realme P4s 5G
ರಿಯಲ್‌ಮಿ ಕಂಪನಿಯ P ಸರಣಿಯ ಕೆಲವು ಫೋನ್‌ಗಳು ಈಗಾಗಲೇ ಮಾರುಕಟ್ಟೆಯ ಮೂಲಕ ಗಮನ ಸೆಳೆದಿದೆ. ಇದರ ಮುಂದಿನ ಭಾಗವಾಗಿ ಕಂಪನಿಯು ಇದೀಗ Realme P4s ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ನಾಳೆ (ಆಗಷ್ಟ್ 26 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಬಿಡುಗಡೆ ಕುರಿತು ಈಗಾಗಲೇ ಫ್ಲಿಪ್‌ಕಾರ್ಟ್ ಇ ಕಾಮರ್ಸ್‌ನಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಅಂದಹಾಗೆ ನೂತನವಾಗಿ ಎಂಟ್ರಿ ಕೊಡಲಿರುವ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವುದು ಬಹುತೇಕ ಪಕ್ಕಾ ಆಗಿದೆ. ಇನ್ನು ಈ ಮೊಬೈಲ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಬಹುತೇಕ ಖಚಿತ ಆಗಿದೆ. ಹಾಗಾದರೆ ರಿಯಲ್‌ಮಿ P4s ಮೊಬೈಲ್‌ನ ಲಾಂಚ್ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಬಜೆಟ್ ಬೆಲೆಯ POCO C85 ಮೊಬೈಲ್‌ನ್ನು ಈಗ ಸಖತ್ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದು!
ರಿಯಲ್‌ಮಿ ಸಂಸ್ಥೆಯು ತನ್ನ ಹೊಸ ರಿಯಲ್‌ಮಿ P4s ಮೊಬೈಲ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಮಾಡಲು ತಯಾರಾಗಿದೆ. ಅಂದಹಾಗೆ ಈ ಮೊಬೈಲ್ ಇದೇ ಆಗಷ್ಟ್ 26 ರಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಮಾಡಲಿದೆ. ಈಗಾಗಲೇ ಅಮೆಜಾನ್‌ನಲ್ಲಿ ಈ ಮೊಬೈಲ್‌ಗಾಗಿ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಬಿಡುಗಡೆಯ ನಂತರ ಈ ಮೊಬೈಲ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಖರೀದಿಗೆ ಲಭ್ಯವಾಗಲಿವೆ ಎಂದು ಕಂಪನಿ ದೃಢಪಡಿಸಿದೆ. ಇನ್ನು ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿರಬಹುದು ಎನ್ನಲಾಗಿದೆ. ಹಾಗೆಯೇ ಇದು ಎರಡು ಆಕರ್ಷಕ ಬಣ್ಣದ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ.
ಮಾರುಕಟ್ಟೆಗೆ ಲಗ್ಗೆ ಇಡಲಿರುವ ರಿಯಲ್‌ಮಿ P4s ಫೋನ್ 6.78 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರುವ ನಿರೀಕ್ಷೆಯಿದೆ. ಹಾಗೆಯೇ ಈ ಮೊಬೈಲ್ 144Hz ರಿಫ್ರೆಶ್ ರೇಟ್ ಜೊತೆಗೆ 6,500 nits ವರೆಗಿನ ಬ್ರೈಟ್‌ನೆಸ್ ಸೌಲಭ್ಯ ಒಳಗೊಂಡಿರಬಹುದು. ಅಲ್ಲದೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ 5G ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ಹೈಪರ್‌ವಿಷನ್+ AI ಚಿಪ್ ಸಪೋರ್ಟ್ ಪಡೆದಿರುವ ಸಾಧ್ಯತೆಗಳು ಇವೆ.
ರಿಯಲ್‌ಮಿ P4s ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿರುವ ನಿರೀಕ್ಷೆಗಳು ಇವೆ. ಇನ್ನು ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ನಲ್ಲಿ ಇರಬಹುದು. ಇನ್ನು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಒದಗಿಸಬಹುದು ಎನ್ನಲಾಗಿದೆ. ಇನ್ನು ಈ ಮೊಬೈಲ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 80W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಹಾಗೆಯೇ ಧೂಳು ಮತ್ತು ನೀರು ನಿರೋಧಕ್ಕಾಗಿ ಇದು IP66, IP68 ಮತ್ತು IP69 ರೇಟಿಂಗ್ ಸೌಲಭ್ಯ ಹೊಂದಿರಲಿದೆ.