Samsung Galaxy S26 Ultra ಭಾರತದಲ್ಲಿ ಬಿಡುಗಡೆ! ಈ ಪವರ್‌ಫುಲ್‌ ಮೊಬೈಲ್‌ನ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

HIGHLIGHTS

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ ಮುಖ್ಯ ಕ್ಯಾಮೆರಾ 200MP ಸಾಮರ್ಥ್ಯದಲ್ಲಿ ಇದೆ

ಸ್ಯಾಮ್‌ಸಂಗ್‌ನ ಈ ಮೊಬೈಲ್ Snapdragon 8 Elite Gen 5 ಪ್ರೊಸೆಸರ್‌ ಬಲ ಪಡೆದಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ 60W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ

Samsung Galaxy S26 Ultra: ಸ್ಯಾಮ್‌ಸಂಗ್‌ ಸಂಸ್ಥೆಯ ಹೊಸ ದೈತ್ಯ ಸ್ಮಾರ್ಟ್‌ಫೋನ್‌ Samsung Galaxy S26 Ultra ಇಂದು (ಫೆಬ್ರವರಿ 25 ರಂದು) ಅಧಿಕೃತವಾಗಿ ಬಿಡುಗಡೆ ಆಗಿದೆ. ದಕ್ಷಿಣ ಕೊರಿಯಾದ ಟೆಕ್‌ ದೊಡ್ಡಣ್ಣ ಸ್ಯಾಮ್‌ಸಂಗ್‌ ಕಂಪನಿಯು ತನ್ನ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2026 ಕಾರ್ಯಕ್ರಮದಲ್ಲಿ ಈ ಮೊಬೈಲ್‌ ಅನ್ನು ಪರಿಚಯಿಸಿದೆ. ಈ ನೂತನ ಫೋನ್‌ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿರುವ ಜೊತೆಗೆ 200MP ವೈಲ್ಡ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಹೈ ಎಂಡ್‌ ಫೋನ್‌ 5,000mAh    ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹಾಗಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್‌ನ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Airtel ಗ್ರಾಹಕರೇ ಪ್ರತಿದಿನ 2GB Data ಬೇಕೆ? ಈ ಅತ್ಯುತ್ತಮ ಪ್ಲಾನ್‌ಗಳು ನಿಮಗಾಗಿ

Samsung Galaxy S26 Ultra ಫೀಚರ್ಸ್‌ ಹೀಗಿವೆ

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ ಆಕರ್ಷಕ ಫೀಚರ್ಸ್‌ ಪಡೆದುಕೊಂಡಿದೆ. ಈ ಫೋನ್‌ 6.9 ಇಂಚಿನ QHD+  ಡೈನಾಮಿಕ್ AMOLED 2X ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ ವಿಷನ್ ಬೂಸ್ಟರ್ ಅನ್ನು ಪಡೆದುಕೊಂಡಿದೆ. ಇನ್ನು ಇದು Snapdragon 8 Elite Gen 5 ಚಿಪ್‌ಸೆಟ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು ಇದಕ್ಕೆ ಪೂರಕವಾಗಿ One UI 8.5 ಒಳಗೊಂಡ Android 16 ಓಎಸ್‌ ಕೆಲಸ ಮಾಡಲಿದೆ. ಹಾಗೆಯೇ ಈ ಮೊಬೈಲ್‌ 16GB + 1TB, 12 + 512GB  ಹಾಗೂ 12 + 256GB   ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಈ ದೈತ್ಯ ಫ್ಲ್ಯಾಗ್‌ಶಿಪ್‌ ಮೊಬೈಲ್‌ನ ಕ್ಯಾಮೆರಾ ವಿಭಾಗ ಪ್ರಮುಖ ಹೈಲೈಟ್‌ ಆಗಿದ್ದು, ಇದು ನಾಲ್ಕು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಮುಖ್ಯ ಕ್ಯಾಮೆರಾವು 200 MP ವೈಡ್ ಲೆನ್ಸ್‌ ಸಾಮರ್ಥ್ಯದಲ್ಲಿ ಇದ್ದು ಇದರ ಸೆಕೆಂಡರಿ ಕ್ಯಾಮೆರಾವು 50MP ಅಲ್ಟ್ರಾ ವೈಡ್ ಲೆನ್ಸ್‌ ಪಡೆದಿದೆ. ಹಾಗೆಯೇ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 50MP ಟೆಲಿಫೋಟೋ ಲೆನ್ಸ್‌ ಹಾಗೂ 10MP ಟೆಲಿಫೋಟೋ ಲೆನ್ಸ್‌ ಸಾಮರ್ಥ್ಯದಲ್ಲಿ ಇವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾ ರಚನೆಯನ್ನು ಒದಗಿಸಲಾಗಿದೆ.

ಅದೇ ರೀತಿ ಈ ಸ್ಮಾರ್ಟ್‌ಫೋನ್‌ 5,000 mAh    ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದ್ದು ಇದಕ್ಕೆ ಅನುಗುಣವಾಗಿ 60W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಸುಮಾರು 30 ನಿಮಿಷಗಳ ಚಾರ್ಜ್‌ ಮಾಡಿದರೆ, 75% ವರೆಗೆ ಚಾರ್ಜ್ ಒದಗಿಸಬಲ್ಲದು. ಸೂಪರ್ ಫಾಸ್ಟ್ ವೈರ್‌ಲೆಸ್ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಪವರ್‌ಶೇರ್ ಆಯ್ಕೆಗಳನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ 5G, LTE, ವೈ-ಫೈ 7, ವೈ-ಫೈ ಡೈರೆಕ್ಟ್ ಹಾಗೂ ಬ್ಲೂಟೂತ್ v 6.0 ನಂತಹ ಆಯ್ಕೆಗಳನ್ನು ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಸೌಲಭ್ಯ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಬೆಲೆ ಹಾಗೂ ಲಭ್ಯತೆ

Samsung Galaxy S26 ಸರಣಿ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈ ಸರಣಿಯ ಮೇನ್ ಹೈಲೈಟ್‌ ಎನಿಸಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S26 ಅಲ್ಟ್ರಾ ಮೊಬೈಲ್‌ ಇಂದಿನಿಂದ (ಫೆ 25 ರಿಂದ) ಪ್ರಿ-ಆರ್ಡರ್‌ಗೆ ಲಭ್ಯವಿರುತ್ತದೆ. ಭಾರತದಲ್ಲಿ ಈ ಫೋನಿನ 12GB + 512GB ವೇರಿಯಂಟ್‌ ಬೆಲೆ 1,39,999 ರೂ.ಗಳು ಆಗಿದೆ. ಹಾಗೆಯೇ 16GB + 1TB ವೇರಿಯಂಟ್‌ ಬೆಲೆಯು 1,89,999 ರೂ.ಗಳು ಆಗಿದೆ. ಇನ್ನು ಈ ಮೊಬೈಲ್‌ ಕೋಬಾಲ್ಟ್‌ ವೈಲೇಟ್‌, ವೈಟ್‌, ಬ್ಲ್ಯಾಕ್‌ ಹಾಗೂ ಸ್ಕೈ ಬ್ಲೂ ಕಲರ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಎಕ್ಸ್‌ಕ್ಲೂಸಿವ್‌ಗಾಗಿ ಪಿಂಕ್‌ ಮತ್ತು ಸಿಲ್ವರ್‌ ಬಣ್ಣಗಳಲ್ಲಿ ಸಹ ಲಭ್ಯವಾಗಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :