POCO X8 Pro
ದೇಶಿಯ ಮಾರುಕಟ್ಟೆಗೆ ಪೊಕೊ ಕಂಪನಿಯು ಹೊಸದಾಗಿ ಪೊಕೊ X8 ಪ್ರೊ ಸರಣಿಯ ಬಿಡುಗಡೆ ಮಾಡಲು ತಯಾರಾಗಿದೆ. ಸಂಸ್ಥೆಯು ಈ ಸರಣಿಯನ್ನು ಇದೇ ಮಾರ್ಚ್ ತಿಂಗಳ ಮುಂದಿನ ವಾರದಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಅಂದಹಾಗೆ ಈ ಹೊಸ ಸರಣಿಯು POCO X8 Pro ಮತ್ತು POCO X8 Pro Max ಹೆಸರಿನ ಸ್ಮಾರ್ಟ್‌ಫೊನ್‌ಗಳನ್ನು ಒಳಗೊಂಡಿರಲಿದೆ. ಈ ಎರಡು ಸ್ಮಾರ್ಟ್‌ಫೋನ್ ಪೈಕಿ ಪೊಕೊ X8 ಪ್ರೊ ಮ್ಯಾಕ್ಸ್ ಮೊಬೈಲ್ ಹೆಚ್ಚು ಶಕ್ತಿಶಾಲಿ ಆಗಿರುವ ಸಾಧ್ಯತೆಗಳು ಇವೆ. ಹಾಗೆಯೇ ಪೊಕೊ X8 ಪ್ರೊ ಮ್ಯಾಕ್ಸ್ ಫೋನ್ MediaTek Dimensity 9500 ಪ್ರೊಸೆಸರ್ ಪಡೆದಿರುವ ಜೊತೆಗೆ 8,500mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿರುವ ನಿರೀಕ್ಷೆಗಳು ಇವೆ. ಅಂದಹಾಗೆ ಈ ಮೊಬೈಲ್ ಗೇಮರುಗಳಿಗಾಗಿ ಮತ್ತು ಪವರ್ ಬಳಕೆದಾರರಿಗೆ ಹೇಳಿ ಮಾಡಿಸಿದಂತಿದೆ. ಹಾಗಾದರೆ ಪೊಕೊ X8 ಪ್ರೊ ಸರಣಿಯ ಲಾಂಚ್ ಡೇಟ್, ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Amazon EPL 2026 ಸೇಲ್: Vivo X300 5G ಮೊಬೈಲ್ ಖರೀದಿಗೆ ಇದೇ ಬೆಸ್ಟ್ ಟೈಮ್
ಜನಪ್ರಿಯ ಪೊಕೊ ಮೊಬೈಲ್ ಕಂಪನಿಯು ಪೊಕೊ X8 ಪ್ರೊ ಮತ್ತು ಪೊಕೊ X8 ಪ್ರೊ ಮ್ಯಾಕ್ಸ್ ಮೊಬೈಲ್‌ಗಳನ್ನು ಲಾಂಚ್ ತಯಾರಿ ನಡೆಸಿದೆ. ಪೊಕೊ X8 ಪ್ರೊ ಸರಣಿಯು ಇದೇ ಮಾರ್ಚ್ 17 ರಂದು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಅಂದಹಾಗೆ ಪೊಕೊ ಕಂಪನಿಯು ತನ್ನ ಟೀಸರ್‌ನಲ್ಲಿ ಪೊಕೊ X8 ಪ್ರೊ ಮೊಬೈಲ್ ವೈಟ್ ಕಲರ್ ಆಯ್ಕೆ ಹಾಗೂ ಪೊಕೊ X8 ಪ್ರೊ ಮ್ಯಾಕ್ಸ್ ಮೊಬೈಲ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ತೋರಿಸಿದೆ. ಲಾಂಚ್ ಬಳಿಕ ಈ ಸರಣಿಯು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಮಾರಾಟವಾಗಲಿದೆ.
ಪೊಕೊ X8 ಪ್ರೊ ಫೋನ್ 6.59 ಇಂಚಿನ 1.5K 120Hz OLED ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿರಲಿದೆ. 50 ಮೆಗಾಪಿಕ್ಸೆಲ್ ಸೋನಿ IMX882 ಮುಖ್ಯ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಸೆಕೆಂಡರಿ ಕ್ಯಾಮೆರಾ ಪಡೆದಿರಲಿದೆ. ಇದರೊಂದಿಗೆ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಗಳು ಇವೆ. ಅದೇ ರೀತಿ 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ.
ಪೊಕೊ X8 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9500s SoC ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ ಇದು 6.83 ಇಂಚಿನ 1.5K OLED ಡಿಸ್‌ಪ್ಲೇ ಅನ್ನು ಪಡೆದಿರುವ ನಿರೀಕ್ಷೆಯಿದೆ. ಇನ್ನು ಈ ಫೋನ್ OIS ನೊಂದಿಗೆ 50 ಮೆಗಾಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಜೊತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಒಳಗೊಂಡಿರಲಿದೆ. ಹಾಗೆಯೇ 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 8,500mAh ಬ್ಯಾಟರಿಯನ್ನು ಒಳಗೊಂಡಿರಬಹುದು ಎನ್ನಲಾಗಿದೆ.