ಬಜೆಟ್ ಬೆಲೆಯಲ್ಲಿ ನೀವೇನಾದರೂ ಹೊಸದೊಂದು ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಅಮೆಜಾನ್ ತಾಣದಲ್ಲಿ ಇದೆ ನಿಮಗೆ ಅತ್ಯುತ್ತಮ ಕೊಡುಗೆ. ಹೌದು, ಜನಪ್ರಿಯ ಇ ಕಾಮರ್ಸ್ ಅಮೆಜಾನ್ ತಾಣದಲ್ಲಿ ರೆಡ್ಮಿ ನೋಟ್ 15 5G ಮೊಬೈಲ್‌ಗೆ ಬೊಂಬಾಟ್ ಡಿಸ್ಕೌಂಟ್ ಘೋಷಣೆ ಮಾಡಿದ್ದು ಗ್ರಾಹಕರು ಖುಷಿಯಿಂದ ಈ ಸ್ಟೈಲಿಶ್ ಫೋನ್‌ನತ್ತ ನೋಡುವಂತಾಗಿದೆ. ಇದಲ್ಲದೇ ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ರೆಡ್ಮಿ ನೋಟ್ 15 5G ಮೊಬೈಲ್ Snapdragon 6 Gen 3 ಚಿಪ್‌ಸೆಟ್ ಪ್ರೊಸೆಸರ್ ಬೆಂಬಲದಲ್ಲಿ ಕೆಲಸ ಮಾಡಲಿದೆ. ಇದರೊಂದಿಗೆ 108MP OIS ಮಾಸ್ಟರ್‌ಪಿಕ್ಸೆಲ್ ಕ್ಯಾಮೆರಾ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗದರೆ ಅಮೆಜಾನ್ ವೆಬ್‌ಸೈಟ್‌ನಲ್ಲಿ Redmi Note 15 5G ಫೋನಿಗೆ ಲಭ್ಯ ಇರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
Also Read : ದೈತ್ಯ iPhone 17 Pro Max ಖರೀದಿಸಲು ಇದುವೇ ಬೆಸ್ಟ್ ಟೈಮ್! ಭರ್ಜರಿ ಡಿಸ್ಕೌಂಟ್ ಲಭ್ಯ
ರೆಡ್ಮಿ ಸಂಸ್ಥೆಯ ರೆಡ್ಮಿ ನೋಟ್ 15 5G ಮೊಬೈಲ್ ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿ ಪಡೆದಿದೆ. ಈ ಮೊಬೈಲ್ 8GB RAM + 128GB ವೇರಿಯಂಟ್ ಬೆಲೆ 26,999 ರೂಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 22,998 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಫೋನ್ ಬ್ಲೂ, ಬ್ಲ್ಯಾಕ್ ಮತ್ತು ಪರ್ಪಲ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.
ರೆಡ್ಮಿ ನೋಟ್ 15 5G ಮೊಬೈಲ್ 6.77 ಇಂಚಿನ ಕರ್ವ್ಡ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಹೊಂದಿದ್ದು ಜೊತೆಗೆ ಇದು 3200 nits ಬ್ರೈಟ್ನೆಸ್ ಸಪೋರ್ಟ್ ಸಹ ಹೊಂದಿದೆ. ಇನ್ನು ಈ ಮೊಬೈಲ್ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್ ಪ್ರೊಸೆಸರ್‌ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ 8GB RAM + 128GB ಹಾಗೂ 8GB RAM + 256GB ಸ್ಟೋರೇಜ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಹಾಗೆಯೇ ರೆಡ್ಮಿ ನೋಟ್ 15 5G ಮೊಬೈಲ್ ಹಿಂಭಾಗದಲ್ಲಿ 108MP OIS ಮಾಸ್ಟರ್‌ಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದ್ದು, ಹೈ-ರೆಸಲ್ಯೂಶನ್ ಫೋಟೋಗಳನ್ನು ಶೂಟ್ ಮಾಡುತ್ತದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್ 20MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 5G ಸಪೋರ್ಟ್, IR ರಿಮೋಟ್ ಕಂಟ್ರೋಲ್ ಮತ್ತು Google Gemini ಮತ್ತು Circle to Search ನಂತಹ AI ಫೀಚರ್ಸ್‌ಗಳನ್ನು ಸಹ ಪಡೆದಿದೆ.