ಇಂದು Samsung Galaxy S26, Galaxy S26 Plus ಮತ್ತು Galaxy S26 Ultra ಬಿಡುಗಡೆ! ಏನನ್ನು ನಿರೀಕ್ಷಿಸಬಹುದು

HIGHLIGHTS

ಇಂದು Samsung Galaxy S26 ಸರಣಿ ಲಾಂಚ್‌ ಆಗಲಿದೆ

ಗ್ಯಾಲಕ್ಸಿ S26 ಅಲ್ಟ್ರಾ Snapdragon 8 Elite Gen 5 ಪ್ರೊಸೆಸರ್‌ ಪಡೆದಿರಲಿದೆ

ಲಾಂಚ್‌ ಕಾರ್ಯಕ್ರಮವನ್ನು Samsung ವೆಬ್‌ಸೈಟ್ ಮೂಲಕ ವೀಕ್ಷಿಸಬಹುದು

ಸ್ಯಾಮ್‌ಸಂಗ್ ಕಂಪನಿಯ ಬಹುನಿರೀಕ್ಷಿತ Samsung Galaxy Unpacked 2026 ಕಾರ್ಯಕ್ರಮ ಇಂದು (ಫೆಬ್ರವರಿ 25 ರಂದು) ನಡೆಯಲಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕಂಪನಿಯು Samsung Galaxy S26 series ಫ್ಲ್ಯಾಗ್‌ಶಿಪ್‌ ಸರಣಿ ಅನಾವರಣಗೊಳಿಸಲಿದೆ. ಇನ್ನು ಹೊಸ ಶ್ರೇಣಿಯು Galaxy S26, Galaxy S26 Plus ಮತ್ತು Galaxy S26 Ultra ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಇವುಗಳೊಂದಿಗೆ ಸಂಸ್ಥೆಯು ತನ್ನ Galaxy Buds ಡಿವೈಸ್‌ ಅನ್ನು ಸಹ ಪರಿಚಯಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಾದರೆ Samsung Galaxy Unpacked 2026 ಕಾರ್ಯಕ್ರಮ ಲೈವ್‌ ವೀಕ್ಷಿಸುವುದು ಹೇಗೆ, ನಿರೀಕ್ಷಿತ ಫೀಚರ್ಸ್‌ ಏನು ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಭಾರತದಲ್ಲಿ iQOO 15R ಬಿಡುಗಡೆ! 50MP ಕ್ಯಾಮೆರಾ, 7600mAh ಬ್ಯಾಟರಿ ಸಪೋರ್ಟ್‌ ಇದೆ

Samsung Galaxy Unpacked 2026: ಲೈವ್ ವೀಕ್ಷಣೆ ಹೇಗೆ

ಸ್ಯಾಮ್‌ಸಂಗ್‌ ಕಂಪನಿಯು Samsung Galaxy Unpacked ಕಾರ್ಯಕ್ರಮದಲ್ಲಿ Samsung Galaxy S26 ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಕಾರ್ಯಕ್ರಮವು ಇಂದು ಫೆಬ್ರವರಿ 25 ರಂದು) ರಾತ್ರಿ 11:30 ಕ್ಕೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯುತ್ತದೆ. ಆಸಕ್ತರು ಈ ಕಾರ್ಯಕ್ರಮವನ್ನು Samsung ಕಂಪನಿಯ ಅಧಿಕೃತ ವೆಬ್‌ಸೈಟ್ ಅಥವಾ ಸಂಸ್ಥೆಯ ಅಧಿಕೃತ YouTube ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಸ್ಯಾಮ್‌ಸಂಗ್‌ನ ಈ ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು

Samsung Galaxy Unpacked 2026 ಕಾರ್ಯಕ್ರಮದ ಪ್ರಮುಖ ಹೈಲೈಟ್‌ ಎಂದರೆ Galaxy S26 ಲೈನ್‌ಅಪ್ ಆಗಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ S26 ಅಲ್ಟ್ರಾ, ಗ್ಯಾಲಕ್ಸಿ S26 ಪ್ಲಸ್ ಮತ್ತು ಗ್ಯಾಲಕ್ಸಿ S26 ಮಾಡೆಲ್‌ಗಳು ಸೇರಿವೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಗ್ಯಾಲಕ್ಸಿ S26 ಮತ್ತು ಗ್ಯಾಲಕ್ಸಿ S26 ಪ್ಲಸ್ Exynos ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರಲಿವೆ ಎಂದು ಹೇಳಲಾಗುತ್ತಿದೆ. ಆದರೆ ಟಾಪ್-ಎಂಡ್ ಗ್ಯಾಲಕ್ಸಿ S26 ಅಲ್ಟ್ರಾ ಫೋನ್‌ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್ ಅನ್ನು ಒಳಗೊಂಡಿರುವ ಸಾಧ್ಯತೆ ಇದೆ.

ಇನ್ನು Samsung Galaxy S26 Ultra ಈ ಮೊಬೈಲ್‌ 6.9 ಇಂಚಿನ AMOLED 2X ಡಿಸ್‌ಪ್ಲೇ ಪಡೆದಿರಲಿದ್ದು ಇದರ ಜೊತೆಗೆ 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ನೀಡುವ ನಿರೀಕ್ಷೆಯಿದೆ. ಇದು Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿರಲಿದ್ದು ಇದಕ್ಕೆ ಅನುಗುಣವಾಗಿ 16GB RAM ಮತ್ತು 1TB ವರೆಗಿನ ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿರಲಿದೆ. ಹಾಗೆಯೇ 5,400 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು 60W ಚಾರ್ಜಿಂಗ್ ಸಪೋರ್ಟ್ ಒಳಗೊಂಡಿರಲಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 200MP ಆಗಿರಲಿದೆ.

Samsung Galaxy S26 Plus ಮೊಬೈಲ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ ಎಂದು ಹೇಳಲಾಗುತ್ತದೆ. ಇನ್ನು ಈ ಫೋನ್‌ Exynos 2600 ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ 12GB ವರೆಗೆ RAM ಮತ್ತು 512GB ವರೆಗೆ ಸ್ಟೋರೇಜ್‌ ಆಯ್ಕೆ ಪಡೆದಿರಲಿದೆ. ಉಳಿದಂತೆ 45W ಚಾರ್ಜಿಂಗ್ ಬಲದೊಂದಿಗೆ 4,900 mAh ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :