Redmi ಕಂಪನಿಯ ಈ ಬಹುಬೇಡಿಕೆಯ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಏರಿಕೆ!

HIGHLIGHTS

ರೆಡ್ಮಿ 15 ಹಾಗೂ ರೆಡ್ಮಿ ನೋಟ್ 15 ಫೋನ್‌ಗಳ ಬೆಲೆಯಲ್ಲಿ ಹೆಚ್ಚಳ

ರೆಡ್ಮಿ ನೋಟ್ 15 ಫೋನಿನ ಪ್ರಾಥಮಿಕ ಕ್ಯಾಮೆರಾ 108MP ಸೆನ್ಸಾರ್‌ ಆಗಿದೆ

ಈ ಮೊಬೈಲ್‌ ಸ್ನಾಪ್‌ಡ್ರಾಗನ್ 6 ಜೆನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಬಲ ಪಡೆದಿದೆ

Redmi ಕಂಪನಿಯು ಭಿನ್ನ ಮಾದರಿಯ ಮೊಬೈಲ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಸಂಸ್ಥೆಯ ಕೆಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳ ಪೈಕಿ Redmi 15 5G ಹಾಗೂ Redmi Note 15 5G ಲೈನ್‌ಅಪ್‌ ಮೊಬೈಲ್‌ಗಳು ಸಹ ಸೇರಿವೆ. ಆದರೆ ರೆಡ್ಮಿ ಮೊಬೈಲ್‌ ಪ್ರಿಯರಿಗೆ ಶಾಕಿಂಗ್ ಸಮಾಚಾರ ಇದೆ. ರೆಡ್ಮಿ ಸಂಸ್ಥೆಗಳ ರೆಡ್ಮಿ 15 5G ಹಾಗೂ ರೆಡ್ಮಿ ನೋಟ್ 15 5G ಸ್ಮಾರ್ಟ್‌ಫೋನ್‌ ಮಾಡೆಲ್‌ಗಳ ಬೆಲೆ ಏರಿಕೆಯಾಗಿರುವ ವರದಿಗಳಾಗಿವೆ. ಹಾಗಾದರೆ ರೆಡ್ಮಿ ಸಂಸ್ಥೆಯ ಈ ಎರಡು ಸ್ಮಾರ್ಟ್‌ಫೋನ್‌ಗಳ ಹೊಸ ಬೆಲೆ ಎಷ್ಟು? ಹಾಗೂ ರೆಡ್ಮಿ 15 5G ಹಾಗೂ ರೆಡ್ಮಿ ನೋಟ್ 15 5G ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Also Read : ನಾಳೆ HMD Vibe 2 5G ಫೋನ್‌ ಫಸ್ಟ್‌ ಸೇಲ್‌! ಬೆಲೆ ಹಾಗೂ ಫೀಚರ್ಸ್‌ ನೋಡಿ

Redmi ಸಂಸ್ಥೆಯ ಈ ಫೋನ್‌ಗಳ ಬೆಲೆಯಲ್ಲಿ ಏರಿಕೆ

ಜನಪ್ರಿಯ ರೆಡ್ಮಿ ಕಂಪನಿಯ ರೆಡ್ಮಿ 15 5G ಹಾಗೂ ರೆಡ್ಮಿ ನೋಟ್ 15 5G ಮೊಬೈಲ್‌ಗಳ ಬೆಲೆ ಏರಿಕೆ ಆಗಿರುವ ವರದಿಗಳಾಗಿದೆ. ಇನ್ನು ಟಿಪ್‌ಸ್ಟರ್ ವರದಿ ಪ್ರಕಾರ, ಈ ಪರಿಷ್ಕರಣೆಯು ರೆಡ್ಮಿ 15 5G ಹಾಗೂ ರೆಡ್ಮಿ ನೋಟ್ 15 5G ಸ್ಮಾರ್ಟ್‌ಫೋನಿನ ಎಲ್ಲ ವೇರಿಯಂಟ್‌ಗಳ ಮೇಲೆ ದರ ಹೆಚ್ಚಳ ಆಗಿದೆ ಎಂದು ಸೂಚಿಸಿದೆ. RAM ಮತ್ತು ಸ್ಟೋರೇಜ್‌ ಅವಲಂಬಿಸಿ ಮೊಬೈಲ್‌ಗಳ ಬೆಲೆಯಲ್ಲಿ 1,500 ರಿಂದ 2,500 ರೂ.ಗಳ ರವರೆಗೆ ಏರಿಕೆ ಆಗಿದೆ.

ರೆಡ್ಮಿ 15 5G ಫೋನಿನ 6 + 128GB ವೇರಿಯಂಟ್‌ ಹಳೆಯ ಬೆಲೆ 18,499 ರೂ.ಗಳು ಆಗಿದ್ದರೆ ಈಗ ಹೊಸ ದರ 20,499 ರೂ.ಗಳು ಆಗಿದೆ. 8 + 128GB ವೇರಿಯಂಟ್‌ ಹಳೆಯ ಬೆಲೆ 20,499 ರೂ.ಗಳು ಇನ್ನು ಇದರ ಹೊಸ ದರ 22,499 ರೂ.ಗಳು ಆಗಿದೆ. ಹಾಗೆಯೇ 8 + 256GB ವೇರಿಯಂಟ್‌ ಹಳೆಯ ಬೆಲೆ 22,499 ರೂ.ಗಳು ಸದ್ಯದ ಹೊಸ ದರ 24,499 ರೂ.ಗಳು ಆಗಿದೆ. ಅದೇ ರೀತಿ ರೆಡ್ಮಿ ನೋಟ್ 15 5G ಫೋನಿನ 8 + 128GB ವೇರಿಯಂಟ್‌ ಬೆಲೆ 24,999 ರೂ.ಗಳು ಆಗಿದ್ದು, ಹೊಸ ದರ 26,999 ರೂ.ಗಳು ಆಗಿದೆ ಎಂದು ಟಿಪ್‌ಸ್ಟಾರ್ ವರದಿ ಸೂಚಿಸಿದೆ.

ರೆಡ್ಮಿ ನೋಟ್ 15 5G ಫೋನಿನ ಫೀಚರ್ಸ್‌

ರೆಡ್ಮಿ ಸಂಸ್ಥೆಯ ರೆಡ್ಮಿ ನೋಟ್ 15 5G ಮೊಬೈಲ್‌ 6.77 ಇಂಚಿನ FHD+ ಕರ್ವ್ಡ್ AMOLED ಡಿಸ್‌ಪ್ಲೇ ಪಡೆದಿದ್ದು, ಇದು 1.5K 1,280 x 2,772 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಜೊತೆಗೆ 3,200 ನಿಟ್‌ಗಳ ಬ್ರೈಟ್ನೆಸ್‌ ಪಡೆದಿದೆ. ಇದರ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಹಾಗೆಯೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾ 108MP ಸೆನ್ಸಾರ್ ಆಗಿದ್ದು, ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್‌ನಲ್ಲಿದೆ. ಇದರೊಂದಿಗೆ 20MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 45W ಫಾಸ್ಟ್ ಚಾರ್ಜಿಂಗ್ ಮತ್ತು 18W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5520mAh ಬ್ಯಾಟರಿಯನ್ನು ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :