ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ Vivo ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಯು ತನ್ನ ಹೊಸ Vivo V70 ಸ್ಮಾರ್ಟ್‌ಫೋನ್ ಅನ್ನು ಇಂದು (ಫೆಬ್ರವರಿ 19 ರಂದು) ಭಾರತದಲ್ಲಿ ಲಾಂಚ್ ಮಾಡಿದೆ. ಈ ಮೊಬೈಲ್ Snapdragon 7 Gen 4 ಪ್ರೊಸೆಸರ್ ಪವರ್ ಪಡೆದುಕೊಂಡಿರುವ ಜೊತೆಗೆ 50MP Zeiss ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿರುವ ಈ ಫೋನ್ ಎರಡು ಆಕರ್ಷಕ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗೆಯೇ ಈ ಮೊಬೈಲ್ 3D ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಬೆಂಬಲ ಪಡೆದಿದೆ. ಹಾಗಾದರೇ Vivo V70 ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ನಾಳೆ Tecno ಕಂಪನಿಯ ಈ ಫೋನಿನ ಫಸ್ಟ್ ಸೇಲ್! ಜಬರ್ದಸ್ತ್ 8,000mAh ಬ್ಯಾಟರಿ ಸೌಲಭ್ಯ ಇದೆ
ವಿವೋ ಸಂಸ್ಥೆಯ ಹೊಸ Vivo V70 ಮೊಬೈಲ್ ಇಂದು (ಫೆಬ್ರವರಿ 19 ರಂದು) ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಈ ಫೋನಿನ 8GB + 256GB ವೇರಿಯಂಟ್‌ಗೆ 45,999 ರೂ ಮತ್ತು 12GB + 256GB ವೇರಿಯಂಟ್ 49,999 ರೂಗಳ ಬೆಲೆ ಹೊಂದಿದೆ. ಈ ಸ್ಟೈಲಿಶ್ ಮೊಬೈಲ್ ಫ್ಯಾಶನ್ ರೆಡ್ ಮತ್ತು ಲೆಮನ್ ಯೆಲ್ಲೊ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈಗ ಪ್ರಿ-ಆರ್ಡರ್‌ಗೆ ಲಬ್ಯ ಇದ್ದು ಇದೇ ಫೆಬ್ರವರಿ 26, 2026 ರಿಂದ ಮಾರಾಟಕ್ಕೆ ಬರಲಿದೆ.
Vivo V70 ಮೊಬೈಲ್ 120Hz ರಿಫ್ರೆಶ್ ರೇಟ್ ಸಪೋರ್ಟ್ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಇದು 5000 nits ಬ್ರೈಟ್ನೆಸ್ ಸಪೋರ್ಟ್ ಜೊತೆಗೆ 2750 x 1260 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಅಲ್ಲದೇ ಈ ಫೋನ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಹೊಂದಿರುವ ಜೊತೆಗೆ ಆಂಡ್ರಾಯ್ಡ್ 16 ಓಎಸ್ ಬೆಂಬಲ ಒಳಗೊಂಡಿದೆ. ಇದಕ್ಕೆ ಪೂರಕವಾಗಿ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳು ಹೊಂದಿದೆ. ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಪಡೆದುಕೊಂಡಿದೆ.
ಇನ್ನು ಈ ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು ಇದರ ಮುಖ್ಯ ಕ್ಯಾಮೆರಾವು 50MP ZEISS ಲೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಇನ್ನುಳಿದೆರಡು ಕ್ಯಾಮೆರಾಗಳು ಕ್ರಮವಾಗಿ 8MP ಅಲ್ಟ್ರಾ ವೈಲ್ಡ್ ಆಂಗಲ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 50MP Zeiss ಕ್ಯಾಮೆರಾ ಸೆನ್ಸಾರ್ ಅನ್ನು ಇದಗಿಸಲಾಗಿದೆ. ಈ ಸ್ಟೈಲಿಶ್ ಮೊಬೈಲ್ ಫ್ಯಾಶನ್ ರೆಡ್ ಮತ್ತು ಲೆಮನ್ ಯೆಲ್ಲೊ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.