Vivo Y51 Pro 5G launched in India with 7200mAh battery
ವಿವೋ ಮೊಬೈಲ್ ಕಂಪನಿಯು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸದ್ದು ಮಾಡಿದೆ. ಸಂಸ್ಥೆಯ ಹಲವು ಫೋನ್‌ಗಳು ಟ್ರೆಂಡಿಂಗ್‌ನಲ್ಲಿವೆ. ಆದರೆ ಇದೀಗ ವಿವೋ ಕಂಪನಿಯ Vivo Y51 Pro 5G, Vivo Y21, Vivo Y11, Vivo Y31 5G ಮತ್ತು Vivo Y19s ಈ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದ್ದು ಗ್ರಾಹಕರು ಅಚ್ಚರಿಯಿಂದ ನೋಡುವಂತಾಗಿದೆ. ವಿವೋ ಮೊಬೈಲ್ ಕಂಪನಿಯು ಈ ಫೋನ್‌ಗಳ ಬೆಲೆಯನ್ನು ಪರಿಷ್ಕರಣೆ ಮಾಡಿದೆ. ಈ ಮೊಬೈಲ್‌ಗಳ ಮಾಡೆಲ್ ಆದರಿಸಿ 1,000 ರೂ.ಗಳಿಂದ 3,000 ರೂ.ಗಳ ಏರಿಕೆ ಮಾಡಲಾಗಿದೆ. ಹಾಗಾದರೆ ವಿವೋ ಕಂಪನಿಯ ಈ Y ಸರಣಿಯ ಸ್ಮಾರ್ಟ್‌ಫೋನ್‌ಗಳ ಹೊಸ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Vivo T4 Lite 5G ಸ್ಮಾರ್ಟ್‌ಫೋನ್ ಈಗ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ! ಆಫರ್ ಬೆಲೆ ನೋಡಿ
ಭಾರತದಲ್ಲಿ ವಿವೋ ಸಂಸ್ಥೆಯ Y ಸರಣಿಯ ಕೆಲವು ಫೋನ್‌ಗಳ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಆ ಪೈಕಿ ಕಂಪನಿಯ Vivo Y51 Pro 5G ಮೊಬೈಲ್‌ನ 8GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 30,999 ರೂ.ಗಳು ಆಗಿದ್ದರೆ, ಹೊಸ ಬೆಲೆ 32,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 33,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್ 37,999 ರೂ.ಗಳು ಆಗಿದೆ.
ವಿವೋ ಸಂಸ್ಥೆಯ Y ಸರಣಿಯ Vivo Y31 5G ಮೊಬೈಲ್‌ನ 6GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 25,999 ರೂ.ಗಳು ಆಗಿದ್ದರೆ, ಹೊಸ ಬೆಲೆ 27,999 ರೂ.ಗಳು ಆಗಿದೆ. ಇನ್ನು 6GB + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 28,999 ರೂ.ಗಳು ಆಗಿದ್ದರೆ, ಹೊಸ ಬೆಲೆ 31,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಹಾಗೆಯೇ ವಿವೋ ಕಂಪನಿಯ Y ಸರಣಿಯ Vivo Y21 ಸ್ಮಾರ್ಟ್‌ಫೋನಿನ 4GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 20,999 ರೂ.ಗಳು ಆಗಿದ್ದರೆ, ಹೊಸ ಬೆಲೆ 22,499 ರೂ.ಗಳು ಆಗಿದೆ. ಇನ್ನು 6GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 23,999 ರೂ.ಗಳು ಆಗಿದ್ದರೆ, ಹೊಸ ಬೆಲೆ 26,499 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಅದೇ ರೀತಿ ವಿವೋ ಕಂಪನಿಯ Y ಸರಣಿಯ Vivo Y11 ಸ್ಮಾರ್ಟ್‌ಫೋನಿನ 4GB + 64GB ಸ್ಟೋರೇಜ್ ವೇರಿಯಂಟ್ ಹಳೆಯ ದರ 16,999 ರೂ.ಗಳು ಆಗಿದ್ದರೆ, ಹೊಸ ಬೆಲೆ 17,999 ರೂ.ಗಳು ಆಗಿದೆ. ಇನ್ನು 4GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 18,999 ರೂ.ಗಳು ಆಗಿದ್ದರೆ, ಹೊಸ ಬೆಲೆ 20,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಇನ್ನು ವಿವೋ ಕಂಪನಿಯ Y ಸರಣಿಯ Vivo Y19s ಸ್ಮಾರ್ಟ್‌ಫೋನಿನ 4GB + 64GB ಸ್ಟೋರೇಜ್ ವೇರಿಯಂಟ್ ಹಳೆಯ ದರ 16,499 ರೂ.ಗಳು ಆಗಿದ್ದರೆ, ಹೊಸ ಬೆಲೆ 17,499 ರೂ.ಗಳು ಆಗಿದೆ. ಇನ್ನು 4GB + 128GB ಸ್ಟೋರೇಜ್ ವೇರಿಯಂಟ್ ಹಳೆಯ ದರ 18,999 ರೂ.ಗಳು ಆಗಿದ್ದರೆ, ಹೊಸ ಬೆಲೆ 20,999 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.