ಚೀನಾ ಮೂಲದ ವಿವೋ ಕಂಪನಿಯು ಇದೀಗ T ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ತಯಾರಿ ನಡೆಸಿದೆ. ಇನ್ನು ಮುಂಬರುವ ಮೊಬೈಲ್‌ನ ಹೆಸರು Vivo T5 Pro ಆಗಿದ್ದು, ಈ ಮೊಬೈಲ್ ಕೆಲವು ಆಕರ್ಷಕ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಕಂಪನಿಯು ಇನ್ನೂ ನಿಖರವಾದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ, ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ಪ್ರಾರಂಭ ಮಾಡಲಾಗಿದೆ. ಹಾಗೆಯೇ ಹೊಸದಾಗಿ ಬರಲಿರುವ ವಿವೋ T5 ಪ್ರೊ ಮೊಬೈಲ್‌ನ ಕೆಲವು ಪ್ರಮುಖ ಫೀಚರ್ಸ್ ಹಾಗೂ ಡಿಸೈನ್ ಅನ್ನು ಕಂಪನಿಯು ಟೀಸ್ ಮಾಡಿದೆ. ಅಂದಹಾಗೆ ಇದು ವಿವೋ T4 ಪ್ರೊ 5G ಫೋನಿನ ಉತ್ತರಾಧಿಕಾರಿ ಆಗಿ ಲಗ್ಗೆ ಇಡಲಿದೆ ಎನ್ನಲಾಗಿದೆ.
Also Read : ಸ್ಟೈಲಿಶ್ ಲುಕ್‌ನಲ್ಲಿ Redmi Note 15 SE 5G ಸ್ಮಾರ್ಟ್‌ಫೋನ್ ಬಿಡುಗಡೆ! ಬೆಲೆ ನೋಡಿ
ವಿವೋ ಕಂಪನಿಯು ಹೊಸದಾಗಿ ವಿವೋ T5 ಪ್ರೊ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಮೊಬೈಲ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಬಿಡುಗಡೆಯ ಬಗ್ಗೆ ಇನ್ನು ಅಧಿಕೃತ ದಿನಾಂಕ ಬಹಿರಂಗ ಮಾಡಿಲ್ಲ. ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ಪ್ರಾರಂಭ ಮಾಡಲಾಗಿದೆ. ಲಾಂಚ್ ಬಳಿಕ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭಿಸಲಿದೆ.
ಹೊಸ ವಿವೋ T5 ಪ್ರೊ ಮೊಬೈಲ್ 9,020mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಹಾಗೆಯೇ ಈ ಫೋನ್ ತೆಳ್ಳಗಿನ ರಚನೆ ಪಡೆದಿರುತ್ತದೆ ಎಂದು ಸಂಸ್ಥೆಯು ಸೂಚಿಸಿದೆ. ಹಾಗೆಯೇ ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದ್ದು ಇದು ಮಾತ್ರೆ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿರಲಿದೆ. ಇದರ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್ ಬಟನ್‌ಗಳನ್ನು ಫೋನ್‌ನ ಎಡಭಾಗದಲ್ಲಿ ನೀಡಲಾಗಿದೆ. ಇದರೊಂದಿಗೆ ಈ ಫೋನ್ 120 fps ವರೆಗಿನ ಗೇಮಿಂಗ್ ಸಪೋರ್ಟ್ ಒಳಗೊಂಡಿರಲಿದೆ.
ಇನ್ನು ವಿವೋ T5 ಪ್ರೊ ಮೊಬೈಲ್ 6.8 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದಕ್ಕೆ ಪೂರಕವಾಗಿ 144Hz ವರೆಗೆ ರಿಫ್ರೆಶ್ ರೇಟ್ ಸಪೋರ್ಟ್ ಅನ್ನು ಒದಗಿಸುವ ಸಾಧ್ಯತೆಗಳು ಇವೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಸ್ಪೀಕರ್ ಗ್ರಿಲ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುತ್ತದೆ. ವಿವೋದ ಈ ನೂತನ ಫೋನ್ ಅನ್ನು ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಈ ಫೋನಿನ ಬೆಲೆ 30,000 ರೂ.ಗಳಿಂದ 35,000 ರೂ.ಗಳ ನಡುವೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.