Realme ಮೊಬೈಲ್ ಕಂಪನಿಯ ನೂತನ Realme P4 Lite ಸ್ಮಾರ್ಟ್‌ಫೋನ್ ನಾಳೆ (ಫೆಬ್ರವರಿ 20 ರಂದು) ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಅಂದಹಾಗೆ ರಿಯಲ್‌ಮಿ ಮೊಬೈಲ್ ಕಂಪನಿಯು ಪರಿಚಯಿಸುತ್ತಿರುವ Realme P4 Lite ಸ್ಮಾರ್ಟ್‌ಫೋನ್ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಎಂಟ್ರಿ ಆಗುವ ಸಾಧ್ಯತೆಗಳು ಇವೆ. Realme P4 Lite ಫೋನ್ ಲಾಂಚ್ ಬಗ್ಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಪೇಜ್ ತೆರೆಯಲಾಗಿದೆ. ನಾಳೆ ಲಗ್ಗೆ ಇಡಲಿರುವ ಈ ಮೊಬೈಲ್ ಆಕ್ಟಾ ಕೋರ್ 12nm ಚಿಪ್‌ಸೆಟ್ ಪ್ರೊಸೆಸರ್ ಜೊತೆಗೆ 6,300mAh ಬ್ಯಾಟರಿ ಅನ್ನು ಒಳಗೊಂಡಿರುವುದು ಪಕ್ಕಾ ಎಂದು ಹೇಳಲಾಗಿದೆ. ಅಲ್ಲದೇ ಈ ಫೋನ್ ಮೂರು ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ. ಹಾಗಾದರೆ Realme P4 Lite ಮೊಬೈಲ್‌ನ ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Xiaomi ಯಿಂದ ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿ ಲಾಂಚ್; 75 ಇಂಚಿನ ಈ ಟಿವಿಯ ಬೆಲೆ ಹಾಗೂ ಫೀಚರ್ಸ್
ರಿಯಲ್‌ಮಿ ಕಂಪನಿಯ Realme P4 Lite ಮೊಬೈಲ್ ನಾಳೆ (ಫೆಬ್ರವರಿ 20 ರಂದು) ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಮೊಬೈಲ್‌ಗಾಗಿ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಸೈಟ್ ಕೂಡಾ ತೆರೆದಿದೆ. ಇನ್ನು ಈ ಫೋನ್ ಬೆಲೆ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗವಾಗಿಲ್ಲ. ಅದಾಗ್ಯೂ, Realme P4 Lite ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಂದಹಾಗೆ ಈ ಮೊಬೈಲ್ ಬೀಚ್ ಗೋಲ್ಡ್, ಅಬ್ಸಿಡಿಯನ್ ಬ್ಲ್ಯಾಕ್ ಮತ್ತು ಸೀ ಬ್ಲೂ ಫಿನಿಶ್ ಕಲರ್‌ಗಳ ಆಯ್ಕೆಯನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ.
Realme P4 Lite ಫೋನ್ 6.74 ಇಂಚಿನ ಐ ಕಂಫರ್ಟ್ ಡಿಸ್‌ಪ್ಲೇ ಅನ್ನು ಪಡೆದಿರುವ ಜೊತೆಗೆ 90Hz ರಿಫ್ರೆಶ್ ರೇಟ್ ಹಾಗೂ 180Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಇನ್ನು ಇದು ಸ್ಲಿಮ್ ಬೆಜೆಲ್ ರಚನೆ ಪಡೆದಿರುವ ಜೊತೆಗೆ ವಾಟರ್ ಡ್ರಾಪ್-ಶೈಲಿಯ ನಾಚ್ ವಿನ್ಯಾಸ ಅನ್ನು ಪಡೆದಿರಲಿದೆ. ಹಾಗೆಯೇ ಮುಂಬರುವ ಈ ಮೊಬೈಲ್ ಆಕ್ಟಾ ಕೋರ್ 12nm ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಬರುವ ಸಾಧ್ಯತೆಗಳು ಇವೆ ಹಾಗೆಯೇ ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI ಸಪೋರ್ಟ್ ಸಹ ಪಡೆದಿರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ 18GB ವರೆಗೆ ಡೈನಾಮಿಕ್ RAM ಮತ್ತು 128GB ವರೆಗೆ ಆಂತರಿಕ ಸ್ಟೋರೇಜ್ ಅನ್ನು ಸಪೋರ್ಟ್ ಮಾಡಬಹುದು.
ಹಾಗೆಯೇ Realme P4 Lite ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ AI ಕ್ಯಾಮೆರಾವನ್ನು ರಚನೆ ಪಡೆದಿರುತ್ತದೆ. ಹಾಗೆಯೇ ಇದು 6,300mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡರಲಿದ್ದು ಇದಕ್ಕೆ ಅನುಗುಣವಾಗಿ 15W ಫಾಸ್ಟ್ ಚಾರ್ಜಿಂಗ್ ಮತ್ತು 6W ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವುದು ಎಂದು ಹೇಳಲಾಗುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಎರಡು ದಿನಗಳವರೆಗೆ ಬ್ಯಾಕ್‌ಅಪ್ ಒದಗಿಸಲಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಅಲ್ಲದೇ ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಸೌಲಭ್ಯ ಒಳಗೊಂಡಿರಲಿದೆ.