ನಾಳೆ Realme Narzo 100 Lite 5G ಮೊಬೈಲ್‌ ಲಾಂಚ್‌! 7,000mAh ಬ್ಯಾಟರಿ ಖಚಿತ

HIGHLIGHTS

ನಾಳೆ (ಏಪ್ರಿಲ್‌ 14 ರಿಂದ) ರಿಯಲ್‌ಮಿ ನಾರ್ಜೊ 100 ಲೈಟ್ 5G ಬಿಡುಗಡೆ

ರಿಯಲ್‌ಮಿ ನಾರ್ಜೊ 100 ಲೈಟ್ 5G ಫೋನ್‌ ಎರಡು ಕಲರ್‌ ಆಯ್ಕೆಯಲ್ಲಿ ಲಗ್ಗೆ ಇಡಲಿದೆ

ರಿಯಲ್‌ಮಿ ನಾರ್ಜೊ 100 ಲೈಟ್ 5G ಮೊಬೈಲ್‌ 7,000mAh ಬ್ಯಾಟರಿ ಒಳಗೊಂಡಿರಲಿದೆ

ಬಹುನಿರೀಕ್ಷಿತ Realme Narzo 100 Lite 5G ಸ್ಮಾರ್ಟ್‌ಫೋನ್ ಭಾರತದಲ್ಲಿ ನಾಳೆ (ಏಪ್ರಿಲ್‌ 14 ರಂದು) ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಮೊಬೈಲ್‌ ನಾರ್ಜೊ 100 ಸರಣಿಯ ಮೊದಲ ಸ್ಮಾರ್ಟ್‌ಫೋನ್‌ ಆಗಿರಲಿದೆ. ಲಾಂಚ್‌ ಕುರಿತಾಗಿ ಅಮೆಜಾನ್‌ ತಾಣದಲ್ಲಿ ಮೈಕ್ರೋಪೇಜ್‌ ತೆರೆಯಲಾಗಿದೆ. ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರುವುದು ಬಹುತೇಕ ಫಿಕ್ಸ್‌ ಎನ್ನಲಾಗಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ ಜೊತೆಗೆ 144Hz ರಿಫ್ರೆಶ್ ರೇಟ್‌ ಸೌಲಭ್ಯ ಒಳಗೊಂಡಿರುವುದು ಪಕ್ಕಾ ಎನ್ನಲಾಗಿದೆ. ಹಾಗಾದರೆ ಮುಂಬರುವ ರಿಯಲ್‌ಮಿ ನಾರ್ಜೊ 100 ಲೈಟ್ 5G ಮೊಬೈಲ್‌ನ ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಇಂದು ಮಾರುಕಟ್ಟೆಗೆ ಬರಲಿದೆ Redmi A7 Pro 5G ಮೊಬೈಲ್‌! ಬೆಲೆ ಹಾಗೂ ಫೀಚರ್ಸ್‌ ನೋಡಿ

Realme Narzo 100 Lite 5G ಮೊಬೈಲ್‌ನ ಲಾಂಚ್‌ ಮಾಹಿತಿ

ರಿಯಲ್‌ಮಿ ಕಂಪನಿಯು ಎಂಟ್ರಿ ಲೆವೆಲ್‌ನಲ್ಲಿ ಹೊಸದಾಗಿ ರಿಯಲ್‌ಮಿ ನಾರ್ಜೊ 100 ಲೈಟ್ 5G ಲಾಂಚ್‌ ಮಾಡಲು ಸಿದ್ಧವಾಗಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ ನಾಳೆ (ಏಪ್ರಿಲ್‌ 14 ರಂದು) ಭಾರತದ ಮಾರುಕಟ್ಟೆಗೆ ಅಧಿಕೃತವಾಗಿ ಪರಿಚಿತವಾಗಲಿದೆ. ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಈ ಫೋನಿನ ಕುರಿತ ಮೈಕ್ರೋಸೈಟ್ ತೆರೆಯಲಾಗಿದೆ. ಲಾಂಚ್ ಬಳಿಕ ಅಮೆಜಾನ್, ರಿಯಲ್‌ಮಿ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟ ಪ್ರಾರಂಭಿಸಲಿದೆ. ಇನ್ನು ಈ ಫೋನ್‌ ಬೆಲೆಯು 10,000 ರೂ.ಗಳಿಂದ 12,000 ರೂ.ಗಳ ಪ್ರೈಸ್‌ಟ್ಯಾಗ್‌ನೊಂದಿಗೆ ಎಂಟ್ರಿ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಅಂದಹಾಗೆ ಈ ಫೋನ್‌ ಥಂಡರ್ ಬ್ಲಾಕ್ ಮತ್ತು ಫ್ರಾಸ್ಟ್ ಸಿಲ್ವರ್ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿರಲಿದೆ.

ರಿಯಲ್‌ಮಿ ನಾರ್ಜೊ 100 ಲೈಟ್ 5G ಫೀಚರ್ಸ್‌

ನೂತನ ರಿಯಲ್‌ಮಿ ನಾರ್ಜೊ 100 ಲೈಟ್ 5G ಮೊಬೈಲ್‌ 6.8 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಗಳು ಇವೆ. ಹಾಗೆಯೇ ಇದರ ಸ್ಕ್ರೀನ್‌ 144Hz ರಿಫ್ರೆಶ್ ರೇಟ್‌ ಸಪೋರ್ಟ್‌ ಜೊತೆಗೆ 900 nits ಬ್ರೈಟ್ನೆಸ್‌ ಬೆಂಬಲ ಹೊಂದಿರಲಿದೆ. ಅಲ್ಲದೇ ಇದು MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಸಹ ಒಳಗೊಂಡಿರುವ ಸಾಧ್ಯತೆಗಳು ಇವೆ.

ಇನ್ನು ರಿಯಲ್‌ಮಿ ನಾರ್ಜೊ 100 ಲೈಟ್ 5G ಫೋನ್‌ ಹಿಂಭಾಗದಲ್ಲಿ 13MP ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಈ ಮೊಬೈಲ್‌ ಆಂಡ್ರಾಯ್ಡ್ 16 ಆಧಾರಿತ ರಿಯಲ್‌ಮಿ UI 7.0 ಸಪೋರ್ಟ್‌ ಪಡೆದುಕೊಂಡಿರಲಿದೆ. ಇದರೊಂದಿಗೆ AI ಎರೇಸರ್ 2.0 ಮತ್ತು AI ಕ್ಲಿಯರ್ ಫೇಸ್‌ನಂತಹ AI ಫೀಚರ್ಸ್‌ಗಳನ್ನು ಕೂಡಾ ಇದು ಪಡೆದುಕೊಂಡಿರಲಿದೆ. ಇದು ಮಾರುಕಟ್ಟೆಯಲ್ಲಿ ರೆಡ್ಮಿ 15C 5G, ಸ್ಯಾಮ್‌ಸಂಗ್ ಗ್ಯಾಲಕ್ಸಿ F70e ನಂತಹ ಫೋನ್‌ಗಳಿಗೆ ಪೈಪೋಟಿ ನೀಡಲಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :