ನಾಳೆ Redmi Note 15 SE 5G ಮೊಬೈಲ್‌ ಲಾಂಚ್‌! ನಿರೀಕ್ಷಿತ ಫೀಚರ್ಸ್‌ ಗಮನಿಸಿ

HIGHLIGHTS

ರೆಡ್ಮಿ ನೋಟ್‌ 15 SE 5G ಬಿಗ್ ಬ್ಯಾಟರಿಯೊಂದಿಗೆ ಬರಲಿದೆ

ಈ ನೂತನ ಮೊಬೈಲ್‌ 50 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಲಗ್ಗೆ ಇಡಲಿದೆ

ರೆಡ್ಮಿ ಕಂಪನಿಯ ಈ ಫೋನ್‌ ಸ್ನಾಪ್‌ಡ್ರಾಗನ್ 6 Gen 3 ಪ್ರೊಸೆಸರ್ ಹೊಂದಿರಲಿದೆ

ರೆಡ್ಮಿ ಕಂಪನಿಯು ಇದೀಗ ಭಾರತದಲ್ಲಿ ಹೊಸದಾಗಿ Redmi Note 15 SE 5G ಹೆಸರಿನ ಸ್ಪೆಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಸಕಲ ತಯಾರಿ ನಡೆಸಿದೆ. ಈ ಫೋನ್‌ ಬಿಡುಗಡೆ ಕುರಿತಾಗಿ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಪ್ರತ್ಯೇಕ ಮೈಕ್ರೋಸೈಟ್ ಅನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಮಾಡಲಾಗಿದೆ. ಇನ್ನು ಮುಂಬರುವ ಈ ಫೋನಿನ ಪ್ರಮುಖ ಹೈಲೈಟ್‌ ಎಂದರೆ ಇದು ವಿಶೇಷ ರೆಡ್‌ ಕಲರ್‌ ಆಯ್ಕೆಯೊಂದಿಗೆ ಗ್ರ್ಯಾಂಡ್‌ ಎಂಟ್ರಿ ಕೊಡುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಈಗ ಈ ಫೋನಿನ ಬ್ಯಾಟರಿ ವಿಷಯ ಸಹ ಬಹಿರಂಗವಾಗಿದ್ದು, ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ. ಹಾಗೆಯೇ ಈ ಫೋನ್‌ ಮೂರು ಆಕರ್ಷಕ ಕಲರ್‌ ಆಯ್ಕೆಯಲ್ಲಿ ಬರಲಿದೆ. ಹಾಗಾದರೆ ರೆಡ್ಮಿ ನೋಟ್‌ 15 SE 5G ಮೊಬೈಲ್‌ನ ಹೊಸ ಅಪ್‌ಡೇಟ್ಸ್‌ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಭಾರತದಲ್ಲಿ iQOO 15 Apex ಎಡಿಷನ್‌ ಮೊಬೈಲ್‌ ಬಿಡುಗಡೆ! ಬೆಲೆ ಎಷ್ಟು ನೋಡಿ

Redmi Note 15 SE 5G ಮೊಬೈಲ್‌ ಲಾಂಚ್‌ ಮಾಹಿತಿ

ರೆಡ್ಮಿ ಕಂಪನಿಯ ಮುಂಬರುವ ನೂತನ ರೆಡ್ಮಿ ನೋಟ್‌ 15 SE 5G ಮೊಬೈಲ್‌ ಮಾರುಕಟ್ಟೆಯಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್‌ ಇದೇ ಏಪ್ರಿಲ್‌ 2 ರಂದು ಮಧ್ಯಾಹ್ನ 11 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವುದು ಖಚಿತ ಆಗಿದೆ. ಬಿಡುಗಡೆ ಬಳಿಕ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯವಿರುತ್ತದೆ. ಅಂದಹಾಗೆ ಈ ಮೊಬೈಲ್‌ ರೆಡ್‌ ಕಲರ್‌ ಆಯ್ಕೆಯೊಂದಿಗೆ ಲಗ್ಗೆ ಇಡಲಿದೆ ಜೊತೆಗೆ ಫ್ರೇಮ್‌ ಗೋಲ್ಡ್‌ ಬಣ್ಣಗಳಲ್ಲಿ ಇರುವ ಸಾಧ್ಯತೆಗಳು ಇವೆ. ಇನ್ನು ಈ ಮೊಬೈಲ್‌ ಬೆಲೆ ಭಾರತದಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ರೆಡ್ಮಿ ನೋಟ್‌ 15 SE 5G ನಿರೀಕ್ಷಿತ ಫೀಚರ್ಸ್‌

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಲಿರುವ ರೆಡ್ಮಿ ನೋಟ್‌ 15 SE 5G ಮೊಬೈಲ್‌ ಸಂಸ್ಥೆಯ Redmi Note 15 5G ಫೋನ್‌ಗಿಂತ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ದೃಢಪಡಿಸಲಾಗಿದೆ. ಇನ್ನು ರೆಡ್ಮಿ ನೋಟ್ 15 SE 5G ಕಾರ್ಬನ್ ಬ್ಲಾಕ್, ಕ್ರಿಮ್ಸನ್ ರಿಸರ್ವ್ (ರೆಡ್) ಮತ್ತು ಫ್ರಾಸ್ಟೆಡ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಅಲ್ಲದೇ ಇದು ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿರುವುದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ.

ಹಾಗೆಯೇ ರೆಡ್ಮಿ ನೋಟ್ 15 SE 5G ಫೋನ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದುವುದು ದೃಢಪಟ್ಟಿದೆ. 50 ಮೆಗಾಪಿಕ್ಸೆಲ್ ಮಾಸ್ಟರ್‌ಪಿಕ್ಸೆಲ್ ಪ್ರೈಮರಿ ಶೂಟರ್ ನೀಡಲಾಗಿದೆ. ಇದು 4K ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಯೇ ಇದು 5800 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇದಕ್ಕೆ ಪೂರಕವಾಗಿ 45W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :