Vivo ಸಂಸ್ಥೆಯ ಬಹುನಿರೀಕ್ಷಿತ Vivo V70 ಸರಣಿಯು ನಾಳೆ (ಫೆಬ್ರವರಿ 19 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಇನ್ನು ಈ ಸರಣಿಯು Vivo V70 ಮತ್ತು Vivo V70 Elite ಮಾಡೆಲ್ಗಳನ್ನು ಒಳಗೊಂಡಿರಲಿದೆ. ಅಲ್ಲದೇ Vivo V70 ಸರಣಿ ಬಿಡುಗಡೆ ಕುರಿತಾಗಿ ಫ್ಲಿಪ್ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಇನ್ನು ಮುಂಬರುವ ಈ ಮೊಬೈಲ್ಗಳು Snapdragon ಪ್ರೊಸೆಸರ್ ಜೊತೆಗೆ Zeiss ಕ್ಯಾಮೆರಾ ಸೆಟ್ಅಪ್ ಅನ್ನು ಒಳಗೊಂಡಿರುವುದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ. ಅಲ್ಲದೇ ಈ ಫೋನ್ಗಳು ಸ್ಟೈಲಿಶ್ ಲುಕ್ ಜೊತೆಗೆ AMOLED ಡಿಸ್ಪ್ಲೇ ಅನ್ನು ಒಳಗೊಂಡಿರಲಿವೆ. Vivo V70 ಸರಣಿಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಅಗ್ಗದ ಬೆಲೆಗೆ Lava Bold N2 ಲಾಂಚ್! ಡ್ಯುಯಲ್ ಕ್ಯಾಮೆರಾ ಜೊತೆಗೆ 5,000mAh ಬ್ಯಾಟರಿ ಸೌಲಭ್ಯ
ವಿವೋ ಕಂಪನಿಯ Vivo V70 ಸರಣಿಯು ನಾಳೆ (ಫೆಬ್ರವರಿ 19 ರಂದು) ಬಿಡುಗಡೆ ಆಗಲಿದೆ. ಲೀಕ್ ಮಾಹಿತಿ ಪ್ರಕಾರ Vivo V70 ಫೋನಿನ 8GB + 256GB ವೇರಿಯಂಟ್ಗೆ 45,999 ರೂ ಮತ್ತು 12GB + 256GB ವೇರಿಯಂಟ್ ರೂ 49,999 ಬೆಲೆ ಹೊಂದಿರಬಹುದು ಎನ್ನಲಾಗಿದೆ. ಹಾಗೆಯೇ Vivo V70 Elite ಫೋನಿನ 8GB + 256GB ವೇರಿಯಂಟ್ ರೂ 51,999 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಇನ್ನು 12GB + 256GB ವೇರಿಯಂಟ್ ಬೆಲೆ ರೂ 56,999 ಮತ್ತು 12GB + 512GB ವೇರಿಯಂಟ್ ಬೆಲೆ ರೂ 61,999 ಆಗಿರಬಹುದು ಎನ್ನಲಾಗಿದೆ. ಅಲ್ಲದೇ ಫೆಬ್ರವರಿ 25 ರಿಂದ ಮಾರಾಟ ಪ್ರಾರಂಭವಾಗುತ್ತದೆ.
Vivo V70 ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.59 ಇಂಚಿನ AMOLED ಡಿಸ್ಪ್ಲೇ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಫೋನ್ Snapdragon 7 Gen 4 ಚಿಪ್ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು ಎಂದು ಲೀಕ್ ಮಾಹಿತಿಗಳು ಸೂಚಿಸುತ್ತದೆ. ಇನ್ನು ಈ ಮೊಬೈಲ್ 50MP + 8MP + 50MP ಸಾಮರ್ಥ್ಯದ Zeiss ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ.
Vivo V70 Elite ಮೊಬೈಲ್ 6.59 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ. ಈ ಫೋನ್ Qualcomm Snapdragon 8s Gen 3 ಚಿಪ್ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಅಲ್ಲದೇ ಈ ಫೋನ್ 6,500mAh ಬ್ಯಾಟರಿ ಆಯ್ಕೆ ಹೊಂದಿರುವ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಸಹ ಒಳಗೊಂಡಿರಬಹುದು ಎಂದು ಲೀಕ್ ವರದಿಗಳು ಸೂಚಿಸುತ್ತವೆ. ಹಾಗೆಯೇ ಹಿಂಭಾಗದಲ್ಲಿ Zeiss ಟ್ರಿಪಲ್ ಕ್ಯಾಮೆರಾ ಸೆಟ್ಅಪ್ ಇರಲಿದ್ದು ಕ್ರಮವಾಗಿ 50MP + 50MP + 50MP ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ. ಸೆಲ್ಫಿಗಾಗಿ ಸಹ 50MP ಕ್ಯಾಮೆರಾ ಸೌಲಭ್ಯ ನೀಡಬಹುದು.