ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಸದ್ದು ಮಾಡಿರುವ Redmi Note 14 Pro Plus ಮೊಬೈಲ್ ಈಗ ಭಾರೀ ಬೆಲೆ ಇಳಿಕೆ ಪಡೆದಿದೆ. ಹೌದು, ಪ್ರೇಮಿಗಳ ದಿನದ ಅಂಗವಾಗಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣವು Redmi Note 14 Pro+ ಮೊಬೈಲ್‌ಗೆ ಸಖತ್ ರಿಯಾಯಿತಿ ಅನ್ನು ಘೋಷಿಸಿದೆ. ಅಂದಹಾಗೆ ಈ ಮೊಬೈಲ್ ಕ್ವಾಲ್ಕಮ್‌ನ Snapdragon 7s Gen 3 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದ್ದು, ಹಾಗೆಯೇ ಅತ್ಯುತ್ತಮ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನುಳಿದಂತೆ Flipkart ವೆಬ್‌ಸೈಟ್‌ನಲ್ಲಿ Redmi Note 14 Pro+ ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಇಂದಿನಿಂದ Samsung Galaxy F70e Pre-Booking ಪ್ರಾರಂಭ; ಬೆಲೆ ಹಾಗೂ ಫೀಚರ್ಸ್ ಹೀಗಿವೆ
Redmi Note 14 Pro Plus ಮೊಬೈಲ್ ಇದೀಗ Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB RAM + 128 GB ವೇರಿಯಂಟ್ 34,999 ರೂಗಳ ಬೆಲೆಯನ್ನು ಹೊಂದಿದ್ದು, ಆದರೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 25,403 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಈ ಮೊಬೈಲ್ ಖರೀದಿಸುವ ಗ್ರಾಹಕರು ಆಯ್ದ ಬ್ಯಾಂಕ್‌ಗಳಿಂದ ಹೆಚ್ಚುವರಿ ಕೊಡುಗೆ ಹಾಗೂ ಆಕರ್ಷಕ EMI ಆಯ್ಕೆಗಳನ್ನು ಸಹ ಪಡೆಯಬಹುದು. ಇನ್ನು ಈ ಮೊಬೈಲ್ ಪಾಂಟೋಮ್ ಪರ್ಪಲ್, ಟೈಟಾನ್ ಬ್ಲಾಕ್ ಮತ್ತು ಸ್ಪೆಕ್ಟ್ರೇ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.
Redmi Note 14 Pro Plus ಮೊಬೈಲ್ 6.67 ಇಂಚಿನ 1.5K OLED ಡಿಸ್‌ಪ್ಲೇ ಅನ್ನು ಒಳಗೊಂಡಿರುವ ಜೊತೆಗೆ 120Hz ವರೆಗೆ ರಿಫ್ರೆಶ್ ರೇಟ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಸೂರ್ಯನ ಬೆಳಕಿನಲ್ಲಿ 3,000 nits ವರೆಗೆ ಗರಿಷ್ಠ ಬ್ರೈಟ್ನೆಸ್ ಒದಗಿಸುವ ಸೌಲಭ್ಯ ಪಡೆದುಕೊಂಡಿದೆ. ಅಂದಹಾಗೆ ಈ ಮೊಬೈಲ್ Snapdragon 7s Gen 3 SoC ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ 8GB RAM + 256GB ಹಾಗೂ 12GB + 512GB ವೇರಿಯಂಟ್ ಸೌಲಭ್ಯವನ್ನು ಒಳಗೊಂಡಿದೆ.
ಅದೇ ರೀತಿ Redmi Note 14 Pro Plus ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನುಳಿದ ಎರಡು ಕ್ಯಾಮೆರಾಗಳು 50MP ಅಲ್ಟ್ರಾ ವೈಡ್ ಮತ್ತು 8MP ಟೆಲಿಫೋಟೋ ಸೆನ್ಸಾರ್ ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕೂಡಾ ಈ ಮೊಬೈಲ್ 20MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ 6,200 mAh ಬ್ಯಾಟರಿ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.