10,001mAh ಬ್ಯಾಟರಿಯೊಂದಿಗೆ ಎಂಟ್ರಿ ಕೊಡಲಿದೆ Realme Narzo Power! 50MP ಸೋನಿ ಕ್ಯಾಮೆರಾ ಸಪೋರ್ಟ್‌

HIGHLIGHTS

ಮಾರ್ಚ್ 5 ರಂದು ಮಾರುಕಟ್ಟೆಗೆ ಬರಲಿದೆ ರಿಯಲ್‌ಮಿ ನಾರ್ಜೋ ಪವರ್‌ ಸ್ಮಾರ್ಟ್‌ಫೋನ್‌

ರಿಯಲ್‌ಮಿ ನಾರ್ಜೋ ಪವರ್‌ ಸ್ಮಾರ್ಟ್‌ಫೋನ್‌ 50MP ಸೋನಿ ಕ್ಯಾಮೆರಾ ಪಡೆದಿರಲಿದೆ

ಈ ಮೊಬೈಲ್‌ 80W ಫಾಸ್ಟ್‌ ಚಾರ್ಜಿಂಗ್‌ ಜೊತೆಗೆ 27W ರಿವರ್ಸ್ ಚಾರ್ಜಿಂಗ್ ಪಡೆದಿರಲಿದೆ

Realme Narzo Power: ರಿಯಲ್‌ಮಿ ಕಂಪನಿಯು ಇತ್ತೀಚೆಗೆ ಭಾರತದಲ್ಲಿ 10,001mAh ಬ್ಯಾಟರಿ ಸಾಮರ್ಥ್ಯದ ಫೋನ್‌ ಬಿಡುಗಡೆ ಮಾಡುವ ಮೂಲಕ ಸಂಚಲನ ಸೃಷ್ಠಿಸಿತ್ತು. ಇದೀಗ ಕಂಪನಿಯು ನಾರ್ಜೋ ಸರಣಿಯ ಹೊಸ ಫೋನ್‌ ಒಂದರಲ್ಲಿ ಮತ್ತೆ ಬಿಗ್‌ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತಿದೆ. ಅಂದಹಾಗೆ ರಿಯಲ್‌ಮಿ ಕಂಪನಿಯು ಮುಂಬರುವ ನೂತನ Realme Narzo Power ಮೊಬೈಲ್‌. ಸದ್ದಿಲ್ಲದೆ ರಿಯಲ್‌ಮಿ ಕಂಪನಿಯು ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮುಹೂರ್ತ ಫಿಕ್ಸ್‌ ಮಾಡಿದೆ. ಸದ್ಯದಲ್ಲೇ ಲಗ್ಗೆ ಇಡಲಿರುವ ಈ ಮೊಬೈಲ್‌ 50MP ಸೋನಿ IMX882 OIS ಕ್ಯಾಮೆರಾ ಒಳಗೊಂಡಿರಲಿದೆ. ಹಾಗೆಯೇ Mediatek Dimensity 7400 Ultra ಪ್ರೊಸೆಸರ್‌ ಸಾಮರ್ಥ್ಯ ಪಡೆದಿರುವುದು ಬಹುತೇಕ ಕನ್ಫರ್ಮ್ ಎನ್ನಲಾಗಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೋ ಪವರ್‌ ಸ್ಮಾರ್ಟ್‌ಫೋನ್‌ನ ಲಾಂಚ್‌ ಡೇಟ್, ಬೆಲೆ, ನಿರೀಕ್ಷಿತ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಶೀಘ್ರದಲ್ಲೇ iQOO Z11x ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ಮಾಹಿತಿ ನೋಡಿ

Realme Narzo Power ಮೊಬೈಲ್‌ ಲಾಂಚ್‌ ಮಾಹಿತಿ

ರಿಯಲ್‌ಮಿ ಸಂಸ್ಥೆಯು ರಿಯಲ್‌ಮಿ ನಾರ್ಜೋ ಪವರ್‌ ಮೊಬೈಲ್‌ ಇದೇ ಮಾರ್ಚ್‌ 5 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಇನ್ನು ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಮೂಲಕ ಲಾಂಚ್‌ ಆಗಲಿದೆ. ಈ ಫೋನ್‌ ಟೈಟಾನ್ ಸಿಲ್ವರ್ ಮತ್ತು ಟೈಟಾನ್ ಬ್ಲೂ ಬಣ್ಣದ ಆಯ್ಕೆಗಳನ್ನು ಪಡೆದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್‌ನ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.

ರಿಯಲ್‌ಮಿ ನಾರ್ಜೋ ಪವರ್‌ ನಿರೀಕ್ಷಿತ ಫೀಚರ್ಸ್‌

ರಿಯಲ್‌ಮಿಯ ಮುಂಬರುವ ರಿಯಲ್‌ಮಿ ನಾರ್ಜೋ ಪವರ್‌ ಫೋನ್‌ ಕಂಪನಿಯ ರಿಯಲ್‌ಮಿ P4 ಪವರ್‌ನ ರೀಬ್ರಾಂಡ್‌ ಮಾದರಿ ಎನ್ನಲಾಗುತ್ತದೆ. ಇನ್ನು ಈ ಮೊಬೈಲ್‌ 6,500 nits ಪೀಕ್ ಬ್ರೈಟ್‌ನೆಸ್, HRD 10+ ಮತ್ತು ನೆಟ್‌ಫ್ಲಿಕ್ಸ್ HRD ಜೊತೆಗೆ 144Hz ರಿಫ್ರೆಶ್‌ ರೇಟ್‌ ಹೈಪರ್‌ಗ್ಲೋ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಅಲ್ಲದೇ ಈ ಫೋನ್‌ Meditek Dimensity 7400 Ultra ಮತ್ತು HyperVision+ AI ಚಿಪ್‌ ಪ್ರೊಸೆಸರ್‌ ಸಾಮರ್ಥ್ಯ ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ ಯುಐ 7.0 ನಲ್ಲಿ ರನ್‌ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹಾಗೆಯೇ ರಿಯಲ್‌ಮಿ ನಾರ್ಜೋ ಪವರ್‌ ಮೊಬೈಲ್‌ 50MP ಸೋನಿ IMX882 OIS ಕ್ಯಾಮೆರಾ ಜೊತೆಗೆ AI ಇನ್‌ಸ್ಟಂಟ್ ಕ್ಲಿಪ್, AI ಲೈಟ್‌ಮೀ ಮತ್ತು AI ಸ್ಟೈಲ್‌ಮೀ ನಂತಹ ಆಯ್ಕೆಗಳನ್ನು ಹೊಂದಿರುವುದು ಖಚಿತ ಎನ್ನಲಾಗಿದೆ. ಇನ್ನು ಈ ಫೋನ್ 10,001mAh ಬ್ಯಾಟರಿ ಸಪೋರ್ಟ್‌ ಜೊತೆಗೆ 80W ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿರಲಿದೆ. ಇದು 36 ನಿಮಿಷಗಳಲ್ಲಿ 50% ನಷ್ಟು ಬ್ಯಾಟರಿ ಭರ್ತಿ ಮಾಡಬಲ್ಲದು ಎಂದು ಹೇಳಲಾಗಿದೆ. ಇದರೊಂದಿಗೆ 27W ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡಲಿದೆ ಎನ್ನಲಾಗಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :