ಈ ವರ್ಷದ ಬಹುನಿರೀಕ್ಷಿತ ಮೊಬೈಲ್ ಲಾಂಚ್‌ಗಳಲ್ಲಿ Samsung Galaxy S26 ಸರಣಿ ಕೂಡಾ ಸೇರಿದೆ. ಈಗಾಗಲೇ ಈ ಸರಣಿಯ ಲೀಕ್ ಮಾಹಿತಿಗಳು ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಲಭ್ಯ ವರದಿಗಳ ಪ್ರಕಾರ ಈ ನೂತನ ಸರಣಿಯು Galaxy S26, Galaxy S26 Plus, and Galaxy S26 Ultra ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್‌ಗಳು ಕ್ಯಾಮೆರಾ ವಿಭಾಗದಲ್ಲಿ ಹಾಗೂ ಪ್ರೊಸೆಸರ್ ಪವರ್‌ನಲ್ಲಿ ಅಪ್‌ಗ್ರೇಡ್ ಸೌಲಭ್ಯ ಪಡೆದಿರಲಿವೆ ಎನ್ನಲಾಗಿದೆ. ಈ ಸರಣಿಯ ಜೊತೆಗೆ ಸಂಸ್ಥೆಯು Galaxy Buds 4 ಇಯರ್‌ಬಡ್ಸ್ ಲೈನ್‌ಅಪ್ ಸಹ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇನ್ನು ಇತ್ತೀಚಿನ ಹೊಸ ಲೀಕ್ ಮಾಹಿತಿಯೊಂದು Samsung Galaxy S26 ಸರಣಿ ಬಿಡುಗಡೆ ದಿನಾಂಕ ಸೂಚಿಸಿದೆ.
Also Read : Samsung Galaxy S24 5G ಬೆಲೆಯಲ್ಲಿ ಜಬರ್ದಸ್ತ್ ಇಳಿಕೆ! 50MP ಕ್ಯಾಮೆರಾ..ಬಿಗ್ ಬ್ಯಾಟರಿ ಆಯ್ಕೆ
ಪ್ರಮುಖ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅಧಿಕೃತ Samsung ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ Samsung Galaxy S26 ಸರಣಿಯ ಬಿಡುಗಡೆ ದಿನಾಂಕವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಮಾಹಿತಿ ಪ್ರಕಾರ ಮುಂದಿನ Galaxy Unpacked ಕಾರ್ಯಕ್ರಮ ಇದೇ ಫೆಬ್ರವರಿ 25, 2026 ರಂದು ಫಿಕ್ಸ್ ಆಗಿದೆ. ಈ ಹಿಂದಿನ ಲೀಕ್ ಮಾಹಿತಿಗಳು ಈ ಸರಣಿಯ ಫೋನ್‌ಗಳು ಮಾರ್ಚ್ 11 ರಿಂದ ಮಾರಾಟಕ್ಕೆ ಬರಲಿವೆ ಎಂದು ಸೂಚಿಸಿದ್ದವು. ಅಂದಹಾಗೆ ಸಂಸ್ಥೆಯು ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ದೃಢೀಕರಿಸಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಹಾಗೆಯೇ Samsung Galaxy S26 Ultra ಮೊಬೈಲ್ ಬೆಲೆ ಭಾರತದಲ್ಲಿ 1,29,999 ರೂಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ.
Samsung ನ ಈ ಫೋನ್ 6.3 ಇಂಚಿನ AMOLED 2X ಡಿಸ್‌ಪ್ಲೇ ಪಡೆದಿರಲಿದ್ದು ಇದು FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದುವ ನಿರೀಕ್ಷೆಯಿದೆ. ಹಾಗೆಯೇ ಇದು Exynos 2600 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. 12GB ವರೆಗೆ RAM ಮತ್ತು 512GB ವರೆಗೆ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿರಲಿದೆ. ಅಲ್ಲದೇ ಇದು 25W ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 4,300 mAh ಬ್ಯಾಟರಿ ಹೊಂದಿರಲಿದೆ. ಫೋಟೋಗ್ರಫಿಗಾಗಿ 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾವೈಡ್ ಲೆನ್ಸ್ ಮತ್ತು 12MP ಟೆಲಿಫೋಟೋ ಕ್ಯಾಮೆರಾ ಅನ್ನು ಹೊಂದಿರಬಹುದು ಎನ್ನಲಾಗಿದೆ.
Samsung Galaxy S26 Plus ಮೊಬೈಲ್ 120Hz ರಿಫ್ರೆಶ್ ರೇಟ್ ಜೊತೆಗೆ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ ಎಂದು ಹೇಳಲಾಗುತ್ತದೆ. ಇನ್ನು ಈ ಫೋನ್ Exynos 2600 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ 12GB ವರೆಗೆ RAM ಮತ್ತು 512GB ವರೆಗೆ ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಉಳಿದಂತೆ 45W ಚಾರ್ಜಿಂಗ್ ಬಲದೊಂದಿಗೆ 4,900 mAh ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಮುಖ್ಯ ಸೆನ್ಸಾರ್ 50MP ಆಗಿರಲಿದೆ. ಇದರೊಂದಿಗೆ 12MP ಅಲ್ಟ್ರಾವೈಡ್ ಲೆನ್ಸ್ ಮತ್ತು 12MP ಟೆಲಿಫೋಟೋ ಸೆನ್ಸಾರ್ ಕ್ಯಾಮೆರಾ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.
Samsung Galaxy S26 Ultra ಈ ಮೊಬೈಲ್ 6.9 ಇಂಚಿನ AMOLED 2X ಡಿಸ್‌ಪ್ಲೇ ಪಡೆದಿರಲಿದ್ದು ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಸಪೋರ್ಟ್ ನೀಡುವ ನಿರೀಕ್ಷೆಯಿದೆ. ಇದು Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಹೊಂದಿರಲಿದ್ದು ಇದಕ್ಕೆ ಅನುಗುಣವಾಗಿ 16GB RAM ಮತ್ತು 1TB ವರೆಗಿನ ಸ್ಟೋರೇಜ್ ಆಯ್ಕೆಗಳನ್ನು ಪಡೆದಿರಲಿದೆ. ಹಾಗೆಯೇ 5,400 mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿರಲಿದ್ದು 60W ಚಾರ್ಜಿಂಗ್ ಸಪೋರ್ಟ್ ಒಳಗೊಂಡಿರಲಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 200MP ಆಗಿರಲಿದೆ.