5G ಹಾಗೂ ವಿವೋ Y11 5G ಈ ಎರಡೂ ಮೊಬೈಲ್‌ಗಳು 6.74 ಇಂಚಿನ HD+ LCD ಟಚ್‌ಸ್ಕ್ರೀನ್‌ಗಳನ್ನು ಹೊಂದಿವೆ. ಹಾಗೆಯೇ 120Hz ವರೆಗೆ ರಿಫ್ರೆಶ್ ರೇಟ್‌ ಮತ್ತು 1200 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಅನ್ನು ಪಡೆದಿವೆ. ಇದರೊಂದಿಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿವೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಈ ಮೊಬೈಲ್‌ಗಳು IP65 ರೇಟಿಂಗ್‌ ಸೌಲಭ್ಯ ಸಹ ಪಡೆದುಕೊಂಡಿವೆ.

ಹಾಗೆಯೇ ಈ ಫೋನ್‌ಗಳು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ವಿವೋ Y21 5G ಫೋನ್‌ 50MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಹೊಂದಿದ್ದು, ವಿವೋ Y11 5G ಮೊಬೈಲ್‌ 13MP ಮುಖ್ಯ ಕ್ಯಾಮೆರಾ ಸೆನ್ಸಾರ್‌ ಪಡೆದುಕೊಂಡಿದೆ. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಎರಡು ಫೋನ್‌ಗಳು 5 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿವೆ. ಹಾಗೆಯೇ ಈ ಫೋನ್‌ಗಳು 6,500mAh ಬ್ಯಾಟರಿ ಪಡೆದುಕೊಂಡಿವೆ. ಇದಕ್ಕೆ ಪೂರಕವಾಗಿ ವಿವೋ Y21 5G 44W ಫಾಸ್ಟ್‌ ಚಾರ್ಜಿಂಗ್ ಹೊಂದಿದ್ದು, ವಿವೋ Y11 5G ಫೋನ್‌ 15W ವೈರ್ಡ್ ಚಾರ್ಜಿಂಗ್‌ ಬೆಂಬಲ ಪಡೆದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :