ರಿಯಲ್‌ಮಿ ಮೊಬೈಲ್ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಗೆ ನೂತನವಾಗಿ Realme 16T 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ತಯಾರಿ ನಡೆಸಿದೆ. ಮುಂಬರುವ ಈ ಮೊಬೈಲ್ ಲಾಂಚ್ ಕುರಿತಾಗಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಸಹ ತೆರೆಯಲಾಗಿದೆ. ಅಂದಹಾಗೆ ಈ ಮೊಬೈಲ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿರಲಿದೆ. ಹಾಗೆಯೇ ಈ ಫೋನ್ ಸ್ಟಾರ್‌ಲೈಟ್ ಬ್ಲ್ಯಾಕ್, ಸ್ಟಾರ್‌ಲೈಟ್ ರೆಡ್ ಮತ್ತು ಬ್ಲೂ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹಾಗಾದರೆ ಮುಂಬರುವ ರಿಯಲ್‌ಮಿ 16T 5G ಮೊಬೈಲ್‌ನ ಲಾಂಚ್ ಡೇಟ್, ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Vi 751 ರೂ.ಗಳ ರೀಚಾರ್ಜ್ ಪ್ಲಾನ್ ಪ್ರಯೋಜನಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ
ರಿಯಲ್‌ಮಿ ಕಂಪನಿಯು ಹೊಸದಾಗಿ ರಿಯಲ್‌ಮಿ 16T 5G ಮೊಬೈಲ್ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಫೋನ್ ಇದೇ ಮೇ 22 ರಂದು ಮಧ್ಯಾಹ್ನ 12 ಗಂಟೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದು ಪಕ್ಕಾ ಆಗಿದೆ. ಈ ಕುರಿತು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋಪೇಜ್ ಲೈವ್ ಆಗಿದೆ. ಇನ್ನು ಈ ಫೋನ್ ಸ್ಟಾರ್‌ಲೈಟ್ ಬ್ಲ್ಯಾಕ್, ಸ್ಟಾರ್‌ಲೈಟ್ ರೆಡ್ ಮತ್ತು ಬ್ಲೂ ಕಲರ್ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ. ಫೋನ್‌ಗಳ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಕಂಪನಿಯು ಹೊರಹಾಕಿಲ್ಲ.
ಮುಂಬರುವ ಹೊಸ ರಿಯಲ್‌ಮಿ 16T 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿವೆ ಎನ್ನಲಾಗಿದೆ. ಅಲ್ಲದೇ ಈ ಮೊಬೈಲ್ 8GB RAM ಆಯ್ಕೆಯನ್ನು ಒಳಗೊಂಡಿರಲಿದ್ದು, ಇದರೊಂದಿಗೆ Android 16 OS ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಒಳಗೊಂಡಿರಲಿದ್ದು, ಎಲ್ಇಡಿ ಫ್ಲ್ಯಾಷ್ ಮತ್ತು ಸೆಲ್ಫಿ ಮಿರರ್ ಸಹ ಪಡೆದಿರಲಿದೆ.
8,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿರುತ್ತದೆ ಎಂದು ಫ್ಲಿಪ್‌ಕಾರ್ಟ್ ಮೂಲಕ ತಿಳಿದಿದೆ. ಹಾಗೆಯೇ ಈ ಫೋನ್ 45W ವೇಗದ ವೈರ್ಡ್ ಚಾರ್ಜಿಂಗ್, ಬೈಪಾಸ್ ಚಾರ್ಜಿಂಗ್ ಮತ್ತು ವೈರ್ಡ್ ರಿವರ್ಸ್ ಚಾರ್ಜಿಂಗ್ ಆಯ್ಕೆಗಳನ್ನು ಪಡೆದಿರಲಿದೆ ಎನ್ನಲಾಗಿದೆ. ಇನ್ನು ಈ ಮೊಬೈಲ್ ಒಂದೇ ಚಾರ್ಜ್‌ನಲ್ಲಿ ಮೂರು ದಿನಗಳ ಬಳಕೆ 14.3 ಗಂಟೆಗಳ ಗೇಮಿಂಗ್, 34 ಗಂಟೆಗಳ ಸಾಮಾಜಿಕ ಮಾಧ್ಯಮ ಸ್ಕ್ರೋಲಿಂಗ್ ಅಥವಾ 21.9 ಗಂಟೆಗಳ ನ್ಯಾವೀಗೇಶನ್ ನೀಡುತ್ತದೆ ಎಂದು ವರದಿಗಳಾಗಿವೆ.