Vivo V50 5G ಬೆಲೆಯಲ್ಲಿ 7,500ರೂಗಳ ಇಳಿಕೆ! ಈ ಫೋನಿನಲ್ಲಿ Snapdragon ಪ್ರೊಸೆಸರ್, 50MP ಕ್ಯಾಮೆರಾ ಇದೆ

Updated on 28-Jan-2026
HIGHLIGHTS

Flipkart ತಾಣದಲ್ಲಿ Vivo V50 5G ಫೋನ್‌ ಸಖತ್ ಬೆಲೆ ಇಳಿಕೆ ಕಂಡಿದೆ

ಗ್ರಾಹಕರು Flipkart SBI ಅಥವಾ Flipkart Axis ಕಾರ್ಡ್‌ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದು

Vivo V50 5G ಮೊಬೈಲ್‌ Snapdragon 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿದೆ

ಜನಪ್ರಿಯ Vivo ಮೊಬೈಲ್‌ ಬ್ರ್ಯಾಂಡ್‌ನ Vivo V50 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇದೀಗ ಸಖತ್ ಬೆಲೆ ಕಡಿತ ಆಗಿದೆ. ಲೀಡಿಂಗ್ ಇ ಕಾಮರ್ಸ್‌ ತಾಣ ಎನಿಸಿರುವ Flipkart ನಲ್ಲಿ ಈ ಸ್ಮಾರ್ಟ್‌ಫೋನ್ ಈಗ ರೂ 32,999 ಬೆಲೆಗೆ ಲಭ್ಯವಿದೆ. ಅಂದಾಹಾಗೆ ಈ ಫೋನ್‌ Snapdragon 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದ್ದು ಹಾಗೆಯೇ ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿದೆ. ಅಲ್ಲದೇ ಈ ಮೊಬೈಲ್‌ 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಸಪೋರ್ಟ್‌ ಸಹ ಒಳಗೊಂಡಿದೆ. ಹಾಗಾದರೆ Flipkart ನಲ್ಲಿ Vivo V50 5G ಸ್ಮಾರ್ಟ್‌ಫೋನಿಗೆ ಲಭ್ಯ ಇರುವ ಆಫರ್‌ ಹಾಗೂ ಇದರ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ.

Also Read : ಬಿಡುಗಡೆಗೂ ಮುನ್ನವೇ Samsung Galaxy A07 5G ಬೆಲೆ ಲೀಕ್‌! ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ

Flipkart ನಲ್ಲಿ Vivo V50 5G ಫೋನ್‌ ಬೆಲೆ ಇಳಿಕೆ

Vivo ಕಂಪನಿಯ Vivo V50 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 39,999 ರೂಗಳ ಬೆಲೆಯಲ್ಲಿ ಬಿಡುಗಡೆ ಆಗಿತ್ತು. ಪ್ರಸ್ತುತ Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಬೆಲೆ ಇಳಿಕೆ ಕಂಡಿದೆ. ಇದು ಫ್ಲಿಪ್‌ಕಾರ್ಟ್‌ ತಾಣದಲ್ಲಿ Vivo V50 5G ಫೋನ್‌ 32,499 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಸುಮಾರು 7,500 ರೂ.ಗಳ ವರೆಗೆ ಡಿಸ್ಕೌಂಟ್‌ ಪಡೆದಿದೆ. ಇದನ್ನು ಹೊರತುಪಡಿಸಿ ಗ್ರಾಹಕರು Flipkart SBI ಅಥವಾ Flipkart Axis ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿ ಮಾಡಿದರೆ 4,000 ರೂಗಳ ವರೆಗೆ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದು. ಈ ಆಫರ್‌ ಅಲ್ಲದೇ Flipkart ಪ್ಲಾಟ್‌ಫಾರ್ಮ್‌ no-cost EMI ಆಯ್ಕೆ ಸಹ ನೀಡುತ್ತಿದೆ.

Vivo V50 5G ಫೋನಿನ ಪ್ರಮುಖ ಫೀಚರ್ಸ್‌

Vivo V50 5G ಮೊಬೈಲ್‌ 6.77 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದ್ದು ಇದರ ಸ್ಕ್ರೀನ್‌ 120Hz ವರೆಗಿನ ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಬೆಳಕಿನಲ್ಲಿ4,500 nits ಗರಿಷ್ಠ ಬ್ರೈಟ್ನೆಸ್‌ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಈ ಫೋನ್‌ Snapdragon 7 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು 8GB RAM + 256GB ಸ್ಟೋರೇಜ್‌ ಆಯ್ಕೆಯ ಸೌಲಭ್ಯ ಸಹ ಪಡೆದಿದೆ. ಇದರೊಂದಿಗೆ ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು ಇದಕ್ಕೆ ಪೂರಕವಾಗಿ 90W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ.

ಇನ್ನು ವಿವೋ ಸಂಸ್ಥೆಯ ಈ Vivo V50 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಆಗಿದೆ. ಹಾಗೆಯೇ ಇದರ ಸೆಕೆಂಡರಿ ಕ್ಯಾಮೆರಾ ಕೂಡಾ 50MP ಸೆನ್ಸಾರ್‌ ಸೌಲಭ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವೀಡಿಯೊ ಕರೆಗಳಿಗಾಗಿ 50MP ಸೆನ್ಸಾರ್‌ ಇರುವ ಕ್ಯಾಮೆರಾ ಸೌಲಭ್ಯ ಒದಗಿಸಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :