Vivo T4 Ultra ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ! 50MP ಕ್ಯಾಮೆರಾ, 90W ಫಾಸ್ಟ್‌ ಚಾರ್ಜಿಂಗ್ ಫೀಚರ್ಸ್‌

Updated on 31-Jan-2026
HIGHLIGHTS

Flipkart ವೆಬ್‌ಸೈಟ್‌ನಲ್ಲಿ Vivo T4 Ultra ಮೊಬೈಲ್‌ ಬೊಂಬಾಟ್‌ ರಿಯಾಯಿತಿ ಪಡೆದಿದೆ

Vivo T4 Ultra ಮೊಬೈಲ್‌ನ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್‌ ಆಗಿದೆ

ಗ್ರಾಹಕರ Vivo T4 Ultra ಅನ್ನು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿ ಮಾಡಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಿಗಲಿದೆ

ಜನಪ್ರಿಯ ವಿವೋ ಸಂಸ್ಥೆಯ Vivo T4 Ultra ಸ್ಮಾರ್ಟ್‌ಫೋನ್‌ ಈಗ ಆಕರ್ಷಕ ಡಿಸ್ಕೌಂಟ್‌ ಪಡೆದಿದೆ. ಲೀಡಿಂಗ್ ಇ ಕಾಮರ್ಸ್‌ ವೆಬ್‌ಸೈಟ್‌ ಎನಿಸಿರುವ Flipkart ತಾಣದಲ್ಲಿ Vivo T4 Ultra ಬೊಂಬಾಟ್‌ ರಿಯಾಯಿತಿಯಲ್ಲಿ ಕಾಣಿಸಿಕೊಂಡಿದೆ. ಆಫರ್‌ ದರದಲ್ಲಿ ಫೋನ್‌ ಅಪ್‌ಗ್ರೇಡ್‌ ಮಾಡಬಯಸುವ ಗ್ರಾಹಕರಿಗೆ ಈ ಕೊಡುಗೆ ಅತ್ಯುತ್ತಮ. ಅಂದಹಾಗೆ Vivo T4 Ultra ಮೊಬೈಲ್‌ MediaTek Dimensity 9300+ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 5500mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 90W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಲಭ್ಯ ಇರುವ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಭರ್ಜರಿ ಆಫರ್‌ನಲ್ಲಿ iPhone 16 ಖರೀದಿಸಲು ಇದಕ್ಕಿಂತ ಒಳ್ಳೆಯ ಸಮಯ ಇನ್ನೊಂದಿಲ್ಲ!

Vivo T4 Ultra ಮೊಬೈಲ್‌ಗೆ ಭರ್ಜರಿ ಡಿಸ್ಕೌಂಟ್‌

ವಿವೋ ಬ್ರ್ಯಾಂಡ್‌ನ Vivo T4 Ultra ಮೊಬೈಲ್‌ ಗಮನಾರ್ಹ ಬೆಲೆ ಇಳಿಕೆ ಕಂಡಿದೆ. Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಈ ಮೊಬೈಲ್‌ 40,999 ರೂಗಳ ಬೆಲೆ ಹೊಂದಿದ್ದು, ಆದರೆ ಇದೀಗ 35,999 ರೂಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು Flipkart SBI ಅಥವಾ Flipkart Axis ಬ್ಯಾಂಕ್‌ಗಳ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ, 4,000 ರೂಗಳ ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ಅಲ್ಲದೇ Flipkart ಇ ಕಾಮರ್ಸ್ ವೆಬ್‌ಸೈಟ್ ತಿಂಗಳಿಗೆ 4,000 ರೂಗಳಿಂದ ಪ್ರಾರಂಭವಾಗುವ no cost EMI ಆಯ್ಕೆಗಳನ್ನು ಸಹ ನೀಡುತ್ತಿದೆ. ಅದೇ ರೀತಿ ಹಳೆಯ ಮೊಬೈಲ್‌ ಎಕ್ಸ್‌ಚೇಂಜ್ ಮಾಡುವ ಮೂಲಕ ಇನ್ನಷ್ಟು ಡಿಸ್ಕೌಂಟ್‌ ಬೆಲೆಯಲ್ಲಿ ಫೋನ್‌ ಖರೀದಿಸಬಹುದು.

Vivo T4 Ultra ಮೊಬೈಲ್‌ ಫೀಚರ್ಸ್‌

Vivo T4 Ultra ಮೊಬೈಲ್‌ 120Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.67 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಮೊಬೈಲ್‌ MediaTek Dimensity 9300+ ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಅನುಗುಣವಾಗಿ Android 15 based Funtouch OS 15 ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಇದು 12GB ವರೆಗೆ RAM ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ.

ಅದೇ ರೀತಿ Vivo T4 Ultra ಮೊಬೈಲ್‌ ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಈ ಫೋನ್ 50MP OIS ಮುಖ್ಯ ಕ್ಯಾಮೆರಾ ಸೆನ್ಸಾರ್‌ ಒಳಗೊಂಡಿರುವ ಜೊತೆಗೆ 50MP ಸೋನಿ IMX 882 ಪೆರಿಸ್ಕೋಪ್ ಮತ್ತು 8MP ಅಲ್ಟ್ರಾವೈಡ್ ಶೂಟರ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ ಮುಂಭಾಗದಲ್ಲಿ 4K ಮತ್ತು EIS ಸೌಲಭ್ಯ ಇರುವ 32MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 90W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಜೊತೆಗೆ 5500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :