Vivo V70 and Vivo V70 Elite launch soon expected design, Specs and price leaked
ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ Vivo ಕಂಪನಿಯು ತನ್ನ V ಸರಣಿಯಲ್ಲಿ ಈಗಾಗಲೇ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ವಿವೋ ನೂತನವಾಗಿ Vivo V70 ಸರಣಿ ಪರಿಚಯಿಸಲು ಸಜ್ಜಾಗುತ್ತಿದ್ದು ಫೆಬ್ರವರಿ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಲೀಕ್ ಮಾಹಿತಿ ಪ್ರಕಾರ ಈ ಹೊಸ ಸರಣಿಯು Vivo V70 (vanilla) ಮತ್ತು Vivo V70 Elite ಮಾದರಿಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಸರಣಿಯ ಭಾಗವಾಗಿ ವಿವೋ ಕಂಪನಿಯು Vivo V70 FE ಮಾಡೆಲ್ ಅನ್ನು ಪರಿಚಯಿಸಬಹುದು ನಿರೀಕ್ಷೆಗಳು ಇವೆ ಎನ್ನಲಾಗಿದೆ. ಹಾಗಾದರೇ Vivo V70 ಸರಣಿ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
Also Read : Samsung Galaxy S26 ಸರಣಿ ಬಿಡುಗಡೆಯ ದಿನಾಂಕ ಬಹಿರಂಗ; 200MP ಕ್ಯಾಮೆರಾ ಇರುವ ಸಾಧ್ಯತೆ!
ಚೀನಾ ಮೂಲಕ Vivo ಕಂಪನಿಯ ಬಹುನಿರೀಕ್ಷಿತ Vivo V70 ಸರಣಿ ಇದೇ ಫೆಬ್ರವರಿ ಮಧ್ಯಂತರದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಪ್ರೀಮಿಯಂ ಮಿಡ್ ರೇಂಜ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದು ಭಾರತದಲ್ಲಿ ರೂ.55,000 ಒಳಗಿನ ಪ್ರೈಸ್‌ಟ್ಯಾಗ್ ರೇಂಜ್‌ನಲ್ಲಿ ಲಭ್ಯವಾಗಬಹುದು ಎಂದು ಹೇಳಲಾಗಿದೆ. ಇನ್ನು ಫೋನಿನ ಕಲರ್ ಆಯ್ಕೆ ಬಗ್ಗೆ ಹೇಳುವುದಾದರೆ, Vivo V70 ಮಾದರಿ ಪ್ಯಾಷನ್ ರೆಡ್ ಮತ್ತು ಲೆಮನ್ ಯೆಲ್ಲೋ ಕಲರ್‌ಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಯಿದೆ. ಹಾಗೆಯೇ Vivo V70 Elite ಮಾಡೆಲ್ ಪ್ಯಾಷನ್ ರೆಡ್, ಸ್ಯಾಂಡ್ ಬೇಜ್ ಮತ್ತು ಬ್ಲ್ಯಾಕ್ ಕಲರ್‌ಗಳ ಆಯ್ಕೆಯಲ್ಲಿ ಎಂಟ್ರಿ ಕೊಡಬಹುದು ಎಂದು ತಿಳಿದುಬಂದಿದೆ. ಭಾರತದಲ್ಲಿ Vivo V70 ಸರಣಿಯ ಅಧಿಕೃತ ಬಿಡುಗಡೆ ಕುರಿತು ಸಂಸ್ಥೆಯು ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಹೊರಹಾಕಿಲ್ಲ.
ಇನ್ನೇನು ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ Vivo V70 ಸರಣಿಯ Vivo V70 Elite ಮತ್ತು Vivo V70 ಈ ಎರಡೂ ಫೋನ್‌ಗಳು ವಿನ್ಯಾಸದಲ್ಲಿ ಬಹುತೇಕ ಒಂದೇ ರೀತಿಯಾಗಿ ಕಾಣಿಸುತ್ತವೆ. ಇನ್ನು ಲೀಕ್ ಆಗಿರುವ ಫೋಟೋದಲ್ಲಿ ವಿವೋ ಸಂಸ್ಥೆಯ ಈ ಎರಡು ಮೊಬೈಲ್‌ಗಳು ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಕಾಣಿಸಿಕೊಂಡಿವೆ. Vivo V70 ಸರಣಿಯಲ್ಲಿ ಹಿಂಭಾಗದಲ್ಲಿ ಕ್ಯಾಮೆರಾಗಾಗಿ ಚೌಕಾಕಾರದ ಇದ್ದು ಇದು ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಇದರ ಜೊತೆಗೆ LED ಫ್ಲ್ಯಾಶ್ ಸೌಲಭ್ಯ ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗೆಯೇ Vivo V70 Elite ಮಾಡೆಲ್ ಕಡಿಮೆ ಬೆಜಲ್ ಇರುವ ಡಿಸ್‌ಪ್ಲೇ ವಿನ್ಯಾಸ ಪಡೆದಿರಲಿದ್ದು ಇನ್ನು ಇದು ಸೆಲ್ಫಿ ಕ್ಯಾಮೆರಾಗಾಗಿ ಹೋಲ್ ಪಂಚ್ ಡಿಸ್‌ಪ್ಲೇ ಕಟ್‌ಔಟ್ ಆಯ್ಕೆ ಒಳಗೊಂಡಿರಲಿದೆ ಎನ್ನಲಾಗಿದೆ.
ಮುಂಬರುವ ಹೊಸ Vivo V70 ಮತ್ತು Vivo V70 Elite ಈ ಎರಡೂ ಮೊಬೈಲ್‌ಗಳು 6.59 ಇಂಚಿನ ಫುಲ್ HD+ AMOLED ಮಾದರಿಯ ಡಿಸ್‌ಪ್ಲೇ ಹೊಂದಿರಲಿವೆ. ಇದಕ್ಕೆ ಪೂರಕವಾಗಿ 120Hz ರಿಫ್ರೆಶ್ ರೇಟ್ ಸಪೋರ್ಟ್ ಪಡೆದಿರುವ ಸಾಧ್ಯತೆ ಹೆಚ್ಚಿವೆ. ಸಂಸ್ಥೆಯ Elite ಮಾಡೆಲ್ Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಬಲವನ್ನು ಒಳಗೊಂಡಿರುವ ನಿರೀಕ್ಷೆಗಳು ಇದ್ದು ಇನ್ನು Vivo V70 ಮಾಡೆಲ್ Snapdragon 7 Gen 4 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿರುವ ಸಾಧ್ಯತೆ ಇದೆ.