ಅಗ್ಗದ ಬೆಲೆಯಲ್ಲಿ ಬರಲಿದೆ Realme Narzo 100 Lite 5G ಮೊಬೈಲ್‌! ಅಚ್ಚರಿ ಮೂಡಿಸಿದ ಫೀಚರ್ಸ್‌

HIGHLIGHTS

ರಿಯಲ್‌ಮಿ ನಾರ್ಜೊ 100 ಲೈಟ್ 5G ಇದೇ ಏಪ್ರಿಲ್‌ 14 ರಂದು ಬರಲಿದೆ

ರಿಯಲ್‌ಮಿಯ ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರಲಿದೆ

ಮುಂಬರುವ ಈ ಫೋನ್‌ ಥಂಡರ್ ಬ್ಲಾಕ್ ಮತ್ತು ಫ್ರಾಸ್ಟ್ ಸಿಲ್ವರ್ ಕಲರ್‌ ಆಯ್ಕೆ ಪಡೆದಿರಲಿದೆ

Realme Narzo 100 Lite 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಬಹುನಿರೀಕ್ಷಿತ ಈ ಮೊಬೈಲ್‌ ಇದೇ ಏಪ್ರಿಲ್‌ 14 ರಂದು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಮುಂಬರುವ ಈ ಮೊಬೈಲ್‌ನ ಕೆಲವು ಫೀಚರ್ಸ್‌ ಈಗಾಗಲೇ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಆಕರ್ಷಿಸಿವೆ. ಮುಖ್ಯವಾಗಿ ಈ ಸ್ಮಾರ್ಟ್‌ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಅಲ್ಲದೇ ಇದು ಪ್ರಮುಖ ಹೈಲೈಟ್‌ ಎನಿಸಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುವುದು ಖಚಿತ ಎನ್ನಲಾಗಿದೆ. ಹಾಗಾದರೆ ಮುಂಬರುವ ರಿಯಲ್‌ಮಿ ನಾರ್ಜೊ 100 ಲೈಟ್ 5G ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Google Pixel 9a ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌! ಬೆಲೆಯಲ್ಲಿ ಭರ್ಜರಿ ಇಳಿಕೆ

Realme Narzo 100 Lite 5G ಬಿಡುಗಡೆ ದಿನಾಂಕ

ರಿಯಲ್‌ಮಿ ಕಂಪನಿಯು ಎಂಟ್ರಿ ಲೆವೆಲ್‌ ಮಾದರಿಯಲ್ಲಿ ಹೊಸದಾಗಿ ರಿಯಲ್‌ಮಿ ನಾರ್ಜೊ 100 ಲೈಟ್ 5G ಲಾಂಚ್ ಮಾಡಲು ಸಕಲ ಸಜ್ಜಾಗಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ ಅನ್ನು ಇದೇ ಏಪ್ರಿಲ್‌ 14 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ. ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಲಾಂಚ್ ಬಳಿಕ ಅಮೆಜಾನ್, ರಿಯಲ್‌ಮಿ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟ ಪ್ರಾರಂಭಿಸಲಿದೆ. ಇನ್ನು ಈ ಫೋನ್‌ 10,000 ರೂ.ಗಳಿಂದ 12,000 ರೂ.ಗಳ ಬೆಲೆಯಲ್ಲಿ ಮಾರುಕಟ್ಟೆ ಲಗ್ಗೆ ಇಡಬಹುದು ಎಂದು ನಿರೀಕ್ಷಿಸಲಾಗಿದೆ. ಅಂದಹಾಗೆ ಈ ಫೋನ್‌ ಥಂಡರ್ ಬ್ಲಾಕ್ ಮತ್ತು ಫ್ರಾಸ್ಟ್ ಸಿಲ್ವರ್ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿರಲಿದೆ.

ರಿಯಲ್‌ಮಿ ನಾರ್ಜೊ 100 ಲೈಟ್ 5G ನಿರೀಕ್ಷಿತ ಫೀಚರ್ಸ್‌

ಹೊಸ ರಿಯಲ್‌ಮಿ ನಾರ್ಜೊ 100 ಲೈಟ್ 5G ಮೊಬೈಲ್‌ 6.8 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಇದರ ಸ್ಕ್ರೀನ್‌ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಜೊತೆಗೆ 900 nits ಬ್ರೈಟ್ನೆಸ್‌ ಬೆಂಬಲ ಹೊಂದಿರಲಿದೆ. ಅಲ್ಲದೇ ಇದು MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲ ಸಹ ಒಳಗೊಂಡಿರುವ ಸಾಧ್ಯತೆಗಳು ಇವೆ.

ಇನ್ನು ರಿಯಲ್‌ಮಿ ನಾರ್ಜೊ 100 ಲೈಟ್ 5G ಫೋನ್‌ ಹಿಂಭಾಗದಲ್ಲಿ 13MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಈ ಮೊಬೈಲ್‌ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ UI 7.0 ಸಪೋರ್ಟ್‌ ಪಡೆದುಕೊಂಡಿರಲಿದೆ. ಇದರೊಂದಿಗೆ AI ಎರೇಸರ್ 2.0 ಮತ್ತು AI ಕ್ಲಿಯರ್ ಫೇಸ್‌ನಂತಹ AI ಫೀಚರ್ಸ್‌ಗಳನ್ನು ಕೂಡಾ ಇದು ಪಡೆದುಕೊಂಡಿರಲಿದೆ. ಇದು ಮಾರುಕಟ್ಟೆಯಲ್ಲಿ ರೆಡ್ಮಿ 15C 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ F70e ನಂತಹ ಫೋನ್‌ಗಳಿಗೆ ಪೈಪೋಟಿ ನೀಡಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :