ರೆಡ್ಮಿ ಕಂಪನಿಯ ನೂತನ Redmi A7 Pro 5G ಸ್ಮಾರ್ಟ್ಫೋನ್ ಭಾರತದಲ್ಲಿ ಇಂದು (ಏಪ್ರಿಲ್ 13 ರಂದು) ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಮೊಬೈಲ್ 6,300mAh ಬ್ಯಾಟರಿ ಬ್ಯಾಕ್ಅಪ್ ಅನ್ನು ಒಳಗೊಂಡಿರುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಆಂಡ್ರಾಯ್ಡ್ 16 ಆಧಾರಿತ ಹೈಪರ್ಓಎಸ್ 3 ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಅನ್ನು ಇದು ಪಡೆದುಕೊಂಡಿರಲಿದೆ. ಅಲ್ಲದೇ ಆಂಡ್ರಾಯ್ಡ್ 16 ಆಧಾರಿತ ಹೈಪರ್ಓಎಸ್ 3 ಸಪೋರ್ಟ್ ಪಡೆದುಕೊಂಡಿದೆ. ಹಾಗಾದರೆ ಮುಂಬರುವ ರೆಡ್ಮಿ A7 ಪ್ರೊ 5G ಮೊಬೈಲ್ನ ಲಾಂಚ್ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ವಿವೋ ಫೋನ್ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ! Vivo X200T ಬೆಲೆಯಲ್ಲಿ ಭರ್ಜರಿ ಇಳಿಕೆ
ರೆಡ್ಮಿ ಕಂಪನಿಯು ಹೊಸದಾಗಿ ರೆಡ್ಮಿ A7 ಪ್ರೊ 5G ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ನೂತನ ಮೊಬೈಲ್ ಅನ್ನು ಇಂದು (ಏಪ್ರಿಲ್ 13 ರಂದು) ಮಧ್ಯಾಹ್ನ 12 ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ಪ್ರಾರಂಭ ಮಾಡಲಾಗಿದೆ. ಲಾಂಚ್ ಬಳಿಕ ಅಮೆಜಾನ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಮೂಲಕ ಮಾರಾಟ ಪ್ರಾರಂಭಿಸಲಿದೆ.
ಹೊಸ ರೆಡ್ಮಿ A7 ಪ್ರೊ 5G ಮೊಬೈಲ್ 6.9 ಇಂಚಿನ ಡಿಸ್ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದು ಆಕ್ಟಾ ಕೋರ್ 5G ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ ಹೈಪರ್ಓಎಸ್ 3 ಸಪೋರ್ಟ್ ಸಹ ಇರಲಿದೆ. ಇನ್ನು ಈ ಫೋನ್ 6,300mAh ಬ್ಯಾಟರಿ ಬ್ಯಾಕ್ಅಪ್ ಬೆಂಬಲ ಸಹ ಒಳಗೊಂಡಿರುವ ಸಾಧ್ಯತೆಗಳು ಇವೆ. ಹಾಗೆಯೇ ಈ ಫೋನ್ ಗೂಗಲ್ನ ಸರ್ಕಲ್ ಟು ಸರ್ಚ್ ಮತ್ತು ಬಿಲ್ಟ್-ಇನ್ ಜೆಮಿನಿ ವಾಯ್ಸ್ ಅಸಿಸ್ಟೆಂಟ್ ಸೇರಿದಂತೆ ಹಲವಾರು AI ಆಯ್ಕೆಗಳೊಂದಿಗೆ ಲಗ್ಗೆ ಇಡಲಿದೆ.
ಇನ್ನು ರೆಡ್ಮಿ A7 ಪ್ರೊ 5G ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ಅನ್ನು ಪಡೆದಿರಲಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 32MP ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ರೆಡ್ಮಿ A7 ಪ್ರೊ 4G ಮೊಬೈಲ್ 6.9 ಇಂಚಿನ HD+ IPS LCD ಡಿಸ್ಪ್ಲೇ ಅನ್ನು ಹೊಂದಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್ ಜೊತೆಗೆ 800 nits ವರೆಗಿನ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಯುನಿಸಾಕ್ T7250 ಚಿಪ್ಸೆಟ್ ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ 4GB RAM ಮತ್ತು 128GB ವರೆಗಿನ ಸ್ಟೋರೇಜ್ ಆಯ್ಕೆ ಪಡೆದಿದೆ.