200MP ಕ್ಯಾಮೆರಾ ಇರುವ Redmi Note 15 Pro 5G ಮೊಬೈಲ್‌ ಬೆಲೆಯಲ್ಲಿ ಸಖತ್ ಇಳಿಕೆ!

HIGHLIGHTS

ರೆಡ್ಮಿ ನೋಟ್‌ 15 ಪ್ರೊ ಈಗ ಭಾರೀ ರಿಯಾಯಿತಿ ಬೆಲೆಗೆ ಲಭ್ಯ

ಈ ಫೋನ್‌ 6,580mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ

ಈ ಮೊಬೈಲ್‌ ಸಿಲ್ವರ್ ಆಶ್, ಮಿರಾಜ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯ

ಹೊಸ ಫೋನ್‌ ಖರೀದಿಸುವ ಗ್ರಾಹಕರಿಗೆ ಅಮೆಜಾನ್‌ ಆಯೋಜಿಸಿರುವ Amazon Great Summer Sale ಅತ್ಯುತ್ತಮ ಪ್ಲಾಟ್‌ಫಾರ್ಮ್ ಆಗಿದೆ. ಈ ಮಾರಾದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ರೆಡ್ಮಿ ಸಂಸ್ಥೆಯ ಇತ್ತೀಚಿನ Redmi Note 15 Pro 5G ಮೊಬೈಲ್‌ ಸಹ ಭರ್ಜರಿ ಬೆಲೆ ಇಳಿಕೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ರಿಯಲ್‌ಮಿ ಸಂಸ್ಥೆಯ ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿರುವ ಜೊತೆಗೆ ಎರಡು ಕಲರ್ ಆಯ್ಕೆಯಲ್ಲಿ ಲಭ್ಯ. ಹಾಗಾದರೆ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ರೆಡ್ಮಿ ನೋಟ್‌ 15 ಪ್ರೊ ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Amazon ಸೇಲ್‌: ಬಜೆಟ್‌ ದರದ ಈ ಮೊಬೈಲ್‌ ಈಗ ಸಸ್ತಾ ಬೆಲೆಯಲ್ಲಿ ಲಭ್ಯ!

Redmi Note 15 Pro 5G ಫೋನ್‌ ಬೆಲೆ ಇಳಿಕೆ

ರೆಡ್ಮಿ ನೋಟ್‌ 15 ಪ್ರೊ 5G ಮೊಬೈಲ್‌ ಸ್ಟೈಲಿಶ್‌ ಲುಕ್‌ ಹಾಗೂ ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೆದಿದೆ. ಸದ್ಯ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾವ್‌ ಎನಿಸಿರುವ ರಿಯಾಯಿತಿ ಪಡೆದಿದೆ. ಈ ಮೊಬೈಲ್‌ 8GB + 128GB ಸ್ಟೋರೇಜ್‌ ವೇರಿಯಂಟ್‌ ಬೆಲೆ 33,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 31,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಮೊಬೈಲ್‌ ಸಿಲ್ವರ್ ಆಶ್, ಮಿರಾಜ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಆಸಕ್ತ ಗ್ರಾಹಕರು ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿಸಬಹುದಾಗಿದೆ. ಈ ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ರೆಡ್ಮಿ ನೋಟ್‌ 15 ಪ್ರೊ ಫೀಚರ್ಸ್‌

ರೆಡ್ಮಿ ನೋಟ್‌ 15 ಪ್ರೊ ಮೊಬೈಲ್‌ 6.83 ಇಂಚಿನ AMOLED ಡಿಸ್‌ಪ್ಲೇ ಪಡೆದಿದ್ದು, ಇದು 1.5K 1,280 x 2,772 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಜೊತೆಗೆ 3,200 ನಿಟ್‌ಗಳ ಬ್ರೈಟ್ನೆಸ್‌ ಪಡೆದಿದೆ. ಇದರ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಪಡೆದುಕೊಂಡಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕಾರ್ಯನಿರ್ವಹಿಸುತ್ತವೆ.

ರೆಡ್ಮಿ ನೋಟ್‌ 15 ಪ್ರೊ ಮೊಬೈಲ್‌ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾ 200MP ಸೆನ್ಸಾರ್ ಆಗಿದ್ದು ದ್ವಿತೀಯ ಕ್ಯಾಮೆರಾವು 8MP ಸೆನ್ಸಾರ್‌ನಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 20MP ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 45W ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,580mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ.

Disclosure: This Article Contains Affiliate Links

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :