Vivo ಕಂಪನಿಯು ಭಾರತದಲ್ಲಿ ಹೊಸ Vivo V70 Elite ಮೊಬೈಲ್ ಅನ್ನು ಇಂದು (ಫೆಬ್ರವರಿ 19 ರಂದು) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್ Snapdragon 8s Gen 3 ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿರುವ ಜೊತೆಗೆ 50MP Zeiss ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಇದರ ಜೊತೆಗೆ 6,500 mAh ಬ್ಯಾಟರಿ ಸಪೋರ್ಟ್ ಹೊಂದಿರುವ ಈ ಮೊಬೈಲ್ ಮೂರು ಆಕರ್ಷಕ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗೆಯೇ ಈ ಮೊಬೈಲ್ 3D ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಬೆಂಬಲ ಪಡೆದಿದೆ. ಹಾಗಾದರೇ Vivo V70 Elite ಸ್ಮಾರ್ಟ್‌ಫೋನ್ ಬೆಲೆ, ಲಭ್ಯತೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ನಾಳೆ Tecno ಕಂಪನಿಯ ಈ ಫೋನಿನ ಫಸ್ಟ್ ಸೇಲ್! ಜಬರ್ದಸ್ತ್ 8,000mAh ಬ್ಯಾಟರಿ ಸೌಲಭ್ಯ ಇದೆ
ವಿವೋ ಸಂಸ್ಥೆಯ ಹೊಸ Vivo V70 Elite ಫೋನ್ ಇಂದು (ಫೆಬ್ರವರಿ 19 ರಂದು) ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಈ ಫೋನಿನ 8GB + 256GB ವೇರಿಯಂಟ್‌ಗೆ 51,999ರೂ ಆಗಿದೆ. 12GB + 256GB ವೇರಿಯಂಟ್ 56,999 ರೂಗಳ ಬೆಲೆ ಹೊಂದಿದೆ ಮತ್ತು 12GB + 512GB ವೇರಿಯಂಟ್ 61,999 ರೂಗಳ ಬೆಲೆ ಪಡೆದಿದೆ. ಈ ಸ್ಟೈಲಿಶ್ ಮೊಬೈಲ್ ಪ್ಯಾಶನ್ ರೆಡ್, ಸ್ಯಾಂಡ್ ಬೀಜ್ ಮತ್ತು ಅಥೆಂಟಿಕ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಈಗ ಪ್ರಿ-ಆರ್ಡರ್‌ಗೆ ಇದೆ. ಇದೇ ಫೆಬ್ರವರಿ 26, 2026 ರಿಂದ ಮಾರಾಟಕ್ಕೆ ಬರಲಿದೆ.
ಹೊಸ Vivo V70 Elite ಮೊಬೈಲ್ 120Hz ರಿಫ್ರೆಶ್ ರೇಟ್ ಬೆಂಬಲದ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಹಾಗೆಯೇ ಈ ಮೊಬೈಲ್ 5000 nits ಬ್ರೈಟ್ನೆಸ್ ಸಪೋರ್ಟ್ ಜೊತೆಗೆ 2750 x 1260 ಪಿಕ್ಸಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಅಲ್ಲದೇ ಈ ಫೋನ್ Qualcomm Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಹೊಂದಿರುವ ಜೊತೆಗೆ ಆಂಡ್ರಾಯ್ಡ್ 16 ಓಎಸ್ ಸಪೋರ್ಟ್ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 256GB ಹಾಗೂ 512GB ಸ್ಟೋರೇಜ್ ಆಯ್ಕೆಗಳು ಹೊಂದಿದೆ. ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಪಡೆದುಕೊಂಡಿದೆ.
ಇನ್ನು Vivo V70 Elite ಮೊಬೈಲ್ ಹಿಂಭಾಗದಲ್ಲಿ ಮೂರು ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು ಇದರ ಮುಖ್ಯ ಕ್ಯಾಮೆರಾವು 50MP ZEISS ಲೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಉಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 8MP ಅಲ್ಟ್ರಾ ವೈಲ್ಡ್ ಆಂಗಲ್ ಕ್ಯಾಮೆರಾ ಮತ್ತು 50MP ಟೆಲಿಫೋಟೋ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 50MP Zeiss ಕ್ಯಾಮೆರಾ ಸೆನ್ಸಾರ್ ಅನ್ನು ಇದಗಿಸಲಾಗಿದೆ. ಈ ಪ್ರೀಮಿಯಂ ಮೊಬೈಲ್ ಪ್ಯಾಶನ್ ರೆಡ್, ಸ್ಯಾಂಡ್ ಬೀಜ್ ಮತ್ತು ಅಥೆಂಟಿಕ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.