ಬಿಡುಗಡೆಗೂ ಮುನ್ನವೇ Samsung Galaxy A07 5G ಬೆಲೆ ಲೀಕ್‌! ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ

Updated on 27-Jan-2026
HIGHLIGHTS

Samsung Galaxy A07 5G ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ

Samsung Galaxy A07 5G ಫೋನ್‌ MediaTek Dimensity 6300 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ

Samsung ನ ಈ ಫೋನ್‌ ಬ್ಲ್ಯಾಕ್‌ ಹಾಗೂ ಲೈಟ್‌ ವೈಲೆಟ್‌ ಕಲರ್‌ ಆಯ್ಕೆ ಹೊಂದಿರಲಿದೆ

ದಕ್ಷಿಣ ಕೊರಿಯಾದ ಟೆಕ್ ದೊಡ್ಡಣ್ಣ Samsung ಈಗಾಗಲೇ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ ಶ್ರೇಣಿಯ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಖದರ ಹೊಂದಿದೆ. ದೇಶಿಯ ಮಾರುಕಟ್ಟೆಗೆ ಹಲವು ಬಜೆಟ್‌ ದರದ ಫೋನ್‌ಗಳಲ್ಲಿ ಪರಿಚಯಿಸಿರುವ Samsung ಸದ್ಯದಲ್ಲೇ ಮತ್ತೊಂದು ಹೊಸ 5G ಮೊಬೈಲ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ Samsung Galaxy A07 5G ಸ್ಮಾರ್ಟ್‌ಫೋನ್‌. ಲೀಕ್‌ ಮಾಹಿತಿ ಪ್ರಕಾರ ಈ ಮೊಬೈಲ್‌ ಬಿಗ್ ಡಿಸ್‌ಪ್ಲೇ, ತನ್ನ ವರ್ಗದಲ್ಲೇ ವೇಗದ ಪ್ರೊಸೆಸರ್‌, ಉತ್ತಮ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಶೀಘ್ರದಲ್ಲೇ ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ. ಮುಂಬರಲಿರುವ Samsung Galaxy A07 5G ಫೋನಿನ ಫೀಚರ್ಸ್‌ ಮಾಹಿತಿ ಮುಂದೆ ತಿಳಿಯೋಣ.

Also Read : Dhurandhar OTT Release: ಧುರಂಧರ್ ಸಿನಿಮಾ ಈ ವಾರ OTTಗೆ ಬರುತ್ತಾ? ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ

Samsung Galaxy A07 5G: ಭಾರತದಲ್ಲಿ ಬಿಡುಗಡೆ ದಿನಾಂಕ

ಸ್ಯಾಮ್‌ಸಂಗ್ ಕಂಪನಿಯ ನೂತನ Samsung Galaxy A07 5G ಫೋನ್‌ ಮುಂದಿನ ಕೆಲವು ವಾರಗಳಲ್ಲಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಹಾಗೆಯೇ ಕೆಲವು ಲೀಕ್‌ ಮಾಹಿತಿಗಳು ವರದಿ ಮಾಡಿರುವಂತೆ Samsung Galaxy A07 5G ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 15,999 ರೂಗಳು ಆಗಿರಲಿವೆ ಎನ್ನಲಾಗಿದೆ. ಇನ್ನು ಈ ಫೋನ್‌ ಬ್ಲ್ಯಾಕ್‌ ಹಾಗೂ ಲೈಟ್‌ ವೈಲೆಟ್‌ ಕಲರ್‌ ಆಯ್ಕೆಯಲ್ಲಿ ಲಗ್ಗೆ ಇಡುವ ನಿರೀಕ್ಷೆಗಳು ಇವೆ.

Samsung Galaxy A07 5G ನಿರೀಕ್ಷಿತ ಫೀಚರ್ಸ್‌ ಮಾಹಿತಿ

Samsung ಸಂಸ್ಥೆಯ ಮುಂಬರುವ Samsung Galaxy A07 5G ಮೊಬೈಲ್‌ 6.7 ಇಂಚಿನ IPS LCD ಮಾದರಿಯ ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್‌ ಮತ್ತು ತನ್ನ ವರ್ಗದಲ್ಲೇ ಗರಿಷ್ಠ ಬ್ರೈಟ್ನೆಸ್‌ ಬೆಂಬಲ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಇದರೊಂದಿಗೆ ಈ ಮೊಬೈಲ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲ ಪಡೆದಿರಲಿದ್ದು ಅದಕ್ಕೆ ಅನುಗುಣವಾಗಿ 25W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಹಾಗೆಯೇ Samsung Galaxy A07 5G ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಹೊಂದಿರಲಿದ್ದು ಇದರ ಸೆಕೆಂಡರಿ ಕ್ಯಾಮೆರಾವು 2MP ಸಾಮರ್ಥ್ಯದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8MP ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಲೀಕ್ ವರದಿಗಳು ಹೇಳುತ್ತವೆ. ಇದಲ್ಲದೇ ಈ ಮೊಬೈಲ್‌ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54 ರೇಟಿಂಗ್‌ ಸೌಲಭ್ಯ ಪಡೆದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಬರಲಿರುವ ಬಜೆಟ್‌ ಫೋನ್‌ Gemini and Circle to Search ನಂತಹ AI ಆಯ್ಕೆಗಳನ್ನು ಸಹ ಪಡೆದಿರುವ ನಿರೀಕ್ಷೆಗಳಿವೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :