ಹೊಸದಾಗಿ ಬಜೆಟ್ ಬೆಲೆಯಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಗ್ರಾಹಕರೇ ಇಲ್ಲಿ ಗಮನಿಸಿ. ಜನಪ್ರಿಯ ಇ ಕಾಮರ್ಸ್ ವೆಬ್‌ಸೈಟ್ ಎನಿಸಿರುವ ಫ್ಲಿಪ್‌ಕಾರ್ಟ್ ತಾಣದಲ್ಲಿ ಇದೀಗ ಸ್ಯಾಮ್‌ಸಂಗ್‌ನ Samsung Galaxy A35 5G ಸ್ಮಾರ್ಟ್‌ಫೋನ್ ಸಖತ್ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದಲ್ಲದೇ ಗ್ರಾಹಕರು ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಫೋನ್ Exynos 1380 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ ಹಾಗೂ 5,000mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ AMOLED ಡಿಸ್‌ಪ್ಲೇ ಅನ್ನು ಸಹ ಒಳಗೊಂಡಿದೆ. ಹಾಗಾದರೆ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಮೊಬೈಲ್‌ಗೆ ಲಭ್ಯ ಇರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
Also Read : ಭಾರತದಲ್ಲಿ OnePlus Nord Buds 4 Pro ಇಯರ್‌ಬಡ್ಸ್ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್
ಸ್ಯಾಮ್‌ಸಂಗ್ ಕಂಪನಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಮೊಬೈಲ್ ಪ್ರಸ್ತುತ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬೊಂಬಾಟ್ ರಿಯಾಯಿತಿ ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB RAM + 128GB ವೇರಿಯಂಟ್ ಬೆಲೆ 33,999 ರೂಗಳು ಪ್ರೈಸ್‌ಟ್ಯಾಗ್ ಹೊಂದಿದೆ. ಆದರೆ ಪ್ರಸ್ತುತ ಈ ಮೊಬೈಲ್ ಅನ್ನು ಗ್ರಾಹಕರು 19,999 ರೂಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಅಲ್ಲದೇ ಆಸಕ್ತ ಗ್ರಾಹಕರು ಲಭ್ಯ ಇರುವ ಆಯ್ದ ಬ್ಯಾಂಕ್‌ಗಳ ಕೊಡುಗೆ ಪಡೆದುಕೊಂಡರೆ ಇನ್ನಷ್ಟು ರಿಯಾಯಿತಿ ಪಡೆಯಬಹುದು. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಸಹ ಲಭ್ಯ ಇವೆ. ಅಂದಹಾಗೆ ಈ ಫೋನ್ ಐಸ್‌ಬ್ಲೂ, Lilac ಹಾಗೂ ನೇವಿ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಫೋನ್ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.6 ಇಂಚಿನ ಪುಲ್ ಹೆಚ್‌ಡಿ+ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ Gorilla ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ Samsung Exynos 1380 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಅನುಗುಣವಾಗಿ ಇದು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. ಅಲ್ಲದೇ ಎಸ್‌ಡಿ ಕಾರ್ಡ್ ಮೂಲಕ 1 TB ವರೆಗೆ ಬಾಹ್ಯ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಸಹ ಪಡೆದಿದೆ.
ಹಾಗೆಯೇ ಸ್ಯಾಮ್‌ಸಂಗ್ ಸಂಸ್ಥೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ A35 5G ಮೊಬೈಲ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಈ ಮೊಬೈಲ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು ಹಾಗೆಯೇ ಇದರ ಸೆಕೆಂಡರಿ 8MP ಸೆನ್ಸಾರ್ ಪಡೆದಿದೆ. ಅಲ್ಲದೇ ತೃತೀಯ ಕ್ಯಾಮೆರಾವು 5MP ಸೆನ್ಸರ್ ಸೌಲಭ್ಯ ಅನ್ನು ಪಡೆದಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 13MP ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಲದೇ ಪನೋರಮಾ, ಪೋರ್ಟ್ರೇಟ್, ಪ್ರೊ ವೀಡಿಯೊ, ಸಿಂಗಲ್ ಟೇಕ್, ಸ್ಲೋ ಮೋಷನ್, ಆಯ್ಕೆಗಳು ಇವೆ. ಇನ್ನು ಈ ಮೊಬೈಲ್ 5000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.