ಅಗ್ಗದ ದರದ TECNO POP X ಮೊಬೈಲ್‌ ಈಗ ಮತ್ತಷ್ಟು ರಿಯಾಯಿತಿ ಬೆಲೆಗೆ ಲಭ್ಯ!

HIGHLIGHTS

ಟೆಕ್ನೋ ಪಾಪ್ X ಮೊಬೈಲ್‌ ಬೆಲೆಯಲ್ಲಿ ಗಮನಾರ್ಹ ಇಳಿಕೆ

ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಪೋರ್ಟ್‌ ಪಡೆದುಕೊಂಡಿದೆ

ಟೆಕ್ನೋ ಪಾಪ್ X ಮೊಬೈಲ್‌ UNISOC T7250 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ

ಪ್ರಸ್ತುತ ನೀವೇನಾದರೂ ಕಡಿಮೆ ಬೆಲೆಗೆ ಒಂದು ಬೊಂಬಾಟ್‌ 5G ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಪ್ಲಾನ್ ಮಾಡಿದ್ದರೆ ಇಲ್ಲಿ ಗಮನಿಸಿ. ಅಮೆಜಾನ್ ಆಯೋಜಿಸಿರುವ ಗ್ರೇಟ್‌ ಸಮ್ಮರ್ ಸೇಲ್‌ನಲ್ಲಿ ಟೆಕ್ನೋ ಕಂಪನಿಯ TECNO POP X ಮೊಬೈಲ್‌ ಭಾರೀ ಆಕರ್ಷಕ ರಿಯಾಯಿತಿ ಪಡೆದುಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಕಂಪನಿಯ ಈ ಮೊಬೈಲ್‌ ಆಕ್ಟಾ ಕೋರ್ UNISOC T7250 12nm ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿರುವ ಜೊತೆಗೆ ಈ ಸ್ಮಾರ್ಟ್‌ಫೋನ್ ಚಿಲ್ಲಿ ಗ್ರೀನ್‌ ಮತ್ತು ವೈಟ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಟೆಕ್ನೋ ಪಾಪ್ X ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Realme NARZO 80 Pro 5G ಫೋನ್‌ಗೆ ಭಾರೀ ಡಿಸ್ಕೌಂಟ್‌! ಈಗ ಕಡಿಮೆ ಬೆಲೆಯಲ್ಲಿ ಲಭ್ಯ

TECNO POP X ಮೊಬೈಲ್‌ಗೆ ಬಿಗ್ ಡಿಸ್ಕೌಂಟ್‌

ಟೆಕ್ನೋ ಪಾಪ್ X ಮೊಬೈಲ್‌ ಕಡಿಮೆ ಬೆಲೆಯಲ್ಲಿ ಹಾಗೂ ಆಕರ್ಷಕ ಫೀಚರ್ಸ್‌ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸದ್ಯ ಅಮೆಜಾನ್‌ ಇ ಕಾಮರ್ಸ್‌ ಆಯೋಜಿಸಿರುವ ಗ್ರೇಟ್‌ ಸಮ್ಮರ್ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. ಈ ಮೊಬೈಲ್‌ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 27,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 16,249 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ ಚಿಲ್ಲಿ ಗ್ರೀನ್‌ ಮತ್ತು ವೈಟ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿಸಬಹುದಾಗಿದೆ. ಈ ಮೊಬೈಲ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿರಿ.

ಟೆಕ್ನೋ ಪಾಪ್ X ಫೋನ್‌ ಫೀಚರ್ಸ್‌ ಹೀಗಿವೆ

ಟೆಕ್ನೋ ಕಂಪನಿಯ ಟೆಕ್ನೋ ಪಾಪ್ X ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.75 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಅಲ್ಲದೇ ಈ ಮೊಬೈಲ್‌ 20:9 ಸ್ಕ್ರೀನ್ ಅನುಪಾತ ಹೊಂದಿರುವ ಜೊತೆಗೆ 1600 x 720 ಪಿಕ್ಸೆಲ್‌ ರೆಸಲ್ಯೂಶನನ್ನು ಪಡೆದಿದೆ. ಹಾಗೆಯೇ ಈ ನೂತನ ಫೋನ್‌ ಕ್ವಾಲ್ಕಾಮ್ 1.8 GHz ಆಕ್ಟಾ-ಕೋರ್ UNISOC T7250 12nm ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು ಇದಕ್ಕೆ ಪೂರಕವಾಗಿ 4GB RAM + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ.

ಇನ್ನು ಟೆಕ್ನೋ ಪಾಪ್ X ಮೊಬೈಲ್‌ 15W ವೈರ್ಡ್ ಚಾರ್ಜಿಂಗ್ ಬೆಂಬಲಿತ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ ಹಾಗೂ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಇದರ ಜೊತೆಗೆ ಈ ಮೊಬೈಲ್‌ ಧೂಳು ಮತ್ತು ಸ್ಪ್ಲಾಶ್ ನಿರೋಧಕಕ್ಕಾಗಿ IP64 ರೇಟಿಂಗ್ ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :