10,001mAh ಬ್ಯಾಟರಿ ಇರುವ Realme P4 Power 5G ಮೊಬೈಲ್‌ ಲಾಂಚ್‌! ಬೆಲೆ ಮತ್ತು ಫೀಚರ್ಸ್ ತಿಳಿಯಿರಿ

Updated on 29-Jan-2026
HIGHLIGHTS

Realme P4 Power 5G ಮೊಬೈಲ್ ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ

Realme P4 Power 5G ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ

Realme P4 Power 5G ಮೊಬೈಲ್‌ನ ಆರಂಭಿಕ ಬೆಲೆ 25,999 ರೂಗಳು ಆಗಿದೆ

Realme P4 Power 5G: ಚೀನಾ ಮೂಲಕ ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಭಾರತದಲ್ಲಿ ಇಂದು ತನ್ನ ನೂತನ Realme P4 Power 5G ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಫೋನ್‌ 10,001mAh ಸಿಲಿಕಾನ್ ಕಾರ್ಬನ್ ಟೈಟಾನ್ ಬ್ಯಾಟರಿ ಪವರ್‌ ಪಡೆದಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗೆಯೇ ಈ ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಜೊತೆಗೆ 144Hz ವರೆಗೆ ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿರುವುದು ಪ್ಲಸ್‌ ಪಾಯಿಂಟ್‌ ಆಗಿದೆ. Realme P4 Power 5G ಮೊಬೈಲ್‌ನ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Jio ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಸಿಗುತ್ತೆ 84 ದಿನಗಳ ವ್ಯಾಲಿಡಿಟಿ, 168GB ಡೇಟಾ ಸೌಲಭ್ಯ!

Realme P4 Power 5G ಮೊಬೈಲ್ ಬೆಲೆ ಮತ್ತು ಲಭ್ಯತೆಯ ಮಾಹಿತಿ

Realme P4 Power 5G ಫೋನ್‌ ದೇಶಿಯ ಮಾರುಕಟ್ಟೆಗೆ ಮೂರು ವೇರಿಯಂಟ್‌ ಆಯ್ಕೆಯಲ್ಲಿ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ ಆರಂಭಿಕ 8GB RAM +128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 25,999 ರೂಗಳು ಆಗಿದೆ. ಹಾಗೆಯೇ ಇದರ 8GB + 256GB ಸ್ಟೋರೇಜ್‌ ವೇರಿಯಂಟ್‌ 27,999 ರೂಗಳ ಬೆಲೆಯಲ್ಲಿ ಲಭ್ಯ. ಅಲ್ಲದೇ 12GB + 256GB ಸ್ಟೋರೇಜ್‌ ವೇರಿಯಂಟ್‌ ದರವು 30,999 ರೂಗಳು ಆಗಿದೆ. ಈ ಫೋನ್‌ ಟ್ರಾನ್ಸ್‌ಸಿಲ್ವರ್, ಟ್ರಾನ್ಸ್‌ಆರೆಂಜ್ ಮತ್ತು ಟ್ರಾನ್ಸ್‌ಬ್ಲೂ ಬಣ್ಣಗಳಲ್ಲಿ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿವೆ. ಸಂಸ್ಥೆಯು ಈ ಫೋನಿಗೆ 2,000 ರೂಗಳ ಬ್ಯಾಂಕ್ ರಿಯಾಯಿತಿ, 6 ತಿಂಗಳ no-cost EMI ಮತ್ತು 1,000 ರೂಗಳ ಎಕ್ಸ್‌ಚೇಂಜ್ ಕೊಡುಗೆಯನ್ನು ನೀಡುತ್ತಿದೆ. ಅಂದಹಾಗೆ ಈ ಮೊಬೈಲ್ ಇದೇ ಫೆಬ್ರವರಿ 5 ರಂದು ಮಧ್ಯಾಹ್ನ 12 ಗಂಟೆಗೆ realme.com, Flipkart ಮತ್ತು ರಿಟೇಲ್‌ ಸ್ಟೋರ್‌ಗಳ ಮೂಲಕ ಸೇಲ್ ಶುರು ಮಾಡಲಿದೆ.

Realme P4 Power 5G ಮೊಬೈಲ್‌ ಫೀಚರ್ಸ್‌ ಹೀಗಿವೆ

Realme P4 Power 5G ಫೋನ್‌ 6.8 ಇಂಚಿನ 1.5K 4D ಕರ್ವ್+ ಹೈಪರ್‌ಗ್ಲೋ ಡಿಸ್‌ಪ್ಲೇ ಪಡೆದಿದೆ. ಇದರ ಸ್ಕ್ರೀನ್‌ 144Hz ವರೆಗೆ ರಿಫ್ರೆಶ್ ರೇಟ್‌ ಜೊತೆಗೆ 6,500 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್‌ MediaTek Dimensity 7400 Ultra ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದ್ದು ಅಲ್ಲದೇ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ ಯುಐ 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ Realme P4 ಪವರ್ 5G ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾವು ಸೋನಿ IMX882 ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಸೌಲಭ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೇ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು 4K/30fps ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ದೈತ್ಯ 10,001mAh ಬ್ಯಾಟರಿ ಸಪೋರ್ಟ್‌

ನೂತನ Realme P4 Power 5G ಮೊಬೈಲ್‌ ಪ್ರಮುಖ ಹೈಲೈಟ್‌ ಎಂದರೆ ಅದರ ಬ್ಯಾಟರಿ ಆಗಿದೆ. ಇದು 10,001mAh ಸಿಲಿಕಾನ್ ಕಾರ್ಬನ್ ಟೈಟಾನ್ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿದೆ. ಈ ಬ್ಯಾಟರಿಯು 32.5 ಗಂಟೆಗಳ ವರೆಗೆ ವೀಡಿಯೊ ಪ್ಲೇಬ್ಯಾಕ್, 932.6 ಗಂಟೆಗಳ ವರೆಗೆ ಸ್ಟ್ಯಾಂಡ್‌ಬೈ, 185.7 ಗಂಟೆಗಳ ವರೆಗೆ Spotify ಮ್ಯೂಸಿಕ್ ಪ್ಲೇಬ್ಯಾಕ್ ನೀಡಲಿದೆ. ಹಾಗೆಯೇ ಇದು ಒಂದೇ ಚಾರ್ಜ್‌ನಲ್ಲಿ 11.7 ಗಂಟೆಗಳ ವರೆಗೆ ಬ್ಯಾಟಲ್‌ಗ್ರೌಂಡ್ ಮೊಬೈಲ್ ಇಂಡಿಯಾ ಗೇಮ್‌ಪ್ಲೇ ಅನ್ನು ಒದಗಿಸಬಲ್ಲದು ಎಂದು ಹೇಳಲಾಗಿದೆ. ಇನ್ನು ಈ ಬಿಗ್‌ ಬ್ಯಾಟರಿಗೆ ಪೂರಕವಾಗಿ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 27W ವೈರ್ಡ್ ರಿವರ್ಸ್ ಚಾರ್ಜಿಂಗ್ ವ್ಯವಸ್ಥೆ ಸಹ ನೀಡಲಾಗಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್‌ ಸೌಲಭ್ಯ ಒಳಗೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :