ರೆಡ್ಮಿ ಮೊಬೈಲ್ ಕಂಪನಿಯ ನೂತನ Redmi 17C 5G ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಫೋನ್ ಇಂದು (ಅಕ್ಟೋಬರ್ 7 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಅಮೆಜಾನ್ ಮೂಲಕ ಸೇಲ್ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಸೌಲಭ್ಯದ ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಕಾಫಿ ಬ್ರೂ , ಡಾರ್ಕ್ ನೈಟ್ ಮತ್ತು ಪರ್ಪಲ್ ಡಾನ್ ಕಲರ್ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೇ ರೆಡ್ಮಿ 17C 5G ಮೊಬೈಲ್ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ Vivo X Fold 6 ಸ್ಮಾರ್ಟ್‌ಫೋನ್! ಬೆಲೆ ಹಾಗೂ ಫೀಚರ್ಸ್ ಗಮನಿಸಿ
ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೊಸ ರೆಡ್ಮಿ 17C 5G ಮೊಬೈಲ್ ಇಂದು (ಅಕ್ಟೋಬರ್ 7 ರಂದು) ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಇ ಕಾಮರ್ಸ್ ಮೂಲಕ ಸೇಲ್ ಶುರು ಮಾಡಲಿದೆ. ಈ ಮೊಬೈಲ್‌ನ 4GB RAM + 128GB ಸ್ಟೋರೇಜ್ ವೇರಿಯಂಟ್ 20,999 ರೂ.ಗಳ ಬೆಲೆಯನ್ನು ಹೊಂದಿದೆ. ಹಾಗೆಯೇ 6GB + 128GB ಸ್ಟೋರೇಜ್ ವೇರಿಯಂಟ್ 22,999 ರೂ.ಗಳ ಬೆಲೆಯನ್ನು ಹೊಂದಿದೆ. ಈ ಫೋನ್ ಈ ಫೋನ್ ಕಾಫಿ ಬ್ರೂ , ಡಾರ್ಕ್ ನೈಟ್ ಮತ್ತು ಪರ್ಪಲ್ ಡಾನ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಅಮೆಜಾನ್ ಮತ್ತು ಶಿಯೋಮಿ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಾಗಲಿದೆ.
ರೆಡ್ಮಿ 17C 5G ಸ್ಮಾರ್ಟ್‌ಫೋನ್ 6.9 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಜೊತೆಗೆ 810 ನಿಟ್ಸ್ ಬ್ರೈಟ್ನೆಸ್ ಸೌಲಭ್ಯ ಅನ್ನು ಪಡೆದಿದೆ. ಇದರ ಸ್ಕ್ರೀನ್ 720×1,600 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ (HyperOS 3) ಸಪೋರ್ಟ್ ಪಡೆದಿದೆ. ಅಲ್ಲದೇ ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಣೆಗಾಗಿ ಇದು IP64 ರೇಟಿಂಗ್ ಅನ್ನು ಪಡೆದುಕೊಂಡಿದೆ.
ಹಾಗೆಯೇ ರೆಡ್ಮಿ 17C 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50MP ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 6,000mAh ಬ್ಯಾಟರಿ ಸಪೋರ್ಟ್ ಹೊಂದಿರುವ ಜೊತೆಗೆ 33W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.