ಆಕರ್ಷಕ ಡಿಸ್ಕೌಂಟ್ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ನೀವು ಖರೀದಿಸಲು ಬಯಸಿದರೆ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನತ್ತ ಗಮನಿಸಿ. ಏಕೆಂದರೆ ಸದ್ಯ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ Vivo ಮೊಬೈಲ್ ಕಂಪನಿಯ Vivo V60 5G ಸ್ಮಾರ್ಟ್‌ಫೋನ್ ಸಖತ್ ಬೆಲೆ ಇಳಿಕೆ ಪಡೆದುಕೊಂಡಿದೆ. ಇದಲ್ಲದೇ ಈ ಪ್ಲಾಟ್‌ಫಾರ್ಮ್‌ನಲ್ಲಿ ಆಯ್ದ ಕೆಲವು ಬ್ಯಾಂಕ್ ಕೊಡುಗೆಗಳಿಂದ ಗ್ರಾಹಕರು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದಾಗಿದೆ. ಅಂದಹಾಗೆ ಈ ಮೊಬೈಲ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6,500mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು ಇದರ ಜೊತೆಗೆ 50MP ZEISS ಕ್ಯಾಮೆರಾ ಸೆಟ್‌ಅಪ್ ಅನ್ನು ಸಹ ಒಳಗೊಂಡಿದೆ. ಹಾಗಾದರೆ Flipkart ವೆಬ್‌ಸೈಟ್‌ನಲ್ಲಿ Vivo V60 5G ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Airtel ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಸಿಗುತ್ತೆ ಭರ್ಜರಿ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ
ಜನಪ್ರಿಯ Vivo V60 5G ಮೊಬೈಲ್ ಸದ್ಯ Flipkart ಇ ಕಾಮರ್ಸ್ ತಾಣದಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB RAM + 256 GB ವೇರಿಯಂಟ್ 43,999 ರೂಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಆದರೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 38,999 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಈ ಸ್ಟೈಲಿಶ್ ಮೊಬೈಲ್ ಖರೀದಿಸುವ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಹಾಗೂ ಆಕರ್ಷಕ EMI ಆಯ್ಕೆಗಳನ್ನು ಸಹ ಪಡೆಯಬಹುದು. ಇನ್ನು ಈ ಫೋನ್ ಗೋಲ್ಡ್, ಮಿಸ್ಟ್ ಗ್ರೇ ಹಾಗೂ ಮೂನ್‌ಲೈಟ್ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Vivo V60 5G ಮೊಬೈಲ್ 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರುವ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 5,000 nits ವರೆಗೆ ಗರಿಷ್ಠ ಬ್ರೈಟ್ನೆಸ್ ಒದಗಿಸುವ ಸೌಲಭ್ಯ ಪಡೆದುಕೊಂಡಿದೆ. ಅಂದಹಾಗೆ ಈ ಮೊಬೈಲ್ ಕ್ವಾಲ್ಕಮ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ 128GB, 256GB ಹಾಗೂ 512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ.
ಹಾಗೆಯೇ Vivo V60 5G ಮೊಬೈಲ್ ಕ್ಯಾಮೆರಾ ವಿಭಾಗವು ಅತ್ಯುತ್ತಮ ಆಗಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು OIS ಒಳಗೊಂಡ 50MP ZEISS ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗೆಯೇ ಇನ್ನೊಂದು ಕ್ಯಾಮೆರಾವು 50MP ZEISS ಟೆಲಿಫೋಟೋ ಸಾಮರ್ಥ್ಯ ಪಡೆದಿದ್ದು ಜೊತೆಗೆ 8 MP ZEISS ಅಲ್ಟ್ರಾವೈಡ್ ಸೆನ್ಸರ್ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕೂಡಾ ಈ ಮೊಬೈಲ್ 50MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 6,500mAh ಬ್ಯಾಟರಿ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.