ರಿಯಲ್‌ಮಿ ಕಂಪನಿಯ Realme Narzo Power ಮೊಬೈಲ್ ನಿರೀಕ್ಷೆಯಂತೆ 10,001mAh ಬ್ಯಾಟರಿ ಬ್ಯಾಕ್‌ಅಪ್‌ನೊಂದಿಗೆ ಭಾರತದಲ್ಲಿ ಇಂದು (ಮಾರ್ಚ್ 5 ರಂದು) ಬಿಡುಗಡೆ ಆಗಿದೆ. ಈ ಹೊಸ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ 5G ಚಿಪ್‌ಸೆಟ್ ಪ್ರೊಸೆಸರ್ ಸಪೋರ್ಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 144Hz ರಿಫ್ರೆಶ್ ರೇಟ್ ಪಡೆದಿರುವುದು ಹೈಲೈಟ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಇದು 50 ಮೆಗಾಪಿಕ್ಸೆಲ್ ಸೋನಿ IMX882 ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಮೊಬೈಲ್ ಟೈಟಾನ್ ಸಿಲ್ವರ್ ಹಾಗೂ ಟೈಟಾನ್ ಬ್ಲೂ ಕಲರ್ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಹಾಗಾದರೇ ರಿಯಲ್‌ಮಿ ನಾರ್ಜೋ ಪವರ್ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ನಾಳೆಯಿಂದ Amazon ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಸೇಲ್ ಶುರು! ಭರ್ಜರಿ ಆಫರ್‌ಗಳ ಸುರಿಮಳೆ
ರಿಯಲ್‌ಮಿ ಕಂಪನಿಯ Realme Narzo Power ಮೊಬೈಲ್ ಎರಡು ವೇರಿಯಂಟ್ ಆಯ್ಕೆಗಳಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್ ವೇರಿಯಂಟ್ 27,999 ರೂಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 8GB RAM + 256GB ಸ್ಟೋರೇಜ್ ವೇರಿಯಂಟ್ ಮಾಡೆಲ್ 29,999 ರೂಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಲಾಂಚ್ ಕೊಡುಗೆಯಾಗಿ ಆರಂಭಿಕ 8GB RAM + 128GB ವೇರಿಯಂಟ್ ಅನ್ನು 23,999 ರೂಗಳ ರಿಯಾಯಿತಿ ಬೆಲೆಗೆ ಲಭ್ಯವಿರುತ್ತದೆ. ಹಾಗೆಯೇ 8GB RAM + 256GB ಟಾಪ್ ಎಂಡ್ ವೇರಿಯಂಟ್ 25,999 ರೂಗಳಿಗೆ ಖರೀದಿಗೆ ಲಭ್ಯವಿರಲಿದೆ. ಈ ಮೊಬೈಲ್ ಅಮೆಜಾನ್ ಮತ್ತು ರಿಯಲ್‌ಮಿ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿದೆ. ಇನ್ನು ಈ ಮೊಬೈಲ್ ಎರಡು ಬಣ್ಣಗಳ ಆಯ್ಕೆ ಪಡೆದಿದ್ದು ಅವುಗಳು ಕ್ರಮವಾಗಿ ಟೈಟಾನ್ ಸಿಲ್ವರ್ ಹಾಗೂ ಟೈಟಾನ್ ಬ್ಲೂ ಆಗಿವೆ.
ರಿಯಲ್‌ಮಿ ನಾರ್ಜೋ ಪವರ್ ಮೊಬೈಲ್ 6.8 ಇಂಚಿನ FHD+ 144Hz ಹೈಪರ್‌ಗ್ಲೋ 4D ಕರ್ವ್+ OLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 6500 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ Meditek Dimensity 7400 Ultra ಮತ್ತು HyperVision+ AI ಚಿಪ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ ಇದು 8GB RAM ಜೊತೆಗೆ 14GB ವರೆಗಿನ ವರ್ಚುವಲ್ RAM ಅನ್ನು ಸಪೋರ್ಟ್ ಮಾಡುತ್ತದೆ. ಪ್ರಮುಖ ಹೈಲೈಟ್‌ಯೆಂದರೆ ಇದು 10,001mAh ಬ್ಯಾಟರಿ ಸಪೋರ್ಟ್ ಜೊತೆಗೆ 80W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ. ಇದರೊಂದಿಗೆ 27W ರಿವರ್ಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಹಾಗೆಯೇ ರಿಯಲ್‌ಮಿ ನಾರ್ಜೋ ಪವರ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಆಗಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8MP ಅಲ್ಟ್ರಾ ವೈಡ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP IMX480 ಕ್ಯಾಮೆರಾ ಪಡೆದುಕೊಂಡಿದೆ. ಇದು 4K ರೆಸಲ್ಯೂಶನ್ ಕ್ವಾಲಿಟಿಯ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಈ ಮೊಬೈಲ್ ಆಂಡ್ರಾಯ್ಡ್ 16 ಓಎಸ್ ಜೊತೆಗೆ ರಿಯಲ್‌ಮಿ UI 7.0 ಸಪೋರ್ಟ್ ಪಡೆದುಕೊಂಡಿದೆ.