ಇಂದು ದೇಶೀಯ ಮಾರುಕಟ್ಟೆ ಪ್ರವೇಶಿಸಲಿದೆ Vivo V70 FE ಸ್ಮಾರ್ಟ್‌ಫೋನ್! ಆಕರ್ಷಕ ಫೀಚರ್ಸ್‌

HIGHLIGHTS

ಭಾರತದಲ್ಲಿ ಇಂದು (ಏಪ್ರಿಲ್‌ 2 ರಂದು) ವಿವೋ V70 FE ಲಾಂಚ್‌

ವಿವೋ V70 FE ಮೊಬೈಲ್‌ 7,000mAh ಬ್ಯಾಟರಿ ಸಾಮರ್ಥ್ಯ ಪಡೆದಿರಲಿದೆ

ವಿವೋ V70 FE ಗ್ರೀನ್‌ ಹಾಗೂ ಪಿಂಕ್ ಕಲರ್‌ ಆಯ್ಕೆ ಪಡೆದಿರಲಿದೆ

ವಿವೋ ಕಂಪನಿಯು ತನ್ನ ಹೊಸ Vivo V70 FE ಮೊಬೈಲ್‌ ಅನ್ನು ಇಂದು (ಏಪ್ರಿಲ್‌ 2 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಈಗಾಗಲೇ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಈಗ ತೆರೆಯಲಾಗಿದ್ದು, ಕೆಲವು ಫೀಚರ್ಸ್‌ ಬಹಿರಂಗವಾಗಿವೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಒಳಗೊಂಡಿರುವ ನಿರೀಕ್ಷೆಗಳಿವೆ. ಅಲ್ಲದೇ 7,000mAh ಬ್ಯಾಟರಿ ಪವರ್ ಅನ್ನು ಪಡೆದುಕೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ ಇದು ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಇನ್ನುಳಿದಂತೆ ವಿವೋ V70 FE ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

Also Read : Apple ಆಪ್‌ ಸ್ಟೋರ್‌ನಲ್ಲಿ ಈಗ ಕನ್ನಡ ಸೇರಿದಂತೆ 11 ಹೊಸ ಭಾಷೆಗಳ ಬೆಂಬಲ! ಈ ಲಿಸ್ಟ್‌ ನೋಡಿ

Vivo V70 FE ಇಂದು ಲಾಂಚ್‌

ವಿವೋ ಸಂಸ್ಥೆಯ ಮುಂಬರುವ ಹೊಸ ವಿವೋ V70 FE ಸ್ಮಾರ್ಟ್‌ಫೋನ್‌ ಮೀಡ್‌ರೇಂಜ್‌ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಅಂದಹಾಗೆ ಈ ಮೊಬೈಲ್‌ ಇಂದು (ಏಪ್ರಿಲ್‌ 2 ರಂದು) ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಈ ಮೊಬೈಲ್‌ ಲಾಂಚ್‌ ಬಳಿಕ ಫ್ಲಿಪ್‌ಕಾರ್ಟ್ ತಾಣ ಹಾಗೂ ಕಂಪನಿಯ ಅಧಿಕೃತ ಆನ್‌ಲೈನ್‌ ಸ್ಟೋರ್‌ ಮೂಲಕ ಸೇಲ್‌ ಶುರು ಮಾಡಲಿದೆ ಎಂದು ಕಂಪನಿಯು ದೃಢಪಡಿಸಿದೆ.ಭಾರತದಲ್ಲಿ ಈ ಫೋನ್‌ ಗ್ರೀನ್‌ ಹಾಗೂ ಪಿಂಕ್ ಕಲರ್‌ ಆಯ್ಕೆಗಳೊಂದಿಗೆ ಲಗ್ಗೆ ಇಡುವ ನಿರೀಕ್ಷೆಗಳಿವೆ. ಇದು 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಇವೆ.

ವಿವೋ V70 FE ನಿರೀಕ್ಷಿತ ಫೀಚರ್ಸ್‌

ಮುಂಬರುವ ಹೊಸ ವಿವೋ V70 FE ಸ್ಮಾರ್ಟ್‌ಫೋನ್‌ 6.83 ಇಂಚಿನ 1.5K Q10+ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್‌ ಪಡೆದಿರಲಿದ್ದು ಜೊತೆಗೆ 1,900 nits ವರೆಗೆ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಇದರ ಸ್ಕ್ರೀನ್‌ 1,260×2,800 ಪಿಕ್ಸೆಲ್‌ರೆಸಲ್ಯೂಶನ್‌ ಬೆಂಬಲ ಹೊಂದಿರಲಿದೆ. ಅಲ್ಲದೇ ಈ ಮೊಬೈಲ್‌ 8GB + 128GB ಮತ್ತು 12GB + 256GB RAM ಸ್ಟೋರೇಜ್ ವೇರಿಯಂಟ್‌ಗಳ ಆಯ್ಕೆಗಳನ್ನು ಪಡೆದಿರಲಿದೆ ಎಂದು ಹೇಳಲಾಗುತ್ತದೆ.

ವಿವೋ V70 FE ಸ್ಮಾರ್ಟ್‌ಫೋನ್‌ ಹಿಂಬದಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿರಲಿದೆ. ಇನ್ನು ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಒಳಗೊಂಡಿರುವ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೆನ್ಸಾರ್‌ ಅನ್ನು ಪಡೆದಿರಲಿದೆ ಎಂದು ಟೀಸ್ ಮಾಡಲಾಗಿದೆ. ಇನ್ನು ಈ ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿರುವ ಸಾಧ್ಯತೆಗಳು ಇವೆ. ಇದರ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :