ರೆಡ್ಮಿ ಕಂಪನಿಯು ಇದೀಗ ಭಾರತದಲ್ಲಿ ಹೊಸದಾಗಿ Redmi Turbo 5 ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ತಯಾರಿ ನಡೆಸಿದೆ. ಈ ಫೋನ್ ಬಿಡುಗಡೆ ಕುರಿತಾಗಿ Amazon ಇ ಕಾಮರ್ಸ್ ತಾಣದಲ್ಲಿ ಪ್ರತ್ಯೇಕ ಮೈಕ್ರೋಸೈಟ್ ಅನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಮಾಡಲಾಗಿದೆ. ಇನ್ನು ಮುಂಬರುವ ಈ ಮೊಬೈಲ್‌ನ ಪ್ರಮುಖ ಹೈಲೈಟ್ ಎಂದರೆ ರೇಸಿಂಗ್ ನಂತಹ ವೇಗದ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಹಾಗೆಯೇ ಈ ಫೋನ್ 20MP ಸೆಲ್ಫಿ ಕ್ಯಾಮೆರಾ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಹಾಗಾದರೆ ರೆಡ್ಮಿ ಟರ್ಬೋ 5 ಮೊಬೈಲ್‌ನ ಹೊಸ ಅಪ್‌ಡೇಟ್ಸ್ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಸದ್ದಿಲ್ಲದೆ ಭಾರತದಲ್ಲಿ Oppo A6c ಸ್ಮಾರ್ಟ್‌ಫೋನ್ ಬಿಡುಗಡೆ! 7,000mAh ಬ್ಯಾಟರಿ
ರೆಡ್ಮಿ ಕಂಪನಿಯ ಮುಂಬರುವ ನೂತನ ರೆಡ್ಮಿ ಟರ್ಬೋ 5 ಮೊಬೈಲ್ ಮಾರುಕಟ್ಟೆಯಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್ ಜೂನ್ 18 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳು ಇವೆ ಎಂದು ಲೀಕ್ ವರದಿಗಳು ಸೂಚಿಸಿವೆ. ಇನ್ನು ಲಾಂಚ್ ಬಳಿಕ ಅಮೆಜಾನ್ ತಾಣದಲ್ಲಿ ಈ ಫೋನ್ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಈ ಮೊಬೈಲ್ ಬೆಲೆ ಭಾರತದಲ್ಲಿ ಮೀಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಲೀಕ್ ಮಾಹಿತಿ ಪ್ರಕಾರ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಲಿರುವ ರೆಡ್ಮಿ ಟರ್ಬೋ 5 ಮೊಬೈಲ್ ಟರ್ಬೊ 5 6.59 ಇಂಚಿನ 1.5K ರೆಸಲ್ಯೂಶನ್ AMOLED ಪ್ಯಾನೆಲ್ ಒಳಗೊಂಡಿರಲಿದೆ. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್ ಪಡೆದಿರುವ ಸಾಧ್ಯತೆಗಳು ಇವೆ. ಇದರೊಂದಿಗೆ 7,560 mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಇರಬಹುದು. ಇದಕ್ಕೆ ಪೂರಕವಾಗಿ 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಫೋನ್ 12 GB RAM ವೇರಿಯಂಟ್ ಆಯ್ಕೆ ಸಹ ಪಡೆದಿರಲಿದೆ.
ಹಾಗೆಯೇ ರೆಡ್ಮಿ ಟರ್ಬೋ 5 ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರುವ ನಿರೀಕ್ಷೆಗಳು ಇವೆ. ಇಲ್ಲದೇ ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಲೆನ್ಸ್ ಪಡೆದುಕೊಂಡಿರಲಿದೆ. ಇನ್ನು ವಿಡಿಯೋ ಕರೆಗಳಿಗಾಗಿ ಹಾಗೂ ಸೆಲ್ಫಿಗಾಗಿ ಮುಂಭಾಗದಲ್ಲಿ 20MP ಸೆನ್ಸಾರ್‌ನ ಕ್ಯಾಮೆರಾ ಒಳಗೊಂಡಿರಬಹುದು ಎನ್ನಲಾಗಿದೆ. ಅಲ್ಲದೇ 60 fps ವೀಡಿಯೊ ರೆಕಾರ್ಡಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ.