Samsung Galaxy A35 5G get huge price drop on Flipkart
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ A ಸರಣಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಪಡೆದಿವೆ. ಆ ಪೈಕಿ ಒಂದಾಗಿರುವ Samsung Galaxy A35 5G ಮೊಬೈಲ್ ಅನ್ನು ಆಫರ್‌ನಲ್ಲಿ ಖರೀದಿಸಲು ಈಗ ಅವಕಾಶ ಇದೆ. ಹೌದು ಲೀಡಿಂಗ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಎನಿಸಿರುವ Flipkart ವೆಬ್‌ಸೈಟ್ Samsung Galaxy A35 5G ಮೊಬೈಲ್‌ಗೆ ಬೊಂಬಾಟ್ ಬೆಲೆ ಇಳಿಕೆ ನೀಡಿದೆ. ಅಲ್ಲದೇ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ Samsung Exynos 1380 ಚಿಪ್‌ಸೆಟ್ ಕಾರ್ಯ ವೈಖರಿಯನ್ನು ಒಳಗೊಂಡಿದ್ದು ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ Samsung Galaxy A35 5G ಫೋನಿಗೆ ಲಭ್ಯ ಇರುವ ಆಫರ್ ಬೆಲೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Jio ಬಳಕೆದಾರರೇ ಅಧಿಕ ಡೇಟಾ ಬೇಕಿದ್ದರೆ ಈ ರೀಚಾರ್ಜ್ ಪ್ಲಾನ್‌ಗಳನ್ನು ಒಮ್ಮೆ ಗಮನಿಸಿ!
ಸ್ಯಾಮ್‌ಸಂಗ್ ಕಂಪನಿಯ Samsung Galaxy A35 5G ಮೊಬೈಲ್ ಆಕರ್ಷಕ ಬೆಲೆ ಇಳಿಕೆ ಕಂಡಿದ್ದು ಗ್ರಾಹಕರಿಗೆ ನೇರವಾಗಿ 14000 ರೂಗಳ ಡಿಸ್ಕೌಂಟ್ ಸಿಗಲಿದೆ. Flipkart ಇ ಕಾಮರ್ಸ್ ತಾಣದಲ್ಲಿ ಈ ಮೊಬೈಲ್ 33,999 ರೂಗಳ ಪ್ರೈಸ್‌ಟ್ಯಾಗ್ ಪಡೆದಿದ್ದು, ಆದರೆ ಸದ್ಯ 19,999 ರೂಗಳ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಪಡೆಯಬಹುದು. ಅಲ್ಲದೇ ಆಯ್ದ ಬ್ಯಾಂಕ್‌ಗಳಿಂದ ಭಿನ್ನ EMI ಆಯ್ಕೆಗಳನ್ನು ಪಡೆಯಬಹುದು. ಇನ್ನು ಈ ಫೋನ್ ಐಸ್‌ಬ್ಲೂ, Lilac ಹಾಗೂ ನೇವಿ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Samsung Galaxy A35 5G ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.6 ಇಂಚಿನ ಪುಲ್ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ Gorilla ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದುಕೊಂಡಿದೆ. ಈ ಮೊಬೈಲ್ Samsung Exynos 1380 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಇದು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಬಾಹ್ಯ ಮೆಮೊರಿಯನ್ನು 1 TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಸಹ ಪಡೆದಿದೆ.
ಹಾಗೆಯೇ ಸ್ಯಾಮ್‌ಸಂಗ್‌ನ Samsung Galaxy A35 5G ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು ಹಾಗೆಯೇ ಇದರ ಸೆಕೆಂಡರಿ 8MP ಸೆನ್ಸಾರ್ ಪಡೆದಿದೆ. ಅಲ್ಲದೇ ತೃತೀಯ ಕ್ಯಾಮೆರಾವು 5MP ಸೆನ್ಸರ್ ಸೌಲಭ್ಯ ಅನ್ನು ಪಡೆದಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 13MP ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಲದೇ ಪನೋರಮಾ, ಪೋರ್ಟ್ರೇಟ್, ಪ್ರೊ ವೀಡಿಯೊ, ಸಿಂಗಲ್ ಟೇಕ್, ಸ್ಲೋ ಮೋಷನ್, ಆಯ್ಕೆಗಳು ಇವೆ. ಇನ್ನು ಈ ಫೋನ್ 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.