Vivo ಹಾಗೂ iQOO ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಬಿಗ್‌ ಶಾಕ್‌! ಸದ್ಯದಲ್ಲೇ ಬೆಲೆ ಏರಿಕೆ ಸಾಧ್ಯತೆ

HIGHLIGHTS

ಮಾರ್ಚ್ 1 ರಿಂದ ವಿವೋ ಹಾಗೂ ಐಕ್ಯೂ ಕಂಪನಿಯ ಕೆಲವು ಫೋನ್‌ಗಳ ಬೆಲೆ ಏರಿಕೆ ಸಾಧ್ಯತೆ

ಈ ಮೊಬೈಲ್‌ಗಳ ಬೆಲೆಯಲ್ಲಿ 1,500 ರಿಂದ 2,500 ರೂಗಳ ರವರೆಗೆ ಬೆಲೆಯಲ್ಲಿ ಏರಿಕೆ ಆಗಬಹುದು

ವಿವೋ ಮತ್ತು ಐಕ್ಯೂ ಬ್ರಾಂಡ್‌ಗಳು ಇನ್ನೂ ಅಧಿಕೃತವಾಗಿ ಯಾವುದೇ ಬೆಲೆ ಏರಿಕೆಯನ್ನು ಘೋಷಿಸಿಲ್ಲ

Vivo ಮೊಬೈಲ್‌ ಬ್ರಾಂಡ್‌ ಹಾಗೂ ವಿವೋ ಸಂಸ್ಥೆಯ ಸಬ್‌ ಬ್ರಾಂಡ್‌ ಆಗಿರುವ iQOO ಕಂಪನಿಗಳು ಭಿನ್ನ ಮಾದರಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಈ ಸಂಸ್ಥೆಗಳ ಕೆಲವು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ದರದಲ್ಲಿ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳ ಪೈಕಿ Vivo T4 ಸರಣಿ ಹಾಗೂ iQOO Z10 ಲೈನ್‌ಅಪ್‌ ಮೊಬೈಲ್‌ಗಳು ಸೇರಿವೆ. ಆದರೆ ವಿವೋ ಹಾಗೂ ಐಕ್ಯೂ ಮೊಬೈಲ್‌ ಪ್ರಿಯರಿಗೆ ಶಾಕಿಂಗ್ ಸುದ್ದಿ ಇದೆ. ಹೌದು, ಮುಂದಿನ ತಿಂಗಳಿನಿಂದ ಭಾರತದಲ್ಲಿ ವಿವೋ ಮತ್ತು ಐಕ್ಯೂ ಸಂಸ್ಥೆಗಳ ಹಲವಾರು ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಟಿಪ್‌ಸ್ಟರ್ ಮಾಹಿತಿಗಳು ಸೂಚಿಸುತ್ತಿವೆ. ಹಾಗಾದರೆ ವಿವೋ ಮತ್ತು ಐಕ್ಯೂ ಸಂಸ್ಥೆಗಳ ಯಾವ ಸ್ಮಾರ್ಟ್‌ಫೋನ್‌ಗಳು ಏರಿಕೆ ಆಗಲಿವೆ ಎಂಬ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Samsung Galaxy S25 ಬೆಲೆಯಲ್ಲಿ ದಿಢೀರ್ ಇಳಿಕೆ! ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌, ಟ್ರಿಪಲ್‌ ಕ್ಯಾಮೆರಾ

Vivo ಹಾಗೂ iQOO ಫೋನ್‌ಗಳ ಬೆಲೆಯಲ್ಲಿ ಏರಿಕೆ ಸಾಧ್ಯತೆ

ಮುಂದಿನ ತಿಂಗಳು ಮಾರ್ಚ್ 1 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ವಿವೋ ಮತ್ತು ಐಕ್ಯೂ ಕಂಪನಿಯ ಕೆಲವು ಮೊಬೈಲ್‌ಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಟಿಪ್‌ಸ್ಟರ್ ಪ್ರಕಾರ, ಪರಿಷ್ಕರಣೆಯು Vivo T4 ಸರಣಿ ಮತ್ತು iQOO Z10 ಸರಣಿಯಲ್ಲಿನ ವೇರಿಯಂಟ್‌ಗಳ ಮೇಲೆ ಬೆಲೆ ಏರಿಕೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎನ್ನಲಾಗಿದೆ. RAM ಮತ್ತು ಸ್ಟೋರೇಜ್‌ ಅವಲಂಬಿಸಿ ಮೊಬೈಲ್‌ಗಳ ಬೆಲೆಯಲ್ಲಿ 1,500 ರಿಂದ 2,500 ರೂ.ಗಳ ರವರೆಗೆ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅಂದಹಾಗೆ ಗಮನಿಸಬೇಕಾದ ಅಂಶವೆಂದರೆ ವಿವೋ ಮತ್ತು ಐಕ್ಯೂ ಬ್ರಾಂಡ್‌ಗಳು ಇನ್ನೂ ಅಧಿಕೃತವಾಗಿ ಯಾವುದೇ ಬೆಲೆ ಏರಿಕೆಯನ್ನು ಘೋಷಿಸಿಲ್ಲ. ಅದಾಗ್ಯೂ, ಮೆಮೊರಿ ಘಟಕಗಳ ವೆಚ್ಚದಲ್ಲಿನ ಏರಿಕೆ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

vivo

Vivo T4 ನಿರೀಕ್ಷಿತ ಪರಿಷ್ಕೃತ ಬೆಲೆಗಳು

ವಿವೋ T4 ಮೊಬೈಲ್‌ ಅನ್ನು ಭಾರತದಲ್ಲಿ 8GB + 128GB ವೇರಿಯಂಟ್‌ ಅನ್ನು 22,999 ರೂ.ಗಳಿಗೆ, 8GB + 256GB ವೇರಿಯಂಟ್‌ ಅನ್ನು 24,999 ರೂಗಳಿಗೆ ಮತ್ತು 12GB + 256GB ವೇರಿಯಂಟ್‌ ಅನ್ನು 26,999 ರೂಗಳಿಗೆ ಲಾಂಚ್‌ ಮಾಡಲಾಯಿತು. ಇದೀಗ ಟಿಪ್‌ಸ್ಟರ್ ಮಾಹಿತಿ ಪ್ರಕಾರ, ಈ ವೇರಿಯಂಟ್‌ಗಳು ಈಗ ಕ್ರಮವಾಗಿ 24,999 ರೂ.ಗಳು, 26,999 ರೂ.ಗಳು ಮತ್ತು 28,999 ರೂ.ಗಳಿಗೆ ಬೆಲೆ ಏರಿಕೆ ಪಡೆಯಬಹುದು ಎಂದು ಹೇಳಲಾಗುತ್ತಿದೆ.

ವಿವೋ T4R ನಿರೀಕ್ಷಿತ ಪರಿಷ್ಕೃತ ಪ್ರೈಸ್‌ ಮಾಹಿತಿ

ವಿವೋ T4R ಬೆಲೆ ಪ್ರಸ್ತುತ 8GB + 128GB ವೇರಿಯಂಟ್‌ ಬೆಲೆ 20,999 ರೂಗಳಿಂದ ಪ್ರಾರಂಭವಾಗುತ್ತದೆ. 8GB + 256GB ವೇರಿಯಂಟ್‌ ಬೆಲೆ 22,999 ರೂಗಳು ಮತ್ತು 12GB + 256GB ವೇರಿಯಂಟ್‌ ಬೆಲೆ 24,999 ರೂಗಳು ಆಗಿದೆ. ಟಿಪ್‌ಸ್ಟರ್ ಮಾಹಿತಿ ಪ್ರಕಾರ, ಈ ಮೂರು ವೇರಿಯಂಟ್‌ಗಳು 2,000 ರೂಗಳ ಬೆಲೆ ಏರಿಕೆಯನ್ನು ಪಡೆಯಬಹುದು ಎನ್ನಲಾಗಿದೆ. ಬೆಲೆ ಏರಿಕೆ ಬಳಿಕ ಇವುಗಳ ಬೆಲೆ ಕ್ರಮವಾಗಿ 22,999 ರೂ.ಗಳು, 24,999 ರೂ.ಗಳು ಮತ್ತು 26,999 ರೂ.ಗಳು ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ವಿವೋ T4x ನಿರೀಕ್ಷಿತ ಪರಿಷ್ಕೃತ ಬೆಲೆಗಳು

6+128GB – 15,499 ರೂಗಳು ಆಗಿದೆ. ಬೆಲೆ ಏರಿಕೆ ಬಳಿಕ 16,999 ರೂಗಳು

8+128GB – 16,499 ರೂಗಳು ಆಗಿದೆ. ಬೆಲೆ ಏರಿಕೆ ಬಳಿಕ 18,999 ರೂಗಳು

8+256GB – 18,499 ರೂಗಳು ಆಗಿದೆ. ಬೆಲೆ ಏರಿಕೆ ಬಳಿಕ 20,999 ರೂಗಳು

iQOO Z10x ನಿರೀಕ್ಷಿತ ಪರಿಷ್ಕೃತ ದರಗಳು

6+128GB – 14,999ರೂಗಳು ಆಗಿದೆ. ಬೆಲೆ ಏರಿಕೆ ಬಳಿಕ 16,999 ರೂಗಳು

8+128GB – 16,499ರೂಗಳು ಆಗಿದೆ. ಬೆಲೆ ಏರಿಕೆ ಬಳಿಕ 18,999 ರೂಗಳು

8+256GB – 17,999ರೂಗಳು ಆಗಿದೆ. ಬೆಲೆ ಏರಿಕೆ ಬಳಿಕ 20,499 ರೂಗಳು

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :