ಭಾರತದಲ್ಲಿ Realme P4s Lite ಮೊಬೈಲ್‌ ಲಾಂಚ್‌; 7,000mAh ಬ್ಯಾಟರಿ ಸೌಲಭ್ಯ

HIGHLIGHTS

ರಿಯಲ್‌ಮಿ P4s ಲೈಟ್ ಫೋನ್‌ 7,000mAh ಬ್ಯಾಟರಿ ಹೊಂದಿದೆ

ರಿಯಲ್‌ಮಿ P4s ಲೈಟ್ ಮೊಬೈಲ್‌ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ

ರಿಯಲ್‌ಮಿ P4s ಲೈಟ್ ಈ ಮೊಬೈಲ್‌ ಎರಡು ಕಲರ್ ಆಯ್ಕೆ ಒಳಗೊಂಡಿದೆ

ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಹೊಸದಾಗಿ Realme P4s Lite ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್‌ Unisoc T7250 ಚಿಪ್‌ಸೆಟ್‌ ಪ್ರೊಸೆಸರ್‌ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ ಈ ಮೊಬೈಲ್‌ 120Hz ರಿಫ್ರೆಶ್ ರೇಟ್‌ನ ಡಿಸ್‌ಪ್ಲೇ ಹಾಗೂ 7,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಮುಂಭಾಗದಲ್ಲಿ ಇದು 13MP ಸೆನ್ಸಾರ್‌ನ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ Nebula Black ಮತ್ತು Moonlight Silver ಕಲರ್‌ ಆಯ್ಕೆಯನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಹಾಗಾದರೇ ರಿಯಲ್‌ಮಿ P4s ಲೈಟ್‌ ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಪವರ್‌ಫುಲ್‌ ಬ್ಯಾಟರಿ ಬ್ಯಾಕ್‌ಅಪ್‌ ಇರುವ Poco X8 5G ಬೆಲೆಯಲ್ಲಿ ಸಖತ್‌ ಇಳಿಕೆ!

Realme P4s Lite ಬೆಲೆ ಹಾಗೂ ಲಭ್ಯತೆ

ರಿಯಲ್‌ಮಿ ಮೊಬೈಲ್‌ ಸಂಸ್ಥೆಯ ರಿಯಲ್‌ಮಿ P4s ಲೈಟ್‌ ಮೊಬೈಲ್‌ ಆಕರ್ಷಕ ಡಿಸೈನ್‌ ಹಾಗೂ ಫೀಚರ್ಸ್‌ಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ 4GB + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆ 16,499 ರೂ.ಗಳು ಆಗಿದೆ. ಹಾಗೆಯೇ 4GB + 128GB ವೇರಿಯಂಟ್‌ ಬೆಲೆಯು 18,499 ರೂ.ಗಳು ಆಗಿದೆ. ಈ ಫೋನ್‌ Nebula Black ಮತ್ತು Moonlight Silver ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಅಕ್ಟೋಬರ್ 8 ರಿಂದ ಮಾರಾಟಕ್ಕೆ ಬರಲಿದೆ.

ರಿಯಲ್‌ಮಿ P4s ಲೈಟ್ ಫೀಚರ್ಸ್‌ ಹೀಗಿವೆ

ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ರಿಯಲ್‌ಮಿ P4s ಲೈಟ್ ಮೊಬೈಲ್ 6.75 ಇಂಚಿನ HD+ ಡಿಸ್‌ಪ್ಲೇ ಪಡೆದಿದ್ದು ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್ ಹೊಂದಿದೆ. ಹಾಗೆಯೇ ಈ ಮೊಬೈಲ್‌ Unisoc T7250 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಹಾಗೆಯೇ ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಹಾಗೂ ಮಿಲಿಟರಿ-ದರ್ಜೆಯ ಶಾಕ್‌ ರೆಸಿಸ್ಟನ್ಸ್‌ (shock resistance) ಸಾಮರ್ಥ್ಯವನ್ನು ಹೊಂದಿದೆ.

ರಿಯಲ್‌ಮಿ P4s ಲೈಟ್ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 13MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು ಎರಡನೇ ಕ್ಯಾಮೆರಾ ಬೇಸಿಕ್‌ ಸೆನ್ಸಾರ್‌ ಸೌಲಭ್ಯ ಹೊಂದಿದೆ. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಮೊಬೈಲ್‌ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 15W ಚಾರ್ಜಿಂಗ್ ಬೆಂಬಲ ಸಹ ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಬಯೋಮೆಟ್ರಿಕ್‌ಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಸೌಲಭ್ಯಗಳನ್ನು ಹೊಂದಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :