ಪ್ರೇಮಿಗಳ ದಿನ ಫೆಬ್ರವರಿ 14 ಕ್ಕೆ ಮೂರೇ ದಿನ ಬಾಕಿ. ಈ ಸಂದರ್ಭದಲ್ಲಿ ನೀವೇನಾದರೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಡಲು ಬಯಸಿದರೆ iPhone 17 ಮೊಬೈಲ್‌ನತ್ತ ಗಮನಿಸಿ. ಏಕೆಂದರೆ valentine’s day ಪ್ರಯುಕ್ತ ಇ ಕಾಮರ್ಸ್ ದೈತ್ಯ Flipkart ತಾಣ iPhone 17 ಮೊಬೈಲ್‌ಗೆ ಭರ್ಜರಿ ರಿಯಾಯಿತಿ ಲಭ್ಯ ಮಾಡಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ಐಫೋನ್ 17 ಫೋನ್ ಆಪಲ್ A19 ಚಿಪ್‌ಸೆಟ್ ಜೊತೆಗೆ 48MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಫ್ಲಿಪ್‌ಕಾರ್ಟ್‌ನಲ್ಲಿ iPhone 17 ಮೊಬೈಲ್‌ಗೆ ಲಭ್ಯ ಇರುವ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Samsung ಕಂಪನಿಯ 75 ಇಂಚಿನ ಈ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಜಬರ್ದಸ್ತ್ ಇಳಿಕೆ!
ವ್ಯಾಲೆಂಟೈನ್ಸ್ ಡೇ ಅಂಗವಾಗಿ iPhone 17 ಮೊಬೈಲ್ ಸಖತ್ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಫ್ಲಿಪ್‌ಕಾರ್ಟ್ ಆನ್‌ಲೈನ್ ಪ್ಲಾಟ್‌ಫಾರ್ಮ್ ನಲ್ಲಿ 256GB ಸ್ಟೋರೇಜ್‌ನ iPhone 17 ಮೊಬೈಲ್ 82,900 ರೂಗಳ ಪ್ರೈಸ್‌ಟ್ಯಾಗ್ ಹೊಂದಿದೆ. ಆದರೆ ಗ್ರಾಹಕರು Flipkart Axis ಅಥವಾ Flipkart SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 4,000 ರೂಗಳ ಕ್ಯಾಶ್‌ಬ್ಯಾಕ್ ಡಿಸ್ಕೌಂಟ್ ಪಡೆಯಬಹುದಾಗಿದೆ. ಆಫರ್ ಪಡೆದುಕೊಂಡು ಈ ಫೋನ್ ಅನ್ನು 78,900 ರೂ.ಗಳಿಗೆ ಖರೀದಿಸಬಹುದು. ಇದಲ್ಲದೇ ಗ್ರಾಹಕರಿಗೆ ಆಕರ್ಷಕ ಎಕ್ಸ್‌ಚೇಂಜ್, ಭಿನ್ನ EMI ಆಯ್ಕೆಗಳು ಸಹ ಸಿಗಲಿವೆ.
iPhone 17 ಮೊಬೈಲ್ ಆಪಲ್ A19 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದು ಆಪಲ್ ಇಂಟೆಲಿಜೆನ್ಸ್ ಫೀಚರ್ಸ್‌ಗಳೊಂದಿಗೆ ಇತ್ತೀಚಿನ iOS 26 ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.3 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದು ಅಲ್ಯೂಮಿನಿಯಮ್ ಫ್ರೇಮ್ ರಚನೆಯ ಜೊತೆಗೆ ಸೆರಾಮಿಕ್ ಶೀಲ್ಡ್ 2 ರಕ್ಷಣೆಯನ್ನು ಪಡೆದಿದೆ. ಫೋಟೋಗ್ರಫಿಗಾಗಿ ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು ಮುಖ್ಯ ಕ್ಯಾಮೆರಾ 48MP ಸೆನ್ಸಾರ್‌ನಲ್ಲಿದೆ. ಹಾಗೆಯೇ 48MP ಅಲ್ಟ್ರಾವೈಡ್ ಲೆನ್ಸ್ ಕ್ಯಾಮೆರಾ ಸಹ ಹೊಂದಿದೆ. ಅದೇ ರೀತಿ ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 18MP ಕ್ಯಾಮೆರಾ ರಚನೆ ಪಡೆದುಕೊಂಡಿದೆ.
iPhone 17 ಮೊಬೈಲ್ 30 ಗಂಟೆಗಳ ವರೆಗೆ ವಿಡಿಯೋ ಪ್ಲೇಬ್ಯಾಕ್ ಒದಗಿಸುವ ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಅಲ್ಲದೇ ಇದು 256GB ಹಾಗೂ 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ Face ID, Emergency SOS ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ ಲ್ಯಾವೆಂಡರ್, Sage, ಮಿಸ್ಟ್ ಬ್ಲೂ, ವೈಟ್ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯ ಇದೆ.