Samsung Galaxy S25 ಬೆಲೆಯಲ್ಲಿ ದಿಢೀರ್ ಇಳಿಕೆ! ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌, ಟ್ರಿಪಲ್‌ ಕ್ಯಾಮೆರಾ

HIGHLIGHTS

ಅಮೆಜಾನ್‌ ತಾಣದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಭಾರೀ ಡಿಸ್ಕೌಂಟ್‌ ಪಡೆದಿದೆ

ಗ್ಯಾಲಕ್ಸಿ S25 ಮೊಬೈಲ್‌ Snapdragon 8 Elite ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಪಡೆದಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೌಲಭ್ಯ ಪಡೆದುಕೊಂಡಿದೆ

ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ S26 ಸರಣಿಯನ್ನು ಪರಿಚಯಿಸಿದೆ. ಅದರ ಬೆನ್ನಲ್ಲೇ Samsung Galaxy S25 ಮೊಬೈಲ್‌ ಭಾರೀ ಬೆಲೆ ಇಳಿಕೆ ಪಡೆದಿದೆ. ಹೌದು, ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಮೊಬೈಲ್‌ ಆಕರ್ಷಕ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಅಲ್ಲದೇ ಗ್ರಾಹಕರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ಸ್ಯಾಮ್‌ಸಂಗ್ ಕಂಪನಿಯ ಈ ಸ್ಮಾರ್ಟ್‌ಫೋನ್‌ Snapdragon 8 Elite ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು ಇದರೊಂದಿಗೆ 4,000mAh ಬ್ಯಾಟರಿ ಬೆಂಬಲವನ್ನು ಒಳಗೊಂಡಿದೆ. ಅಂದಹಾಗೆ ಈ ಮೊಬೈಲ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದರೆ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Motorola Edge 70 Fusion ಬಿಡುಗಡೆಗೆ ದಿನಾಂಕ ಫಿಕ್ಸ್‌! 7000mAh ಬ್ಯಾಟರಿ, 50MP ಕ್ಯಾಮೆರಾ ಖಚಿತ

Samsung Galaxy S25 ಮೊಬೈಲ್‌ ಬೆಲೆ ಇಳಿಕೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 5G ಮೊಬೈಲ್‌ ಪ್ರಸ್ತುತ Amazon ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. ಈ ಮೊಬೈಲ್‌ 12GB RAM + 256GB ವೇರಿಯಂಟ್‌ ಬೆಲೆ 80,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಫೋನ್‌ 74,999 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದಾಗಿದೆ. ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಐಸ್‌ ಬ್ಲೂ, ನೇವಿ, ಸಿಲ್ವರ್ ಶಾಡೋ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

Samsung Galaxy S25

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 5G ಪ್ರಮುಖ ಫೀಚರ್ಸ್‌ ಹೀಗಿವೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 5G ಮೊಬೈಲ್‌ 6.2 ಇಂಚಿನ ಡೈನಾಮಿಕ್ LTPO AMOLED 2X ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಹೊಂದಿದ್ದು ಜೊತೆಗೆ 2,600 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಮೊಬೈಲ್‌ Snapdragon 8 Elite ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 5G ಮೊಬೈಲ್‌ ಹಿಂಭಾಗದಲ್ಲಿ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP OIS ಸೆನ್ಸಾರ್‌ ಅನ್ನು ಒಳಗೊಂಡಿದೆ. ಸೆಕೆಂಡರಿ ಕ್ಯಾಮೆರಾ 12MP ಅಲ್ಟ್ರಾ ವೈಡ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಹಾಗೂ ತೃತೀಯ ಕ್ಯಾಮೆರಾ 10MP ಟೆಲಿಫೋಟೋ ಲೆನ್ಸ್‌ ಬಲ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 12MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 4,000mAh ಬ್ಯಾಟರಿ ಜೊತೆಗೆ 25W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಪಡೆದಿದೆ. ಹಾಗೆಯೇ 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :