Vivo V70 FE with 200MP Camera, 7000mah battery launched in india Check price specs offers
ವಿವೋ ಕಂಪನಿಯು ತನ್ನ ಬಹುನಿರೀಕ್ಷಿತ Vivo V70 FE ಸ್ಮಾರ್ಟ್ಫೋನ್ ಅನ್ನು ಇಂದು (ಏಪ್ರಿಲ್ 2 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7360 ಟರ್ಬೊ ಪ್ರೊಸೆಸರ್ ಪವರ್ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಈ ಮೊಬೈಲ್ 7,000mAh ಬ್ಯಾಟರಿ ಸಪೋರ್ಟ್ ಒಳಗೊಂಡಿರುವ ಜೊತೆಗೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ರಚನೆ ಪಡೆದಿರುವುದು ಪ್ರಮುಖ ಹೈಲೈಟ್ ಎನಿಸಿದೆ. ಅಲ್ಲದೇ ಇದರ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇನ್ನು ಈ ಮೊಬೈಲ್ ಮಾನ್ಸೂನ್ ಬ್ಲೂ ಮತ್ತು ನಾರ್ದರ್ನ್ ಲೈಟ್ಸ್ ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ. ಹಾಗಾದರೆ ವಿವೋ V70 FE ಮೊಬೈಲ್ನ ಬೆಲೆ, ಫೀಚರ್ಸ್ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Apple ಆಪ್ ಸ್ಟೋರ್ನಲ್ಲಿ ಈಗ ಕನ್ನಡ ಸೇರಿದಂತೆ 11 ಹೊಸ ಭಾಷೆಗಳ ಬೆಂಬಲ! ಈ ಲಿಸ್ಟ್ ನೋಡಿ
ದೇಶಿಯ ಮೊಬೈಲ್ ಮಾರುಕಟ್ಟೆ ಪ್ರವೇಶಿಸಿರುವ ವಿವೋ V70 FE ಸ್ಮಾರ್ಟ್ಫೋನ್ ಮೀಡ್ರೇಂಜ್ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ನ 8GB + 128GB ಸ್ಟೋರೇಜ್ ವೇರಿಯಂಟ್ ಬೆಲೆ 37,999 ರೂ.ಗಳು ಆಗಿದೆ. ಹಾಗೆಯೇ 8GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 40,999 ರೂ.ಗಳು ಆಗಿದೆ. ಅದೇ ರೀತಿ 12GB + 256GB ಸ್ಟೋರೇಜ್ ವೇರಿಯಂಟ್ ಬೆಲೆ 44,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್ ಮಾನ್ಸೂನ್ ಬ್ಲೂ ಮತ್ತು ನಾರ್ದರ್ನ್ ಲೈಟ್ಸ್ ಪರ್ಪಲ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಸ್ಮಾರ್ಟ್ಫೋನ್ ಇದು ಏಪ್ರಿಲ್ 9 ರಿಂದ ಅಮೆಜಾನ್ ಮತ್ತು ವಿವೋ ವೆಬ್ಸೈಟ್ ಮೂಲಕ ಮಾರಾಟಕ್ಕೆ ಬರಲಿದೆ.
ಹೊಸ ವಿವೋ V70 FE ಮೊಬೈಲ್ 6.83 ಇಂಚಿನ 1.5K OLED ಡಿಸ್ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್ಪ್ಲೇಯು 1,900 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಬೆಂಬಲಿತ 2800×1260 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 7360 ಟರ್ಬೊ ಚಿಪ್ಸೆಟ್ ಪ್ರೊಸೆಸರ್ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಆಂಡ್ರಾಯ್ಡ್ 16 ಆಧಾರಿತ OriginOS 6 ಅನ್ನು ಸಹ ಪಡೆದುಕೊಂಡಿದೆ.
ಹಾಗೆಯೇ ವಿವೋ V70 FE ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದುಕೊಂಡಿವೆ. ಇದರ ಮೊದಲ ಕ್ಯಾಮೆರಾವು 200 ಮೆಗಾಪಿಕ್ಸೆಲ್ 1/1.56 ಇಂಚಿನ ಮುಖ್ಯ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ರಚನೆ ಪಡೆದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 7,000mAh ಬ್ಯಾಟರಿ ಬ್ಯಾಕ್ಅಪ್ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.