ದಿ ರಿಯಲ್ ಹೀರೋ Redmi 15A 5G ಲಾಂಚ್‌ಗೆ ಮುಹೂರ್ತ ಫಿಕ್ಸ್‌! ಅಚ್ಚರಿಯ ಫೀಚರ್ಸ್‌

HIGHLIGHTS

ಮಾರ್ಚ್‌ 27 ರಂದು ಭಾರತದಲ್ಲಿ ರೆಡ್ಮಿ 15A 5G ಮೊಬೈಲ್‌ ಬಿಡುಗಡೆ

ರೆಡ್ಮಿ 15A 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹೊಂದಿರಲಿದೆ

ರೆಡ್ಮಿಯ ಈ ಮೊಬೈಲ್‌ ಬ್ಲ್ಯಾಕ್‌, ಲೈಟ್‌ ಬ್ಲೂ ಮತ್ತು ಲ್ಯಾವೆಂಡರ್ ಕಲರ್‌ ಆಯ್ಕೆಗಳೊಂದಿಗೆ ಬರಲಿದೆ

ಪ್ರಮುಖ ಮೊಬೈಲ್‌ ಬ್ರಾಂಡ್‌ಗಳ ಪೈಕಿ ಒಂದಾಗಿರುವ ರೆಡ್ಮಿ ಇತ್ತೀಚಿಗೆ ರೆಡ್ಮಿ 15 ಸರಣಿ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ರೆಡ್ಮಿ ಕಂಪನಿಯು ಅದೇ ಸರಣಿಯಲ್ಲಿ ನೂತನವಾಗಿ Redmi 15A 5G ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಸಕಲ ಸಜ್ಜಾಗಿದೆ. ಕಂಪನಿಯು ನೂತನ ರೆಡ್ಮಿ 15A 5G ಮೊಬೈಲ್‌ ಅನ್ನು ಇದೇ ವಾರದಲ್ಲಿ ಪರಿಚಯಿಸುವುದು ಪಕ್ಕಾ ಆಗಿದೆ. ಅಂದಹಾಗೆ ಕಂಪನಿಯು ಈ ಮೊಬೈಲ್‌ ಅನ್ನು ದಿ ರಿಯಲ್ ಹೀರೋ ಎಂದು ಟೀಸ್ ಮಾಡಿ ಗಮನ ಸೆಳೆದಿದೆ. ಇನ್ನು ಮುಂಬರುವ ಈ ಮೊಬೈಲ್‌ 6,300mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗಾದರೆ ರೆಡ್ಮಿ 15A 5G ಮೊಬೈಲ್‌ ಲಾಂಚ್ ದಿನಾಂಕ, ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ Vivo V70 FE ಸ್ಮಾರ್ಟ್‌ಫೋನ್‌!

Redmi 15A 5G ಬಿಡುಗಡೆ ದಿನಾಂಕ ಕನ್ಫರ್ಮ್‌

Redmi ಸಂಸ್ಥೆಯ ಮುಂಬರುವ ನೂತನ Redmi 15A 5G ಸ್ಮಾರ್ಟ್‌ಫೋನ್‌ ನಿರೀಕ್ಷಿತ ಫೀಚರ್ಸ್‌ಗಳು ಗಮನ ಸೆಳೆಯುವಂತಿವೆ. ಇನ್ನು ಈ ಮೊಬೈಲ್‌ ಇದೇ ಮಾರ್ಚ್‌ 27 ರಂದು ಭಾರತೀಯ ಮೊಬೈಲ್‌ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್‌ ಆಗಲಿದೆ. ಕಂಪನಿಯು ಈ ನೂತನ ಮೊಬೈಲ್‌ ಬಿಡುಗಡೆ ಕುರಿತು ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಪೇಜ್‌ ಸಹ ತೆರೆದಿದೆ. ಅಂದಹಾಗೆ ಇದೊಂದು ಬಜೆಟ್‌ ವಿಭಾಗದ ಸ್ಮಾರ್ಟ್‌ಫೋನ್‌ ಆಗಿದ್ದು ಭಾರತದಲ್ಲಿ ಈ ಫೋನ್‌ 20,000 ರೂ.ಗಳ ಒಳಗೆ ಬಿಡುಗಡೆ ಆಗುವ ನಿರೀಕ್ಷೆಗಳಿವೆ. ಇದು ಬ್ಲ್ಯಾಕ್‌, ಲೈಟ್‌ ಬ್ಲೂ ಮತ್ತು ಲ್ಯಾವೆಂಡರ್ ಕಲರ್‌ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು. ಹಾಗೆಯೇ ಈ ಮೊಬೈಲ್‌ ಲಾಂಚ್‌ ದಿನವೇ ರೆಡ್ಮಿ ನೋಟ್‌ 15 ಸರಣಿಯ ರೆಡ್‌ ಕಲರ್‌ ವೇರಿಯಂಟ್‌ ಪರಿಚಯಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ರೆಡ್ಮಿ 15A 5G ಫೋನಿನ ನಿರೀಕ್ಷಿತ ಫೀಚರ್ಸ್‌

ಮುಂಬರುವ ಹೊಸ ರೆಡ್ಮಿ 15A 5G ಮೊಬೈಲ್‌ 6.9 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್‌ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ರೌಂಡೆಡ್‌ ಎಡ್ಜ್‌ ಇರುವ ಹಾಗೂ ಫ್ಲ್ಯಾಟ್‌ ಡಿಸ್‌ಪ್ಲೇ ರಚನೆ ಪಡೆದಿರಲಿದೆ. ಇನ್ನು ಇದು ಆಕ್ಟಾ-ಕೋರ್ 5G ಚಿಪ್‌ಸೆಟ್ ಪ್ರೊಸೆಸರ್‌ ಒಳಗೊಂಡಿರುವ ನಿರೀಕ್ಷೆಗಳು ಇವೆ.

ಹಾಗೆಯೇ ರಿಯಲ್‌ಮಿ 16 5G ಮೊಬೈಲ್‌ ಹಿಂಬದಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿರಲಿದೆ. ಇನ್ನು ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದೆ. ಇದರೊಂದಿಗೆ ನೀರಿನ ಪ್ರತಿರೋಧ ರೇಟಿಂಗ್ ಸೌಲಭ್ಯ ಸಹ ಪಡೆದಿರಲಿದೆ. ಇದರ ಡಿಸ್‌ಪ್ಲೇ ವಿಶಾಲವಾಗಿದ್ದು ಇದು ಕಂಟೆಂಟ್ ಬಳಕೆ ಹಾಗೂ ಗೇಮಿಂಗ್‌ಗೆ ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :