ಪ್ರಮುಖ ಮೊಬೈಲ್ ಬ್ರಾಂಡ್‌ಗಳ ಪೈಕಿ ಒಂದಾಗಿರುವ ರಿಯಲ್‌ಮಿ ಸಂಸ್ಥೆಯು ಹೊಸದಾಗಿ Realme Narzo 100x 5G ಸ್ಮಾರ್ಟ್‌ಫೋನ್ ಅನ್ನು ಇಂದು (ಜುಲೈ 15 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬಜೆಟ್ ರೇಂಜ್‌ನಲ್ಲಿ ಲಗ್ಗೆ ಇಟ್ಟಿರುವ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಪಡೆದುಕೊಂಡಿದೆ. ಅಲ್ಲದೇ ಈ ಫೋನ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿದೆ. ಈ ಫೋನ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಫ್ಲ್ಯಾಶ್ ಆರೆಂಜ್ ಕಲರ್ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಹಾಗಾದರೇ ರಿಯಲ್‌ಮಿ ನಾರ್ಜೋ 100x 5G ಸ್ಮಾರ್ಟ್‌ಫೋನ್ ಬೆಲೆ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Jio ಟೆಲಿಕಾಂನ ಈ ಬಜೆಟ್ ಪ್ಲಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಪ್ರಯೋಜನ ಖಚಿತ
ರಿಯಲ್‌ಮಿ ಕಂಪನಿಯ ರಿಯಲ್‌ಮಿ ನಾರ್ಜೋ 100x 5G ಮೊಬೈಲ್ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳದಿದೆ. ಈ ಮೊಬೈಲ್‌ನ 4GB RAM + 64GB ಸ್ಟೋರೇಜ್ ವೇರಿಯಂಟ್ 20,999 ರೂ.ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ 6GB + 128GB ಸ್ಟೋರೇಜ್ ವೇರಿಯಂಟ್ 22,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇನ್ನು 6GB + 256GB ಸ್ಟೋರೇಜ್ ವೇರಿಯಂಟ್ 24,999 ರೂ.ಗಳ ಪ್ರೈಸ್‌ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಫೋನ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಫ್ಲ್ಯಾಶ್ ಆರೆಂಜ್ ಕಲರ್ ಆಯ್ಕೆಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ. ಇನ್ನು ಈ ಫೋನ್ ಜುಲೈ 22 ರಂದು ಅಮೆಜಾನ್ ಇ ಕಾಮರ್ಸ್ ಹಾಗೂ ರಿಯಲ್‌ಮಿ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಬರಲಿದೆ.
ರಿಯಲ್‌ಮಿ ನಾರ್ಜೋ 100x 5G ಮೊಬೈಲ್ 6.8 ಇಂಚಿನ HD+ LCD ಪ್ಯಾನೆಲ್ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಜೊತೆಗೆ 1,200 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM + 64GB, 6GB + 256GB ಹಾಗೂ 6GB + 128GB ವೇರಿಯಂಟ್‌ಗಳ ಆಯ್ಕೆ ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ ಆಂಡ್ರಾಯ್ಡ್ 16 ಆಧಾರಿತ Realme UI 7.0 ನೊಂದಿಗೆ ಕಾರ್ಯನಿರ್ವಹಿಸಲಿದೆ.
ಹಾಗೆಯೇ ರಿಯಲ್‌ಮಿ ನಾರ್ಜೋ 100x 5G ಮೊಬೈಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಇದು 8,000mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಜೊತೆಗೆ 45W SuperVOOC ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.