Redmi ಕಂಪನಿಯ Note ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿವೆ. ಅದರ ಉತ್ತರಾಧಿಕಾರಿಯಾಗಿ Redmi Note 15 Pro ಸರಣಿಯನ್ನು ಇಂದು (ಜನವರಿ 29 ರಂದು) ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ. ಈ ಮೊಬೈಲ್ ಸರಣಿಯು Snapdragon 7 ಚಿಪ್‌ಸೆಟ್ ಪ್ರೊಸೆಸರ್ ಬಲವನ್ನು ಒಳಗೊಂಡಿರಲಿದೆ. ಅಲ್ಲದೇ ಹಿಂಭಾಗದಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗಾದರೇ ಈ Redmi Note 15 Pro ಸರಣಿಯ ನಿರೀಕ್ಷಿತ ಫೀಚರ್ಸ್ ಏನು ಹಾಗೂ ಬೆಲೆ ಎಷ್ಟು ಎನ್ನುವ ಕುರಿತ ಮುಂದೆ ನೋಡೋಣ.
Also Read : ಹೊಸ Aadhaar ಆಪ್ ಬಿಡುಗಡೆ; ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡುವುದು ಇನ್ನು ತುಂಬಾ ಸರಳ
Xiaomi ಕಂಪನಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್ಮಿ ಇಂದು Redmi Note 15 Pro ಸರಣಿಯನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಕುರಿತು Redmi Note 15 Pro ಫೋನ್ ಸರಣಿಗಾಗಿ ವಿಶೇಷ ಮೈಕ್ರೋಸೈಟ್ ಅನ್ನು Live ಮಾಡಿದೆ. ಅಂದಹಾಗೆ ಬರಲಿರುವ ಈ ಸರಣಿಯ ಮೊಬೈಲ್‌ಗಳು ಬ್ರೌನ್, ಗೋಲ್ಡನ್ ಫ್ರೇಮ್ ಮತ್ತು ಗ್ರೇ ಕಲರ್ ಆಯ್ಕೆಗಳನ್ನು ಪಡೆದಿರಲಿವೆ ಎನ್ನಲಾಗಿದೆ.
Redmi ಸಂಸ್ಥೆಯ ನೂತನ Redmi Note 15 Pro ಸರಣಿಯ ಪ್ರಮುಖ ಹೈಲೈಟ್ಸ್‌ಗಳಲ್ಲಿ ಕ್ಯಾಮೆರಾ ಸಹ ಸೇರಿದೆ. ಈ ನೂತನ ಸರಣಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೌಲಭ್ಯ ಪಡೆದಿರಲಿದೆ. ಹಾಗೆಯೇ HDR + AI ಇಮೇಜ್ ಎಂಜಿನ್ ಒಳಗೊಂಡಿರುವ 200 ಮೆಗಾಪಿಕ್ಸೆಲ್ MasterPixel ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗೆಯೇ ಈ ಸರಣಿಯ ಫೋನ್‌ಗಳು 4K ವೀಡಿಯೊ ರೆಕಾರ್ಡ್ ಮಾಡುವ ಸಾಮರ್ಥ್ಯ ಒಳಗೊಂಡಿರಲಿವೆ ಎಂದು ಸಂಸ್ಥೆಯು ಖಚಿತಪಡಿಸಿದೆ.
Redmi Note 15 Pro 5G ಫೋನಿನ ಇತರೆ ಆಯ್ಕೆಗಳ ಮಾಹಿತಿ
Redmi Note 15 Pro 5G ಸರಣಿಯ ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದಿರುವ ಡಿಸ್‌ಪ್ಲೇ ವ್ಯವಸ್ಥೆ ಪಡೆದಿರಲಿದೆ. ಅಲ್ಲದೇ ಆ ಡಿಸ್‌ಪ್ಲೇಗಳು IP66 + IP68 + IP69 + IP69K ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್ ಆಯ್ಕೆಗಳನ್ನು ಸಹ ಒಳಗೊಂಡಿದೆ. ಅಲ್ಲದೇ ಈ ಸರಣಿಯ Redmi Note 15 Pro ವೇರಿಯಂಟ್ ಫೋನ್ 6500mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದೆ. ಇದಕ್ಕೆ ಅನುಗುಣವಾಗಿ ಈ ಸರಣಿಯು 100W ಹೈಪರ್‌ಚಾರ್ಜ್ ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 22.5W ವೈರ್ಡ್ ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಸಹ ಪಡೆದಿರುತ್ತದೆ. ಹಾಗೆಯೇ Redmi Note 15 Pro 5G ಸರಣಿಯನ್ನು ಕ್ವಾಲ್ಕಾಮ್‌ನ Snapdragon 7 ಚಿಪ್‌ಸೆಟ್ ಪ್ರೊಸೆಸರ್ ಪವರ್ ಜೊತೆಗೆ ಎಂಟ್ರಿ ಹೊಂದಲಿದೆ.