200MP Camera Samsung Galaxy S24 Ultra massive price drop on Flipkart sale
ಟೆಕ್ ದಿಗ್ಗಜ ಸ್ಯಾಮ್‌ಸಂಗ್ ಸಂಸ್ಥೆಯ Samsung Galaxy S24 Ultra ಫ್ಲ್ಯಾಗ್‌ಶಿಪ್ ಮೊಬೈಲ್ ಖರೀದಿಸಲು ಇದುವೇ ಸಕಾಲ. ಏಕೆಂದರೆ ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎನಿಸಿರುವ Flipkart ವೆಬ್‌ಸೈಟ್ Samsung Galaxy S24 Ultra ಮೊಬೈಲ್‌ಗೆ ಆಕರ್ಷಕ ರಿಯಾಯಿತಿ ನೀಡಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್ ಪಡೆಯಲು ಅವಕಾಶ ಇದೆ. ಇನ್ನು ಈ ದೈತ್ಯ ಫೋನ್ ಕ್ವಾಲ್ಕಮ್ Snapdragon 8 Gen 3 ಚಿಪ್‌ಸೆಟ್ ಕಾರ್ಯವೈಖರಿಯನ್ನು ಒಳಗೊಂಡಿದ್ದು ಜೊತೆಗೆ 200MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ Samsung Galaxy S24 Ultra ಫೋನಿಗೆ ಲಭ್ಯ ಇರುವ ಆಫರ್ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಭರ್ಜರಿ ಆಫರ್‌ನಲ್ಲಿ iPhone 16 ಖರೀದಿಸಲು ಇದಕ್ಕಿಂತ ಒಳ್ಳೆಯ ಸಮಯ ಇನ್ನೊಂದಿಲ್ಲ!
ಸ್ಯಾಮ್‌ಸಂಗ್ ಬ್ರ್ಯಾಂಡ್‌ನ Samsung Galaxy S24 Ultra ಮೊಬೈಲ್ ಸಖತ್ ಬೆಲೆ ಇಳಿಕೆ ಪಡೆದಿದೆ. Flipkart ಇ ಕಾಮರ್ಸ್ ತಾಣದಲ್ಲಿ ಈ ಮೊಬೈಲ್ 1,34,999 ರೂಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಆದರೆ ಇದೀಗ 99,989 ರೂಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಪಡೆಯಬಹುದು. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಭಿನ್ನ EMI ಆಯ್ಕೆಗಳನ್ನು ಪಡೆಯಬಹುದು. ಇನ್ನು ಈ ಫೋನ್ ಟೈಟಾನಿಯಂ ಗ್ರೇ ಹಾಗೂ ಟೈಟಾನಿಯಂ ವೈಲೆಟ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Samsung Galaxy S24 Ultra ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.8 inch ಡೈನಾಮಿಕ LTPO AMOLED 2X ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ Gorilla Armor ಪ್ರೊಟೆಕ್ಷನ್ ಪಡೆದುಕೊಂಡಿದೆ. ಈ ಮೊಬೈಲ್ ಕ್ವಾಲ್ಕಮ್ Snapdragon 8 Gen 3 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 12GB RAM ಮತ್ತು 512GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಇದು AI ಆಯ್ಕೆಗಳನ್ನು ಪಡೆದಿದ್ದು ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.
ಹಾಗೆಯೇ ಸ್ಯಾಮ್‌ಸಂಗ್‌ನ Samsung Galaxy S24 Ultra ಮೊಬೈಲ್ ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಈ ಫೋನ್ 200MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು ಹಾಗೆಯೇ ಇದರ ಸೆಕೆಂಡರಿ 50MP ಪೆರಿಸ್ಕೋಪ್ ಟೆಲಿಫೋಟೋ ಪಡೆದಿದೆ. ಅಲ್ಲದೇ ಉಳಿದೆರಡು ಕ್ಯಾಮೆರಾಗಳು 10MP ಟೆಲಿಫೋಟೋ ಮತ್ತು 12MP ಅಲ್ಟ್ರಾವೈಡ್ ಸೆನ್ಸರ್ ಸೌಲಭ್ಯ ಅನ್ನು ಪಡೆದಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ ಈ ಫೋನ್ 12MP ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಫೋನ್ 5000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.